ಸಣ್ಣ ಅವಧಿಯ ವಿಡಿಯೋಗಳನ್ನು ಹಂಚಿಕೊಳ್ಳುವ ತಾಣವಾಗಿ ದೊಡ್ಡ ಅಲೆ ಎಬ್ಬಿಸಿದ ಟಿಕ್‌ಟಾಕ್, ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸುದ್ದಿ ಈಗಾಗಲೇ ಹುಬ್ಬೆರಿಸುವಂತೆ ಮಾಡಿತ್ತು. ಚೀನಾದಲ್ಲಿ ಈಗ ಬಿಡುಗಡೆಯಾಗಿದ್ದು ಫೋನ್ ಪ್ರಿಯರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ

ಟಿಕ್‌ಟಾಕ್ ಮೊಬೈಲ್ ಅಪ್ಲಿಕೇಷನ್ ನೀಡಿರುವ ಬೈಟ್‌ಡಾನ್ಸ್ ಸಂಸ್ಥೆ ತಮ್ಮ ಮೊತ್ತಮೊದಲ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ‘ಜಿಯಾಂಗೊ ಪ್ರೊ 3’ ಹೆಸರಿನ ಈ ಮಾಡೆಲ್ ಅತ್ಯುತ್ತಮ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿದೆ. ಸದ್ಯ ಇದು ಚೀನಾದಲ್ಲಿ ಮಾತ್ರ ಲಭ್ಯವಿದೆ.
ಹೋಮ್ ಸ್ಕ್ರೀನ್‌ನಿಂದಲೇ ನೇರ ಟಿಕ್‌ಟಾಕ್ ಬಳಸುವ ಅವಕಾಶಗಳಿರುವ ಈ ಫೋನ್ 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್, 8 ಜಿಬಿ ರ್ಯಾಮ್ ಮತ್ತು 256ಜಿಬಿ ಸ್ಟೋರೇಜ್ ಮತ್ತು 12 ಜಿಬಿ ರ್ಯಾಮ್ ಮತ್ತು 256ಜಿಬಿ ಸ್ಟೋರೇಜ್ ಇರುವ ಮೂರು ಭಿನ್ನ ಮಾಡೆಲ್‌ಗಳಲ್ಲಿ ಲಭ್ಯವಾಗುತ್ತಿದೆ.
6.39 ಇಂಚಿನ ಸ್ಕ್ರೀನ್, ಅಮೋಲೆಡ್ ಸ್ಕ್ರೀನ್, ಫಿಂಗರ್‌ಪ್ರಿಂಟ್ ಸ್ಕ್ಯಾನರ್, 48 ಮೆಗಾ ಪಿಕ್ಸೆಲ್, ಸೋನಿ ಐಎಂಎಕ್ಸ್ 586 ಪ್ರೈಮೇರಿ ಸೆನ್ಸಾರ್, 13 ಮೆಗಾ ಪಿಕ್ಸೆಲ್ ಅಲ್ಟ್ರ ವೈಡ್ ಸೆನ್ಸಾರ್, 8 ಮೆಗಾ ಪಿಕ್ಸೆಲ್ ಟೆಲಿಫೋಟೊ ಲೆನ್ಸ್, 5 ಮೆಗಾ ಪಿಕ್ಸೆಲ್ ಸೂಪರ್ ಮ್ಯಾಕ್ರೊ ಲೆನ್ಸ್, 20 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಈ ಫೋನಿನ ವಿಶೇಷ ಆಕರ್ಷಣೆಗಳು.
4000 ಎಂಎಎಚ್ ಬ್ಯಾಟರಿ, ಸ್ನ್ಯಾಪ್‌ಡ್ರ್ಯಾಗನ್ 855, ಆಂಡ್ರಾಯ್ಡ್ 9.0 ಅನ್ನು ಹೊಂದಿದ್ದು, ಇದರಲ್ಲಿರುವ ಟಿಕ್‌ಟಾಕ್ ಆಪ್‌ನಲ್ಲಿ 60 ಸೆಕೆಂಡ್‌ಗಳ ವಿಡಿಯೋ ರೆಕಾರ್ಡ್ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ.
ಮೂರು ಬಣ್ಣಗಳಲ್ಲಿ ಲಭ್ಯವಾಗಲಿರುವ ಈ ಫೋನ್ ಬೆಲೆ 29000 ದಿಂದ ಆರಂಭವಾಗುತ್ತದೆ. ಗರಿಷ್ಠ 32000 ರೂ.ಗಳಾಗಬಹುದು ಎಂದು ಅಂದಾಜಿಸಲಾಗಿದೆ. ಟಿಕ್‌ಟಾಕ್‌ನ ಅಭಿವೃದ್ಧಿಪಡಿಸಿದ ಆಪ್‌ಗಳೊಂದಿಗೆ ಬರುವ ಫೋನ್ ಅಭಿವೃದ್ಧಿ ಕೆಲಸಕ್ಕೆ ಬೈಟ್‌ಡಾನ್ಸ್ ಒಂದು ವರ್ಷ ಕಾಲ ಶ್ರಮಿಸಿದೆ ಎನ್ನಲಾಗಿದೆ.