ವೆಬ್‌ಸೈಟ್‌ಗಳು ನೋಟಿಫಿಕೇಷನ್‌ ಆಕ್ಸೆಸ್‌ ಕೇಳುವುದನ್ನು ತಡೆಯುವುದು ಹೇಗೆ?

ಈಗ ಎಲ್ಲ ಕಡೆಯಿಂದಲೂ ನೋಟಿಫಿಕೇಷನ್‌ಗಳ ಗದ್ದಲ, ಮೊದಲು ಬರೀ ಸ್ಮಾರ್ಟ್‌ಫೋನ್‌ಗಳಲ್ಲಿ ಕೇಳಿಸುತ್ತಿದ್ದ ಈ ಸದ್ದು ಈಗ ಡೆಸ್ಕ್‌ಟಾಪ್‌ಗಳಿಗೂ ಬಂದಿದೆ. ಹಾಗೇ ಮೊಬೈಲ್‌ ಅಪ್ಲಿಕೇಷನ್‌ಗಳ ಜೊತೆಗೆ ವೆಬ್‌ಸೈಟ್‌ಗಳು ನೋಟಿಫಿಕೇಷನ್‌ಗಳು ಕಳಿಸಲು ಆರಂಭಿಸಿವೆ. ಇದನ್ನು ತಡೆಯುವುದು ಹೇಗೆ?

“ನಮ್ಮ ವೆಬ್‌ಸೈಟ್‌ನಿಂದ ನೋಟಿಫಿಕೇಷನ್‌ ಸ್ವೀಕರಿಸಲು ಇಷ್ಟಪಡುತ್ತೀರಾ?”

ಈ ಸಂದೇಶ ಇತ್ತೀಚೆಗೆ ನೀವು ಭೇಟಿ ನೀಡುವ ಯಾವುದೇ ವೆಬ್‌ಸೈಟ್‌ನಿಂದ ನಿಮ್ಮ ಎದುರು ಪ್ರತ್ಯಕ್ಷವಾಗುತ್ತದೆ. ಅತ್ಯಂತ ಸೌಜನ್ಯಯುತವಾಗಿ ವಿನಂತಿ ಮಾಡಿಕೊಳ್ಳುವಂತೆ ಕಾಣುವ ಈ ಸಂದೇಶ ಪ್ರತಿ ಬಾರಿ ವೆಬ್‌ಸೈಟ್‌ಗೆ ಭೇಟಿ ನೀಡಿದಾಗಲೂ ಕಾಣಿಸಿಕೊಂಡು ಕಿರಿಕಿರಿ ಮಾಡುತ್ತದೆ.

ವೆಬ್‌ಸೈಟ್‌ನ ಪ್ರತಿ ಅಪ್‌ಡೇಟ್‌ ಅನ್ನುನಿಮ್ಮ ಡೆಸ್ಕ್‌ಟಾಪ್‌, ಲ್ಯಾಪ್‌ಟಾಪ್‌ ಸ್ಕ್ರೀನ್‌ ಮೇಲೆ ಎಸೆಯಲು ಅನುಮತಿ ಕೇಳುವುದೇ ಈ ‘ನೋಟಿಫಿಕೇಷನ್‌ ಆಕ್ಸೆಸ್‌ ರಿಕ್ವೆಸ್ಟ್‌’.
ಮೊಬೈಲ್‌ ಅಪ್ಲಿಕೇಷನ್‌ಗಳಲ್ಲಿ ಮಾತ್ರ ನೋಟಿಫಿಕೇಷನ್‌ಗಳ ಹಾವಳಿ ಇದೆ ಎಂದುಕೊಂಡ ನಮಗೆ ವೆಬ್‌ಸೈಟ್‌ಗಳಿಂದಲೂ ಇಂಥ ದಾಳಿ, ಕಿರಿಕಿರಿ ಮಾಡದೇ ಇರದು. ಇದನ್ನು ತಡೆಯುವುದಾದರೂ ಹೇಗೆ? ಇಲ್ಲಿವೆ ಟಿಪ್ಸ್‌:

