ಇಂಟರ್ನೆಟ್ ಇಲ್ಲದೇ PUBG ಇನ್ಸ್ಟಾಲ್ ಮಾಡುವುದು ಹೇಗೆ ಗೊತ್ತಾ?

ಕರೋನಾ ಹೆಚ್ಚಾಗಿರುವ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್ ಗೇಮಿಂಗ್‌ ಸಂಖ್ಯೆಯೂ ತೀರಾ ಹೆಚ್ಚಾಗಿದೆ. ಪ್ರತಿಯೊಬ್ಬರು ಮನೆಯಲ್ಲಿಯೇ ಕುಳಿತಿರುವ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಟೈಮ್‌ ಪಾಸ್ ಮಾಡುವುದು ಅಧಿಕ. ಹಾಗಾಗಿ ಇಂಟರ್ನೆಟ್ ಅನ್ನು ಅಳೆದು ತೂಗಿ ಬಳಕೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇಂಟರ್ನೆಟ್ ಇಲ್ಲದೇ PUBG ಇನ್ಸ್ಟಾಲ್ ಮಾಡುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಇಂಟರ್ನೆಟ್ ಸಹಾಯವಿಲ್ಲದೇ ದೊಡ್ಡ ಗೇಮ್‌ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವುದು ಹೇಗೆ ಎಂದಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ. ಪಬ್ಜಿ ಮಾದರಿಯ ಗೇಮ್‌ಗಳು ಇಂಟರ್ನೆಟ್ ಇಲ್ಲದೇ ಡೌನ್‌ಲೋಡ್ ಮಾಡುವುದು ಸುಲಭವಲ್ಲ, ಅಲ್ಲದೇ ಅದಕ್ಕಾಗಿ GB ಗಟ್ಟಲೇ ಡೇಟಾ ಬೇಕಾಗುತ್ತದೆ. ಅದರಲ್ಲಿಯೂ ಪಬ್ಜಿ 1.8 GB ಗಾತ್ರದಲ್ಲಿದೆ. ಈ ಹಿನ್ನಲೆಯಲ್ಲಿ ನೀವು ಇಂಟರ್ನೆಟ್ ಇಲ್ಲದೇಯೇ ಈ ಗೇಮ್‌ಗಳನ್ನು ಬಳಕೆ ಮಾಡುವುದನ್ನು ತಿಳಿಸಿಕೊಡಲಿದ್ದೇವೆ.

ಇದನ್ನು ನೋಡಿ: ಜೊತೆಯಾಗಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ನಿರ್ಮಿಸಲಿವೆ ಜಿಯೋ-ಗೂಗಲ್: ಅಂಬಾನಿ ಕೈಗೆ ರೂ. 33,737 ಕೋಟಿ ಇಟ್ಟ ಗೂಗಲ್..!

ಸದ್ಯ ನಾವು ಹೇಳಿಕೊಡಲಿರುವ ಟ್ರಿಕ್ ಕೇವಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವೇ ವರ್ಕ್ ಆಗಲಿದೆ. ಆಪಲ್ ಫೋನ್‌ಗಳಲ್ಲಿ ಇದು ಸಾಧ್ಯವಿಲ್ಲ.

ಮೊದಲನೇಯದಾಗಿ ನಿಮ್ಮ ಸ್ನೇಹಿತರೊಬ್ಬರು ಪಬ್ಜಿ ಗೇಮ್ ಅನ್ನು ಸಂಪೂರ್ಣವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಇದಾದ ನಂತರದಲ್ಲಿ ನೀವು ಮತ್ತು ನಿಮ್ಮ ಸ್ನೇಹಿತ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗಿದೆ.

 • ಫೈಲ್ ವರ್ಗಾವಣೆ ಮಾಡುವಂತ ಆಪ್‌ವೊಂದನ್ನು ನೀವು ಮತ್ತು ನಿಮ್ಮ ಸ್ನೇಹಿತರಿಬ್ಬರು ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.
 • ಇದಾದ ನಂತರದಲ್ಲಿ ನಿಮ್ಮ ಸ್ನೇಹಿತನ ಮೊಬೈಲ್‌ನಿಂದ  PUBG ಅಥವಾ ಇನ್ನಾವುದೇ ಆಟದ APK ಫೈಲ್ ಅನ್ನು ನಿಮ್ಮ ಫೋನ್‌ಗೆ ವರ್ಗಾಯಿಸಿಕೊಳ್ಳಿ ಮತ್ತು ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ.
 • ನಂತರ, ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಥಳೀಯ ಫೋಲ್ಡರ್‌ಗಳನ್ನು ಓಪನ್ ಮಾಡುವ ಸಲುವಾಗಿ ಆನ್‌ಲೈನ್ ಫೈಲ್‌ಗಳನ್ನು ಹುಡುಕಲು ಪ್ರಯತ್ನಿಸಿ.
 • ಅಪ್ಲಿಕೇಶನ್ ನಿಮಗೆ ಆನ್‌ಲೈನ್ ಫೈಲ್‌ಗಳನ್ನು ಕಂಡು ಡೌನ್‌ಲೋಡ್ ಮಾಡಲು ಶುರು ಮಾಡಿದಾಗ ಆಪ್‌ ಅನ್ನು ಕ್ಲೋಸ್ ಮಾಡಿ.
 • ಮುಂದೆ, ನಿಮ್ಮ ಮೊಬೈಲ್‌ಗೆ ಸ್ನೇಹಿತ ಮೊಬೈಲ್‌ನಿಂದ obb  ಫೈಲ್‌ಗಳನ್ನು ಕಳುಹಿಸಿಕೊಳ್ಳಿ.
 • ಇವುಗಳನ್ನು ಹುಡುಕಲು ಫೈಲ್‌ಗಳಿಗೆ ಹೋಗಿ, ಆಂಡ್ರಾಯ್ಡ್ ಫೋಲ್ಡರ್‌ನಲ್ಲಿ ಕ್ಲಿಕ್ ಮಾಡಿ ನಂತರ ಆಬ್ ಫೋಲ್ಡರ್‌ನಲ್ಲಿ ಕ್ಲಿಕ್ ಮಾಡಿ.
 • ಇಲ್ಲಿ ನೀವು ‘com.tencent.ig’ ಶೀರ್ಷಿಕೆಯ ಫೋಲ್ಡರ್ ತೆರೆಯಿರಿ ಮತ್ತು ‘main.11460.comtencent.ig.obb’ ಫೈಲ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ನಿಮ್ಮ ಫೋನ್‌ಗೆ ಕಳುಹಿಸಿ. ನಿಮ್ಮ ಸ್ನೇಹಿತ ಹೊಂದಿರುವ ಆಟದ ಆವೃತ್ತಿಯನ್ನು ಅವಲಂಬಿಸಿ ಈ ಫೈಲ್ ಹೆಸರು ಬದಲಾಗುತ್ತದೆ.
 • obb ಫೈಲ್‌ಗಳನ್ನು ವರ್ಗಾಯಿಸಿದ ನಂತರ, ನೀವು ಅದನ್ನು ನಿಮ್ಮ ಸ್ಮಾರ್ಟ್‌ಫೋನಿಲ್ಲಿ “com.tencent.ig” ಫೋಲ್ಡರ್ ವರ್ಗಾಯಿಸಬೇಕಾಗುತ್ತದೆ.
 • ಈಗ ನಿಮ್ಮ ಫೈಲ್ ಮ್ಯಾನೇಜರ್‌ಗೆ ಹೋಗಿ ಮತ್ತು ನಿಮ್ಮ ಸ್ನೇಹಿತನ ಫೋನ್‌ನಿಂದ ನೀವು ವರ್ಗಾವಣೆ ಮಾಡಿದ obb ಡೇಟಾ ಮತ್ತು ಆಟದ ಫೋಲ್ಡರ್ ಅನ್ನು ಬದಲಾಯಿಸಿ.
 • ಇದೀಗ PUBG ಮೊಬೈಲ್ ತೆರೆಯಿರಿ ಮತ್ತು ಅಗತ್ಯ ಅನುಮತಿಗಳನ್ನು ನೀಡಿ ಮತ್ತು ಲಾಗಿನ್ ಮಾಡುವ ಮೂಲಕ ಆಟವನ್ನು ಈಗ ಹೊಂದಿಸಿ.
 • ನಾವು ಮೊದಲೇ ಹೇಳಿದಂತೆ, ಕಾಲ್ ಆಫ್ ಡ್ಯೂಟಿಯಂತಹ ಇತರ ಆಟಗಳೊಂದಿಗೆ ನೀವು ಈ ಹ್ಯಾಕ್ ಅನ್ನು ಪ್ರಯತ್ನಿಸಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.