ಹೊಸ ತಲೆಮಾರಿಗೆ ಎಚ್‌ಪಿಯಿಂದ ಅತ್ಯಾಧುನಿಕ ಕ್ರೋಮ್‌ಬುಕ್‌ 14 ಸರಣಿ

ಇಂಟೆಲ್ ಅಪೋಲೋ ಲೇಕ್ ಡ್ಯೂಯಲ್ ಕೋರ್ ಪ್ರೊಸೆಸರ್ ಹೊಂದಿರುವ ಈ ಹೊಸ ಎಚ್‍ಪಿ ಕ್ರೋಮ್‍ಬುಕ್‍ನಲ್ಲಿ 14 ಇಂಚು ಎಚ್‍ಡಿ ಅಲ್ಟ್ರಾ-ಬ್ರೈಟ್ ಟಚ್ ಸ್ಕ್ರೀನ್ ಡಿಸ್‍ಪ್ಲೇ ಇದ್ದು, ಸ್ಥಳೀಯ ಭಾಷೆಯನ್ನು ಬಳಸಲು ಅವಕಾಶವಿದೆ

ಎಚ್‍ಪಿ ಇಂಕ್, ಇಂದು ಭಾರತದ ಆಧುನಿಕ ಬಳಕೆದಾರರಿಗೆ ಹಾಗೂ ಹೊಸ ತಲೆಮಾರಿಗೆಂದು ಹೊಸ ಎಚ್‍ಪಿ ಕ್ರೋಮ್‍ಬುಕ್ 14 ಸೀರೀಸ್ ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ ಕ್ರೋಮ್‍ಬುಕ್ ಪೋರ್ಟ್‌ಫೋಲಿಯೋವನ್ನು ವಿಸ್ತರಿಸಿದೆ. ಇಂಟೆಲ್ ಅಪೋಲೋ ಲೇಕ್ ಡ್ಯೂಯಲ್ ಕೋರ್ ಪ್ರೊಸೆಸರ್ ಹೊಂದಿರುವ ಈ ಹೊಸ ಎಚ್‍ಪಿ ಕ್ರೋಮ್‍ಬುಕ್‍ನಲ್ಲಿ 14 ಇಂಚು ಎಚ್‍ಡಿ ಅಲ್ಟ್ರಾ-ಬ್ರೈಟ್ ಟಚ್ ಸ್ಕ್ರೀನ್ ಡಿಸ್‍ಪ್ಲೇ ಇದ್ದು, ಸ್ಥಳೀಯ ಭಾಷೆಯನ್ನು ಬಳಸಲು ಅವಕಾಶವಿದೆ. ಅಲ್ಲದೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಜತೆ ಸರಾಗವಾಗಿ ಸಿಂಕ್ ಕೂಡ ಆಗುತ್ತದೆ. ತಂತ್ರಜ್ಞಾನ ಪ್ರಿಯರಾದ, ಹೊಸ ತಲೆಮಾರಿನವರಿಗೆ ಅದರಲ್ಲೂ ತಮ್ಮ ವಿವಿಧ ಕಂಪ್ಯೂಟಿಂಗ್ ಅಗತ್ಯತೆಗಳಿಗೆ ಗೂಗಲ್ ಈಕೋ ಸಿಸ್ಟಂ ಅನ್ನು ಬಳಸುವಂಥವರಿಗೆ ಇದು ಸರಿಯಾಗಿ ಹೊಂದುತ್ತದೆ.

