ಟ್ವಿಟರ್‌ನಲ್ಲಿ ಅನಗತ್ಯವಾದ ಫೀಡ್ ಹಾಗೂ ನೋಟಿಫಿಕೇಶನ್ ಮ್ಯೂಟ್ ಮಾಡುವುದು ಹೇಗೆ?

ನಮಗೆ ಸಂಬಂಧಪಡದ ಒಂದು ಟ್ವಿಟರ್ ಖಾತೆ ಅಥವಾ ಹ್ಯಾಷ್’ಟ್ಯಾಗ್ ಪದೇ ಪದೇ ನಮ್ಮ ಟ್ವಿಟರ್ ಫೀಡ್’ನಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ಖಾತೆ, ಹ್ಯಾಷ್ ಟ್ಯಾಗ್ ಅಥವಾ ಒಂದು ಪದವನ್ನು ಯಾವ ರೀತಿ ಬ್ಲಾಕ್ ಮಾಡದೇ ಮ್ಯೂಟ್ ಮಾಡಬಹುದು ಎಂಬುದನ್ನು ಅರಿಯಲು ಮುಂದೆ ಓದಿ.

2013ರ ನವೆಂಬರ್’ನಲ್ಲಿ ತಂತ್ರಜ್ಞಾನ ಜಗತ್ತಿಗೆ ಕಾಳಿಟ್ಟಿದ್ದ ಟ್ವಿಟರ್ ಇಂದು ಪ್ರಪಂಚದ ಪ್ರಮುಖ ಮೂರು ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿದೆ. ಭಾರತದಲ್ಲಿಯೂ ಫೇಸ್’ಬುಕ್ ಇನ್ಸ್ಟಾಗ್ರಾಮ್ ಬಳಿಕ ಅತೀ ಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಜಾಲತಾಣವಾಗಿ ಟ್ವಿಟರ್ ಗುರುತಿಸಲ್ಪಟ್ಟಿದೆ. ಒಟ್ಟು 18.9 ಮಿಲಿಯನ್ ಟ್ವಿಟರ್ ಬಳಕೆದಾರರು ಭಾರತದಲ್ಲಿ ಇದ್ದಾರೆ.

ಹೀಗಿರುವಾಗ ಟ್ವಿಟರ್ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸುವ ಕೆಲವು ಟಿಪ್ಸ್ ಇಲ್ಲಿದೆ. ಟ್ವಿಟರ್ ಬಳಸುವಾಗ ಹಲವು ಬಾರಿ ನಮಗೆ ಅನಗತ್ಯವಾದ ಮಾಹಿತಿ ನಮಗೆ ಕಿರಿಕಿರಿ ಉಂಟುಮಾಡುತ್ತದೆ. ನಮಗೆ ಸಂಬಂಧಪಡದ ಒಂದು ಟ್ವಿಟರ್ ಖಾತೆ ಅಥವಾ ಹ್ಯಾಷ್’ಟ್ಯಾಗ್ ಪದೇ ಪದೇ ನಮ್ಮ ಟ್ವಿಟರ್ ಫೀಡ್’ನಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ಖಾತೆ, ಹ್ಯಾಷ್ ಟ್ಯಾಗ್ ಅಥವಾ ಒಂದು ಪದವನ್ನು ಯಾವ ರೀತಿ ಬ್ಲಾಕ್ ಮಾಡದೇ ಮ್ಯೂಟ್ ಮಾಡಬಹುದು ಎಂಬುದನ್ನು ಅರಿಯಲು ಮುಂದೆ ಓದಿ.

ಟ್ವಿಟರ್ ಖಾತೆಯನ್ನು ಮ್ಯೂಟ್ ಮಾಡುವುದು ಹೇಗೆ?

  1. ಇದು ಮೊಬೈಲ್ ಫೋನ್ ಹಾಗೂ ಡೆಸ್ಕ್ ಟಾಪ್’ನಲ್ಲಿ ಒಂದೇ ರೀತಿಯಾಗಿ ಬಳಸಬಹುದಾದ ಆಯ್ಕೆ. ಟ್ವಿಟರ್ ಓಪನ್ ಮಾಡಿ ಮತ್ತು ಮೂರು ಡಾಟ್ ಇರುವ ಮೆನು ಮೇಲೆ ಕ್ಲಿಕ್ ಮಾಡಿ.
  2. ಇಲ್ಲಿ ನಿಮಗೆ mute the conversation or mute the account ಎಂಬ ಎರಡು ಆಯ್ಕೆಗಳು ಕಾಣುತ್ತವೆ.
  3. ಯಾವುದಾದರೂ ಮೆಸೇಜ್ ಅನ್ನು ಮ್ಯೂಟ್ ಮಾಡಬೇಕಾದರೆ mute the conversation ಆಯ್ಕೆ ಮಾಡಿ. ಯಾವುದಾದರೂ ಖಾತೆಯಲ್ಲಿ ಬರುವ ಮಾಹಿತಿ ನಿಮಗೆ ಅನಗತ್ಯ ಅನ್ನಿಸಿದರೆ mute the account ಅನ್ನು ಆಯ್ಕೆ ಮಾಡಿ. ಖಾತೆಯನ್ನು ಮ್ಯೂಟ್ ಮಡುವುದರಿಂದ ನೀವು ಆ ಖಾತೆಯನ್ನು ಅನ್’ಫಾಲೋ ಮಾಡುವುದಿಲ್ಲ. ಆ ಖಾತೆಯಲ್ಲಿ ಬರುವಂತಹ ಪೋಸ್ಟ್’ಗಳ ಫೀಡ್ ನಿಮಗೆ ಪುಷ್ ಮೆಸೇಜ್ ಅಥವಾ ಎಸ್ಎಂಎಸ್ ಮೂಲಕ ಬರದೇ ಇರುವುದರಿಂದ ಕಿರಿಕಿರಿ ತಪ್ಪಿಸಬಹುದು.