ಕ್ರೋಮ್‌ ಬ್ರೌಸರ್‌ನಲ್ಲಿ ಬ್ಲಾಕ್‌ ಮಾಡುವುದು ಹೀಗೆ

  • ಬ್ರೌಸರ್‌ನ ಸೆಟ್ಟಿಂಗ್ಸ್‌ ಆಯ್ಕೆ ಮಾಡಿ
  • ಅಡ್ವಾನ್ಸ್ಡ್‌ ಸೆಟ್ಟಿಂಗ್ಸ್‌ ಆಯ್ಕೆ ಮಾಡಿ
  • ಇಲ್ಲಿ ಪ್ರೈವೇಸಿ ಅಂಡ್‌ ಸೆಕ್ಯುರಿಟಿಯಲ್ಲಿ ಸೈಟ್‌ ಸೆಟ್ಟಿಂಗ್ಸ್‌ ಮೇಲೆ ಕ್ಲಿಕ್‌ ಮಾಡಿ
  • ಇದರಲ್ಲಿ ನೋಟಿಫಿಕೇಷನ್ಸ್‌ ಮೇಲೆ ಕ್ಲಿಕ್‌ ಮಾಡಿದರೆ, ಅಲ್ಲಿ ಆಗಲೇ ‘ಆಸ್ಕ್‌ ಬಿಫೋರ್ ಸೆಂಡಿಂಗ್‌’ ಎಂಬ ಆಯ್ಕೆ ಡಿಫಾಲ್ಟ್‌ ಆಗಿರುತ್ತದೆ. ಅದರ ಬದಲಿಗೆ ಬ್ಲಾಕ್ಡ್ ಆಯ್ಕೆ ಮಾಡಿ.

ಫೈರ್‌ಫಾಕ್ಸ್‌ ಬ್ರೌಸರ್‌ನಲ್ಲಿ ಬ್ಲಾಕ್‌ ಮಾಡುವುದು ಹೀಗೆ

  • ಮೊದಲು ಬ್ರೌಸರ್‌ನಲ್ಲಿರುವ ಆಪ್ಷನ್‌ ಆಯ್ಕೆ ಮಾಡಿ
  • ಅದರಲ್ಲಿ ಪ್ರೈವೇಸಿ ಅಂಡ್‌ ಸೆಕ್ಯುರಿಟಿ ಕ್ಲಿಕ್‌ ಮಾಡಿದರೆ ಪರ್ಮಿಷನ್‌ ಟ್ಯಾಬ್‌ ಅಡಿಯಲ್ಲಿ ನೋಟಿಫಿಕೇಷನ್ಸ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ.
  • ನೋಟಿಫಿಕೇಷನ್ಸ್‌ ಪಕ್ಕದಲ್ಲಿರುವ ಸೆಟ್ಟಿಂಗ್ಸ್‌ ಮೇಲೆ ಕ್ಲಿಕ್‌ ಮಾಡಿದರೆ, ಅಲ್ಲಿ ಬ್ಲಾಕ್‌ ನ್ಯೂ ರಿಕ್ವೆಸ್ಟ್ಸ್‌ ಆಸ್ಕಿಂಗ್‌ ಟು ಅಲೋ ನೋಟಿಫಿಕೇಷನ್ಸ್‌ ಎಂದಿರುತ್ತದೆ. ಅದನ್ನು ಆಯ್ಕೆ ಮಾಡಿ, ಈ ಬದಲಾವಣೆಯನ್ನು ಸೇವ್ ಮಾಡಿ.

ನೋಟಿಫಿಕೇಷನ್‌ ಆಕ್ಸೆಸ್‌ ಹಾವಳಿನಿಂದ ಮುಕ್ತಿ ಸಿಗುತ್ತದೆ!

%d bloggers like this: