ಆನ್‌ಲೈನ್‌ ಮೂಲಕ EPF ಖಾತೆಯಿಂದ ಹಣ ಪಡೆಯುವುದು ಹೇಗೆ? – ಇಲ್ಲಿದೆ ಸರಳ ವಿಧಾನ

ಈಗ ಎಲ್ಲ ವಹಿವಾಟುಗಳು ಆನ್‌ಲೈನ್‌ ಮೂಲಕವೇ ನಡೆಯುತ್ತದೆ. ಪಿಎಫ್‌ ಹಣವನ್ನು ಮರಳಿ ಪಡೆಯುವುದಕ್ಕಾಗಿ ಕಚೇರಿಗಳಿಗೆ ಅಲೆದಾಡುವ ಬದಲು ಅದನ್ನೂ ಆನ್‌ಲೈನ್‌ ಮೂಲಕವೇ ಪಡೆದುಕೊಳ್ಳಬಹುದು. ಅದು ಹೇಗೆ? ಇಲ್ಲಿದೆ ಓದಿ

ಕಾರ್ಮಿಕರ ಭವಿಷ್ಯ ನಿಧಿ, ಕಷ್ಟಕಾಲದಲ್ಲಿ ಕೈ ಹಿಡಿಯುವಂತದ್ದು. ಕೊರೋನಾ ಸಂಕಷ್ಟದಂತಹ ಸಂದರ್ಭಗಳು ಎದುರಾಗಿ ಜೀವನ ನಡೆಸುವುದು ದುಸ್ತರವಾದಾಗ ಕಯ ಹಿಡಿಯುವುದೇ ಉಳಿತಾಯ ಖಾತೆಗಳು. ಅದರಲ್ಲಿಯೂ ಕಡ್ಡಾಯವಾಗಿ ಉಳಿಸಲೇ ಬೇಕು ಎಂಬ ನಿಯಮದಡಿ ಸ್ಥಾಪಿತವಾಗಿರುವ ಕಾರ್ಮಿಕರ ಭವಿಷ್ಯ ನಿಧಿ (Employees Provident Fund- EPF) ನಿವೃತ್ತಿಯ ನಂತರ ಅಥವಾ ಸೇವಾ ಅವಧಿಯ ಸಂದರ್ಭದಲ್ಲಿಯೂ ನೆರವಾಗಬಲ್ಲದು. 

ಎಲ್ಲಾ ನೌಕರರು ತಮ್ಮ ಮೂಲ ಸಂಬಳದ ಶೇ. 12ರಷ್ಟು ಹಣವನ್ನು ತಮ್ಮ EPF ಖಾತೆಗೆ ಜಮಾ ಮಾಡುವುದು ಕಡ್ಡಾಯ. ನಿವೃತ್ತಿಯ ನಂತರ ಪಿಂಚಣೆ ರೂಪದಲ್ಲಿ ಅಥವಾ ಒಂದೇ ಬಾರಿಗೆ ಈ ಹಣವನ್ನು ಪಡೆಯಲು ಅವಕಾಶವಿದೆ. ಆದರೆ, ನಿವೃತ್ತಿಗೂ ಮೊದಲೇ ಈ ಹಣವನ್ನು ಪಡೆಯುಲೂ ಸಾಧ್ಯವಿದೆ. ಈ ಹಣವನ್ನು EPFO ಅಧಿಕೃತ ಜಾಲತಾಣದ ಮೂಲಕ ಈ ನಿಮ್ಮ ಖಾತೆಯಲ್ಲಿರುವ ಹಣವನ್ನು ನೀವು ವಿಥ್ ಡ್ರಾ ಮಾಡಿಕೊಳ್ಳಬಹುದು. 

EPFO ಮೂಲಕ ಯಾವ ರೀತಿ ಹಣವನ್ನು ಪಡೆಯಬಹುದು ಎಂಬ ಕುರಿತ ಮಾಹಿತಿ ಈ ಲೇಖನದಲ್ಲಿದೆ. 

EPF ಹಣವನ್ನು ಯಾವ ರೀತಿ ಪಡೆಯಬಹುದು ಎಂಬುದು ತಿಳಿಯುವ ಮೊದಲು, ಒಂದು ಅಂಶವನ್ನು ನಾವು ಗಮನಿಸಬೇಕು. ನಿಮ್ಮ EPF ಖಾತೆಯಲ್ಲಿನ ಸಂಪೂರ್ಣ ಹಣವನ್ನು ನೀವು ಪಡೆಯಬೇಕಾದರೆ ನೀವು ನಿವೃತ್ತಿ ಹೊಂದಬೇಕು ಅಥವಾ ಎರಡು ತಿಂಗಳಿಗಿಂತಲೂ ಹೆಚ್ಚಿನ ಕಾಲ ನಿರುದ್ಯೋಗಿಗಳಾಗಿರಬೇಕು.  