ಒಂದು ಪದ ಅಥವಾ ಹ್ಯಾಷ್’ಟ್ಯಾಗ್ ಅನ್ನು ಮ್ಯೂಟ್ ಮಾಡುವುದು ಹೇಗೆ?

  1. ಮೊಬೈಲ್’ನಲ್ಲಿ ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ. ಡೆಸ್ಕ್’ಟಾಪ್ ನಲ್ಲಿ More ಆಯ್ಕೆಯನ್ನು ಕ್ಲಿಕ್ ಮಾಡಿ
  2. Settings and Privacy ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ
  3. ಅದರಲ್ಲಿ Privacy and safety ಮೇಲೆ ಕ್ಲಿಕ್ ಮಾಡಿ
  4. ಡೆಸ್ಕ್’ಟಾಪ್ ಬಳಸುತ್ತಿದ್ದರೆ ನಿಮಗೆ ಮ್ಯೂಟ್ ಆ್ಯಂಡ್ ಬ್ಲಾಕ್ ಆಯ್ಕೆ ಕಾಣಿಸುತ್ತದೆ. ಟ್ವಿಟರ್ ಆ್ಯಪ್ ಬಳಸುತ್ತಿದ್ದರೆ, ನಿಮಗೆ ಮ್ಯೂಟೆಡ್ ಅಕೌಂಟ್ಸ್ ಮತ್ತು ಮ್ಯೂಟೆಡ್ ವರ್ಡ್ಸ್ ಎಂಬ ಆಯ್ಕೆ ಕಾಣಿಸುತ್ತದೆ.
  5. ಇದರಲ್ಲಿ ಮ್ಯೂಟೆಡ್ ವರ್ಡ್ಸ್ ಆಯ್ಕೆ ಮಾಡಿಕೊಳ್ಳಿ
  6. ಅಲ್ಲಿ ಕಾಣಿಸುವ ‘+’ ಗುರುತಿನ ಮೇಲೆ ಕ್ಲಿಕ್ ಮಾಡಿ, ಒಂದು ಬಾರಿಗೆ ಒಂದು ಹ್ಯಾಷ್ ಟ್ಯಾಗ್, ಪದ, ವಾಕ್ಯ ಅಥವಾ ಖಾತೆಯ ಯೂಸರ್ ನೇಮ್ ಅನ್ನು ಬರೆಯಿರಿ
  7. ನಿಮ್ಮ ಇಚ್ಚೆಯ ಎಲ್ಲಾ ಪದಗಳನ್ನು ಬರೆದ ನಂತರ ಸೇವ್ ಬಟನ್ ಕ್ಲಿಕ್ ಮಾಡಿ.

ಇಷ್ಟು ಮಾಡಿದ ನಂತರ ನೀವು ಈ ಪದಗಳನ್ನು ಎಲ್ಲಿ ಮ್ಯೂಟ್ ಮಾಡಲು ಬಯಸುತ್ತೀರಾ ಎಂದು ಆಯ್ಕೆ ಮಾಡಲು ಅವಕಾಶವಿದೆ. ಹೋಮ್ ಟೈಮ್’ಲೈನ್, ನೋಟಿಫಿಕೇಶನ್ ಎಂಬ ಎರಡು ಆಯ್ಕೆಗಳು ನಿಮಗೆ ಸಿಗುತ್ತವೆ. ಇದರಲ್ಲಿ ಯಾವುದು ಬೇಕು ಎಂದು ನೀವು ಆರಿಸಿಕೊಳ್ಳಬಹುದು.

ಈ ವಿಧಾನವನ್ನು ಬಳಸಿಕೊಂಡು ನಿಮಗೆ ಅನಗತ್ಯವಾದ ನೋಟಿಫಿಕೇಶನ್, ಎಸ್ಎಂಎಸ್, ಟ್ವಿಟರ್ ಫೀಡ್’ಗಳಿಂದ ನೀವು ದೂರವಿರಬಹುದು. ನಿಮಗೆ ಅಗತ್ಯವಿದ್ದಾಗ ಮಾತ್ರ ಖುದ್ದಾಗಿ ನೀವೇ ಹುಡುಕಲು ಸಾಧ್ಯವಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.