ವಿಜ್ಞಾನಿಗಳಾದ ಎಚ್ ಎಸ್‌ ಸಾವಿತ್ರಿ, ಕುಲಕರ್ಣಿಯವರಿಗೆ 2021ರ ವಿಜ್ಞಾನ ತಂತ್ರಜ್ಞಾನ ರಾಜ್ಯೋತ್ಸವ ಗೌರವ

rajyotsava

66ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರಕಟವಾಗಿರುವ 2021ರ ರಾಜ್ಯೋತ್ಸವ ಪ್ರಶಸ್ತಿಗೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರೊ ಎಚ್ ಎಸ್ ಸಾವಿತ್ರಿ ಮತ್ತು ಪ್ರೊ ಗಿರಿಧರ್ ಯು ಕುಲಕರ್ಣಿ ಪಾತ್ರರಾಗಿದ್ದಾರೆ.

ಬೆಂಗಳೂರಿನ ಜವಾಹರ್‌ ಲಾಲ್‌ ನೆಹರು ಉನ್ನತ ವೈಜ್ಞಾನಿಕ ಅನುಸಂಧಾನ ಕೇಂದ್ರದ ಅಧ್ಯಕ್ಷರಾದ ಪ್ರೊ ಗಿರಿಧರ್‌ ಯು ಕುಲಕರ್ಣಿ ನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ತಮ್ಮ ಸಂಶೋಧನೆ, ಅಧ್ಯಯನಗಳಿಗೆ ಹಲವು ಮಹತ್ವದ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಜೀವರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಸಾವಿತ್ರಿಯವರು ಈ ವಿಭಾಗದ ಮುಖ್ಯಸ್ಥರಾದ ಮೊದಲ ಮಹಿಳಾ ವಿಜ್ಞಾನಿಗಳು ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಸಸ್ಯಗಳ ವೈರಸ್‌ಗಳ ಕುರಿತು ಮಹತ್ವದ ಅಧ್ಯಯನ ನಡೆಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.