ಸದ್ಯ ರಾಜ್ಯದಲ್ಲಿ ಡ್ರೋನ್ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲರಿಗೂ ಡ್ರೋನ್ ಹೇಗೆ ಕಾರ್ಯನಿರ್ವಹಿಸಲಿದೆ? ಅದನ್ನು ತಯಾರಿಸುವುದು ಹೇಗೆ? ಎಂಬ ಹಲವು ವಿಷಯಗಳ ಕುರಿತಂತೆ ಕುತೂಹಲ ಹೆಚ್ಚಾಗಿದೆ.
ಈ ಹಿನ್ನಲೆಯಲ್ಲಿ ನೀವು ಸಹ ನಿಮ್ಮದೇ ಡ್ರೋನ್ ಅನ್ನು ಸುಲಭವಾಗಿ ತಯಾರು ಮಾಡಿಕೊಳ್ಳಬಹುದು ಅದೇನು ದೊಡ್ಡ ಕೆಲಸವಲ್ಲ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ನಾವೇ ಡ್ರೋನ್ ತಯಾರಿ ಮಾಡಲು ಬೇಕಾಗಿರುವ ಎಲ್ಲ ಬಿಡಿಭಾಗಗಳು ದೊರೆಯುವುದರಿಂದ ಸುಲಭವಾಗಿ ಕೊಂಚ ತಲೆ ಓಡಿಸಿದರೆ ಡ್ರೋನ್ ನಿರ್ಮಾಣ ಮಾಡಿ ಹಾರಿಸಬಹುದಾಗಿದೆ. ಅದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.
ಈಗಾಗಲೇ ಯೂಟ್ಯೂಬ್‌ನಲ್ಲಿ ಹಲವಾರು ಮಾದರಿಯ ಡ್ರೋನ್ ಮಾಡುವ ವಿಡಿಯೋಗಳು ಲಭ್ಯವಿದ್ದು, ಅದರಲ್ಲಿ ಸುಲಭವಾಗಿರುವ ವಿಡಿಯೋವನ್ನು ನಿಮಗೆ ತೋರಿಸಲಿದ್ದೇವೆ. ಅದರಲ್ಲಿ ತೋರಿಸಿರುವ ಮಾದರಿಯಲ್ಲಿ ನಿಮ್ಮದೇ ಡ್ರೋನ್ ಮಾಡಿಕೊಂಡು ಹಾರಿಸಬಹುದಾಗಿದೆ. ಕೆಳಗೆ ಬೇಕಾಗಿರುವ ವಸ್ತುಗಳ ಪಟ್ಟಿಯನ್ನ ನೀಡಲಾಗಿದೆ.
ನಿಮಗೆ ಅಗತ್ಯವಿರುವ ವಸ್ತುಗಳ ಪಟ್ಟಿ ಇಲ್ಲಿದೆ:
- ಫ್ರೇಮ್ಸ್
- ಮೋಟಾರ್ಸ್
- ಎಲೆಕ್ಟ್ರಾನಿಕ್ ಸ್ಪೀಡ್ ಕಂಟ್ರೋಲರ್ (ಇಎಸ್ಸಿ)
- ಪ್ರೊಪೆಲ್ಲರ್‌ಗಳು
- ಕನೆಕ್ಟರ್ಸ್
- AWG ಸಿಲಿಕೋನ್ ವೈರ್‌ಗಳು
- ಪವರ್ ಡಿಸ್ಟ್ರೂಬ್ಯಷನ್ ಬ್ರೋರ್ಡ್
- ಬ್ಯಾಟರಿಗಳು
- ಸರ್ವೋ ಸೀಸದ ಕೇಬಲ್‌ಗಳು
- ಬ್ಯಾಟರಿ ಮಾನಿಟರ್
- ಮೌಂಟಿಗ್ ಪ್ಯಾಡ್
- ಥ್ರೆಡ್ ಲಾಕಿಂಗ್ ಕಂಪೋನೆಂಟ್ಸ್
- ನಿಯಂತ್ರಕ
- ಆರ್ಸಿ ರಿಸೀವರ್
- ಕ್ಯಾಮೆರಾ
- ಗಿಂಬಾಲ್ (ಕ್ಯಾಮರಾಕ್ಕಾಗಿ)
- ಯುಎಸ್ಬಿ ಕೀ
- ಬ್ಯಾಟರಿ ಚಾರ್ಜರ್
- 3 ಎಂ ಕಮಾಂಡ್ ಸ್ಟ್ರಿಪ್
- ಜಿಪ್ ಟೈಸ್
ಇವುಗಳನ್ನು ನೀವು ಖರೀದಿ ಮಾಡಿದರೆ ಡ್ರೋನ್ ಮಾಡುವುದು ಹೇಗೆ ಎಂಬುದನ್ನು ನಿಮಗೆ ವಿಡಿಯೋ ತಿಳಿಸಲಿದೆ.