ಎಚ್‍ಪಿ ಕ್ರೋಮ್‍ಬುಕ್ 14 ಬಳಕೆದಾರರಿಗೆ ಕ್ರೋಮ್ ಒಎಸ್ ಅನುಭವವನ್ನು ನೀಡುತ್ತದೆಯಲ್ಲದೆ, ಒಂದು ಮಿಲಿಯನ್‍ಗಿಂತಲೂ ಅಧಿಕ ಆಂಡ್ರಾಯ್ಡ್ ಅಪ್ಲಿಕೇಷನ್‍ಗಳನ್ನು ಬೆಂಬಲಿಸುತ್ತದೆ. ಗೂಗಲ್ ಖಾತೆ ಮೂಲಕ ಸಿಸ್ಟಂಗೆ ಲಾಗ್‍ಇನ್ ಆದ 10 ಸೆಕೆಂಡುಗಳೊಳಗೆ ಬಳಕೆದಾರರು ನೇರವಾಗಿ ತಮ್ಮ ಫೈಲ್‍ಗಳು ಹಾಗೂ ಡೇಟಾಗಳನ್ನು ವೀಕ್ಷಿಸಬಹುದು. 64 ಜಿಬಿ ಎಸ್‍ಎಸ್‍ಡಿ ಸ್ಟೋರೇಜ್ ಹಾಗೂ 100 ಜಿಬಿ ಗೂಗಲ್ ಕ್ಲೌಡ್ ಸ್ಟೋರೇಜ್ ಅನ್ನು ಕೂಡ ಇದು ಹೊಂದಿದೆ.

ಬೆಲೆ ಮತ್ತು ಲಭ್ಯತೆ

  • ಎಚ್‍ಪಿ ಕ್ರೋಮ್‍ಬುಕ್ 14 ಚಾಕ್‍ಬೋರ್ಡ್ ಗ್ರೇ ಮತ್ತು ಸ್ನೋವೈಟ್ ಬಣ್ಣದಲ್ಲಿ ಲಭ್ಯವಿದ್ದು, ಇದರ ಆರಂಭಿಕ ದರ 23,990 ರೂ.ಗಳು. ದೇಶದ 28 ನಗರಗಳ 250 ಎಚ್‍ಪಿ ವರ್ಲ್ಡ್ ಮಳಿಗೆಗಳು, ಎಚ್‍ಪಿ ಆನ್‍ಲೈನ್ ಮಳಿಗೆ, ಅಮೆಜಾನ್ ಮತ್ತು ಫ್ಲಿಪ್‍ಕಾರ್ಟ್‍ನಲ್ಲಿ ದೊರೆಯುತ್ತದೆ.
  • ಗ್ರಾಹಕರು 12 ತಿಂಗಳ ಕಾಲ 100 ಜಿಬಿ ಸ್ಟೋರೇಜ್ ಮತ್ತು ಇತರೆ ವಿಶೇಷ ಅನುಕೂಲತೆಗಳುಳ್ಳ ಗೂಗಲ್ ಒನ್ ಪ್ರೀಮಿಯಂ ಚಂದಾದಾರಿಕೆ ಪಡೆಯಬಹುದು
  • ಇದಲ್ಲದೇ 1 ವರ್ಷ ಕಾಲ ಜಿಯೋಫೈ ಡಿವೈಸ್ ಮೂಲಕ ಪ್ರತಿ ದಿನ 2ಜಿಬಿ ಹೈಸ್ಪೀಡ್ 4ಜಿ ಡೇಟಾ ಮತ್ತು 14+ ಜಿಯೋ ಡಿಜಿಟಲ್ ಆಪ್‍ಗಳ ಪ್ರೈಮ್ ಚಂದಾದಾರಿಕೆ ಪಡೆಯಬಹುದು.

ಇದನ್ನೂ ಓದಿ | ಹೇಳಿದ್ದನ್ನು ಮಾಡುವ ಗೂಗಲ್‌ ನೆಸ್ಟ್‌ ಹಬ್‌ ಈಗ ಭಾರತದಲ್ಲೂ ಲಭ್ಯ

ಬಿಡುಗಡೆ ಕಾರ್ಯಕ್ರಮದಲ್ಲಿ ಎಚ್‍ಪಿ ಇಂಕ್. ಇಂಡಿಯಾ ಪರ್ಸನಲ್ ಸಿಸ್ಟಮ್ಸ್ ವಿಭಾಗದ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ, ಕಂಪನಿಯ ಕನ್ಸ್ಯೂಮರ್ ಪರ್ಸನಲ್ ಸಿಸ್ಟಮ್ಸ್ ವಿಭಾಗದ ಮುಖ್ಯಸ್ಥ ಅನುರಾಗ್ ಅರೋರಾ ಮತ್ತಿತರರು ಉಪಸ್ಥಿತರಿದ್ದರು.