ವಾಟ್ಸ್‌ಆಪ್‌ ಮೆಸೇಜ್‌ ಹೋಗುತ್ತಿಲ್ಲವೆ? ಫೇಸ್‌ಬುಕ್‌ ಪೋಸ್ಟ್‌ ಓಪನ್‌ ಆಗುತ್ತಿಲ್ಲವೆ? ಕಾರಣ ಇಲ್ಲಿದೆ

ಫೇಸ್‌ಬುಕ್‌ ಸಂಸ್ಥೆಯ ವಾಟ್ಸ್‌ಆಪ್‌, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಆಪ್‌ಗಳ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಜಾಗತಿಕವಾಗಿ ಬಳಕೆದಾರರು ಅನನುಕೂಲ ಅನುಭವಿಸುತ್ತಿದ್ದಾರೆ.

ಭಾರತೀಯ ಕಾಲಮಾನ 9 ಗಂಟೆಯಿಂದ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಡೊಮೈನ್‌ ನೇಮ್‌ ಸಿಸ್ಟಮ್‌ನಲ್ಲಿ ಆದ ಲೋಪವೇ ಇದ್ಕೆ ಕಾರಣವೆನ್ನಲಾಗಿದೆ. ಡಿಎನ್‌ಎಸ್‌f ಬಳಕೆದಾರರನ್ನು, ಅವರು ಉದ್ದೇಶಿಸಿದ ತಾಣಕ್ಕೆ ಒಯ್ಯುತ್ತದೆ. ಆದರೆ ಸರ್ವರ್‌ನಲ್ಲಿ ಆಗಿರಬಹುದಾದ ಲೋಪದಿಂದ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ.

ವಾಟ್ಸ್‌ಆಪ್‌ ಈಕುರಿತು ಟ್ವಿಟರ್‌ ಮೂಲಕ ಸ್ಪಷ್ಟನೆ ನೀಡಿದ್ದು, ‘ಕೆಲ ಬಳಕೆದಾರರು ವಾಟ್ಸ್‌ಆಪ್‌ ಬಳಸಲು ಸಮಸ್ಯೆಯಾಗುತ್ತಿದೆ ಎಂಬುದು ನಮಗೆ ತಿಳಿದಿದೆ. ನಾವು ಸಹಜ ಸ್ಥಿತಿಗೆ ಮರಳಿಸಲು ಶ್ರಮಿಸುತ್ತಿದ್ದೇವೆ. ಶೀಘ್ರದಲ್ಲೇ ಅಪ್‌ಡೇಟ್‌ ಕಳಿಸಲಾಗುವುದು. ನಿಮ್ಮ ತಾಳ್ಮೆಗೆ ಧನ್ಯವಾದಗಳು’ ಎಂದಿದೆ.

ಡೌನ್‌ಟ್ರ್ಯಾಕರ್‌.ಕಾಂ ಕಳೆದ ಎರಡು ಗಂಟೆಗಳಲ್ಲಿ ಜಾಗತಿಕವಾಗಿ 50000 ರಿಪೋರ್ಟ್‌ಗಳು ದಾಖಲಾಗಿರುವುದಾಗಿ ತಿಳಿಸಿದೆ. ಈ ಮೂರು ಜನಪ್ರಿಯ ಆಪ್‌ ಸೇವೆಯಲ್ಲಿ ವ್ಯತ್ಯಯವಾಗಿದ್ದನ್ನು ಅನೇಕರು ಮೀಮ್‌ಗಳ ಮೂಲಕ ವ್ಯಂಗ್ಯವಾಡಿದ್ದಾರೆ.

ಆದರೆ ಎಂದಿಗೂ ಬಳಕೆದಾರರ ಮಾಹಿತಿ ಸುರಕ್ಷತೆಯ ಬಗ್ಗೆ ಕಾಳಜಿ ಹೊಂದಿರುವ ಎಡ್ವರ್ಡ್‌ ಸ್ನೋಡೆನ್‌ ಟ್ವೀಟ್‌ನಲ್ಲಿ, ” ಫೇಸ್‌ಬುಕ್‌ ಮಾಲಿಕತ್ವದ ವಾಟ್ಸ್‌ ಆಪ್‌ ಏವೆಯಲ್ಲಿ ವ್ಯತ್ಯಾಸವಾಗಿರುವುದು ನಿಮಗೂ ಮತ್ತು ನಿಮ್ಮ ಸ್ನೇಹಿತರಿಗೂ ಇನ್ನಷ್ಟು ಖಾಸಗಿಯಾದ ಮತ್ತು ಲಾಭದ ಉದ್ದೇಶವಿಲ್ಲದ ಸಿಗ್ನಲ್‌ನಂತಹ( ಅಥವಾ ಅಂತಹ ನಿಮ್ಮ ಆಯ್ಕೆಯ ಯಾವುದೇ ಮುಕ್ತ ಆಪ್‌) ಬಳಸಿ. ಇದು ಉಚಿತ ಬದಲಿಸಲು 30 ಸೆಕೆಂಡ್‌ಗಳನ್ನುತೆಗೆದುಕೊಳ್ಳುತ್ತದೆ” ಎಂದಿದ್ದಾರೆ.

ಈ ಎರಡು ಗಂಟೆಗಳ ಅವಧಿಯಲ್ಲಿ #serverdown ಮತ್ತು #MarkZuckerberg ಹ್ಯಾಷ್‌ಟ್ಯಾಗ್‌ಗಳು ಅತ್ಯಂತ ಜನಪ್ರಿಯವಾಗಿದ್ದು 3 ಲಕ್ಷ ಟ್ವೀಟ್‌ಗಳು ಪ್ರಕಟವಾಗಿವೆ.

ಭಾರತದಲ್ಲಿ 41 ಕೋಟಿ ಫೇಸ್‌ಬುಕ್‌ ಬಳಕೆದಾರರು, 53 ಕೋಟಿ ವಾಟ್ಸ್‌ಆಪ್‌ ಬಳಕೆದಾರರು ಮತ್ತು 21 ಕೋಟಿ ಇನ್‌ಸ್ಟಾಗ್ರಾಮ್‌ ಬಳಕೆದಾರರಿದ್ದಾರೆ.

ವಾಟ್ಸ್‌ಆಪ್‌ ಖಾಸಗಿತನ ವಿಷಯದಲ್ಲಿ ತೆಗೆದುಕೊಂಡ ನಿಲುವಿನಿಂದಾಗಿ ಕಳೆದ ಫೆಬ್ರವರಿಯಲ್ಲಿ ಬಹುದೊಡ್ಡ ಸಂಖ್ಯೆಯ ಬಳಕೆದಾರರನ್ನು ಕಳೆದುಕೊಂಡಿತ್ತು. ಮಾಹಿತಿ ಸುರಕ್ಷತೆ, ಬಳಕೆದಾರರ ಗೌಪ್ಯತೆಯ ವಿಷಯದಲ್ಲಿ ಫೇಸ್‌ಬುಕ್‌ ನಿಯಮಗಳನ್ನುಸಡಿಲ ಮಾಡಿದ್ದು, ಬಳಕೆದಾರರಲ್ಲಿ ಭಯ ಹುಟ್ಟಿಸಿತು. ಈಗ ಸೇವೆಯಲ್ಲಿ ವ್ಯತ್ಯಯವಾಗಿರುವುದು ಅಂತಹದೇ ಆತಂಕಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.