ಆದರೆ, ಕೆಲವೊಂದು ಸಕಾರಣಗಳಿಗೆ ನಿಮ್ಮ EPF ಖಾತೆಯಲ್ಲಿನ ಅಲ್ಪ ಮೊತ್ತವನ್ನು ಪಡೆಯಲು EPFO ಅನುವು ಮಾಡಿಕೊಟ್ಟಿದೆ. ದೀರ್ಘಕಾಲದ ಅಸೌಖ್ಯ, ಮದುವೆ, ನೈಸರ್ಗಿಕ ವಿಕೋಪ ಅಥವಾ ಮನೆ ದುರಸ್ಥಿಗಳಂತಹ ಸಂದರ್ಭದಲ್ಲಿ ನಿಮ್ಮ EPF ಖಾತೆಯಲ್ಲಿನ ಹಣವನ್ನು ಪಡೆಯಲು ಅವಕಾಶವಿದೆ. ಈ ರೀತಿ ಹಣವನ್ನು ಪಡೆಯಲು ನೀವು ಪಾಲಿಸಬೇಕಾದ ಸೂಚನೆಗಳು ಈ ಕೆಳಗಿನಂತಿದೆ, 

1. ಮೊದಲು UAN Member e-Sewa ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ

2. ನಿಮ್ಮ UAN ಸಂಖ್ಯೆ, ಪಾಸ್ ವರ್ಡ್ ಹಾಗೂ ಅಲ್ಲಿ ತೋರಿಸುವಂತಹ CAPTCHA ವನ್ನು ದಾಖಲಿಸಿ. ನಂತರ ಸೈನ್ ಇನ್ ಬಟನ್ ಕ್ಲಿಕ್ ಮಾಡಿ. 

3. ಮೇಲ್ಭಾಗದಲ್ಲಿ ಕಾಣಿಸುವ ಮೆನುಗಳಲ್ಲಿ Online Services ಆಯ್ಕೆ ಮಾಡಿಕೊಳ್ಳಿ. ಅದರಲ್ಲಿ CLAIM (FORM-31, 19, 10C & 10D) ಆಯ್ಕೆ ಮಾಡಿ. 

4. ಅಲ್ಲಿ ನೀಡಲಾಗಿರುವ ಅರ್ಜಿಯಲ್ಲಿ ದಾಖಲಾಗಿರುವ ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ. 

5. ಒಂದು ಬಾರಿಗೆ ಖಚಿತಪಡಿಸಿಕೊಂಡ ನಂತರ, ನಿಮ್ಮ ಬ್ಯಾಂಕ್ ಖಾತೆಯನ್ನು ನಮೂದಿಸಿ

6. ನಂತರ Verify ಬಟನ್ ಮೇಲೆ ಕ್ಲಿಕ್ ಮಾಡಿ ಅದಾದ ಬಳಿಕ ತೋರಿಸುವ ತೋರಿಸುವ ಅಂಡರ್ ಟೇಕಿಂಗ್ ಪ್ರಮಾಣಪತ್ರದಲ್ಲಿ Yes ಎಂದು ಕ್ಲಿಕ್ ಮಾಡಿ. 

7. ನಂತರ ನಿಮಗೆ Proceed For Online Claim ಎಂಬ ಆಯ್ಕೆ ಲಭ್ಯವಾಗುತ್ತದೆ. ಈ ಬಟನ್ ಅನ್ನು ಕ್ಲಿಕ್ ಮಾಡಿ 

8. ಯಾವ ಕಾರಣಕ್ಕಾಗಿ ಹಣವನ್ನು ಬಳಸಲಾಗುತ್ತದೆ ಎಂಬ ಮಾಹಿತಿಯನ್ನು ಈ ಹಂತದಲ್ಲಿ ಕೇಳಲಾಗುತ್ತದೆ. ಇಲ್ಲಿರುವ ಡ್ರಾಪ್ ಡೌನ್್ನಲ್ಲಿ ನಿಮ್ಮ ಕಾರಣವನ್ನು ಆಯ್ಕೆ ಮಾಡಿಕೊಳ್ಳಿ. 

9. ನಂತರ ಕಾಣಸಿಗುವ ಟೆಕ್ಸ್ಟ್ ಬಾಕ್ಸ್’ನಲ್ಲಿ ನೀವು ವಿಥ್ ಡ್ರಾ ಮಾಡಲು ಬಯಸುವ ಮೊತ್ತವನ್ನು ನಮೂದಿಸಿ. ನಂತರ ಕಾರ್ಮಿಕ ವಿಳಾಸ ಭಾಗದಲ್ಲಿ ನಿಮ್ಮ ಅಂಚೆ ವಿಳಾಸವನ್ನು ನಮೂದಿಸಿ. 

10. Certificate ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನು ಸಲ್ಲಿಸಿ. 

ಒಮ್ಮೆ ನೀವು ಅರ್ಜಿಯನ್ನು ಸಲ್ಲಿಸಿದ ನಂತರ ನೀವು ದಾಖಲಿಸಿರುವ ಕಾರಣಕ್ಕೆ ಸೂಕ್ತವಾದ ಸ್ಕ್ಯಾನ್ ಮಾಡಿರುವ ದಾಖಲೆಗಳನ್ನು EPFO ಕೇಳಬಹುದು. ಈ ಅರ್ಜಿಯನ್ನು ನೀವು ಸೇವೆ ಸಲ್ಲಿಸುತ್ತಿರುವ ಸಂಸ್ಥೆಯು ಪುರಸ್ಕರಿಸಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೇ, ಅರ್ಜಿ ಸಲ್ಲಿಸಿದ 15-20 ದಿನಗಳ ನಂತರ ಈ ಹಣವು ನಿಮ್ಮ EPF ಖಾತೆಯೊಂದಿಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.