‘ಆಲ್ ಸ್ಕ್ರಿನ್ ಫಿಂಗರ್’‌ ಪ್ರಿಂಟ್ ಸ್ಕ್ಯಾನರ್: ನೀವು ಊಹಿಸಲು ಆಗದ ತಂತ್ರಜ್ಞಾನ..!

ಸ್ಮಾರ್ಟ್‌ಫೋನ್ ಲೋಕದಲ್ಲಿ ದಿನಕ್ಕೊಂದು ಹೊಸ ಮಾದರಿಯ ಆವಿಷ್ಕಾರಗಳು ನಡೆಯುತ್ತಿದೆ, ಇಂದಿಗೆ ಹೊಸದಾದ ತಂತ್ರಜ್ಞಾನವೊಂದು ನಾಳೆಗೆ ಹಳೇಯದಾಗಿರುತ್ತದೆ. ಸದ್ಯಕ್ಕೆ ಇದೇ ಮಾದರಿಯಲ್ಲಿ ಸ್ಮಾರ್ಟ್‌ಫೋನ್ ಆನ್‌ಲಾಕ್‌ ವ್ಯವಸ್ಥೆಯೂ ಹೊಸದೊಂದು ತಂತ್ರಜ್ಞಾನವನ್ನು ಪಡೆದುಕೊಂಡಿದೆ.

ಚೀನಾ ಮೂಲದ ವಿಶ್ವದ ಎರಡನೇ ಅತೀ ದೊಡ್ಡ ಸ್ಮಾರ್ಟ್‌ಫೋನ್ ತಯಾರಕ ಎನ್ನಿಸಿಕೊಂಡಿರುವ ಹುವಾವೇ, ಆಲ್‌ ಸ್ಕ್ರಿನ್ ಫಿಂಗರ್‌ ಪ್ರಿಂಟ್ ಆನ್‌ಲಾಕ್‌ ವ್ಯವಸ್ಥೆಗೆ ಪೇಟೆಂಟ್‌ ಪಡೆಯಲು ಮುಂದಾಗಿದೆ.

ಈ ಹಿಂದೆ ಇನ್‌ ಡಿಸ್‌ಪ್ಲೇ ಫಿಂಗರ್‌ ಪ್ರಿಂಟ್ ಆಯ್ಕೆಯೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದಲ್ಲದೇ, ಈ  ವೈಶಿಷ್ಟ್ಯವನ್ನು ಹೈಲೆಟ್‌ ಮಾಡಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದ್ದನ್ನು ನಾವು ನೋಡಬಹುದು. ಈಗ ಇದಕ್ಕೂ ಒಂದು ಹೆಜ್ಜೆ ಮುಂದಿರುವ ತಂತ್ರಜ್ಞಾನವನ್ನು ಹುವಾವೇ ಅಭಿವೃದ್ಧಿ ಮಾಡಿದೆ.

ಇದನ್ನು ಓದಿ: ನಾಲ್ಕು ಡಿವೈಸ್‌ಗಳಲ್ಲಿ ಒಂದೇ ವಾಟ್ಸಾಪ್: ಬಂದರೆ ತೊಂದರೆಯೇ ಹೆಚ್ಚು..!

ಇನ್‌ ಡಿಸ್‌ಪ್ಲೇ ಫಿಂಗರ್‌ ಪ್ರಿಂಟ್ ಸ್ಕ್ಯಾನರ್‌ ನಲ್ಲಿ ಕೇಲವ ಒಂದೇ ಒಂದು ಸ್ಥಳದಲ್ಲಿ ಮಾತ್ರವೇ ಫಿಂಗರ್‌ ಸ್ಕ್ಯಾನ್ ಆಗುತ್ತಿತ್ತು. ಆದರೆ ಹುವಾವೇಯ ಹೊಸ ತಂತ್ರಜ್ಞಾನ ಡಿಸ್‌ಪ್ಲೇಯ ಯಾವುದೇ ಭಾಗದಲ್ಲಿ ನಿಮ್ಮ ಫಿಂಗರ್‌ ಇಟ್ಟರು ಬಯೋ ಮೇಟ್ರಿಕ್‌ ಸ್ಕ್ಯಾನ್‌ ಆಗಿ ಫೋನ್ ಆನ್‌ಲಾಕ್‌ ಆಗುವಂತೆ ಮಾಡುತ್ತದೆ. ಇದಕ್ಕಾಗಿ ಪೆಟೇಂಟ್‌ ಪಡೆದುಕೊಳ್ಳಲು ಅರ್ಜಿಸಲ್ಲಿಸಿದೆ.

ಚೀನಾ, ಯುರೋಪ್, ಯುಎಸ್, ಜಪಾನ್, ಕೊರಿಯಾ ಮತ್ತು ಭಾರತ ಸೇರಿದಂತೆ ಆರು ಮಾರುಕಟ್ಟೆಗಳಲ್ಲಿ ಈ ಹೊಸ ತಂತ್ರಜ್ಞಾನಕ್ಕಾಗಿ ಪೇಟೆಂಟ್ ಸಲ್ಲಿಸಿದೆ ಮತ್ತು ಅನುಮೋದನೆಗಾಗಿ ಕಾಯುತ್ತಿದೆ.

ಇದಲ್ಲದೇ ಹುವಾವೇ ಇದರೊಂದಿಗೆ ಇನ್ನೊಂದು ತಂತ್ರಜ್ಞಾನವನ್ನು ನಿರ್ಮಿಸಿದೆ. ನೀವು ವಾಟ್ಸಾಪ್‌ ಓಪನ್ ಮಾಡಬೇಕು ಎಂದುಕೊಂಡರೆ ನೀವು ಮೊಬೈಲ್‌ ನಲ್ಲಿ ವಾಟ್ಸಾಪ್‌ ಐಕಾನ್‌ ಮೇಲೆ ಟ್ಯಾಪ್ ಮಾಡುವ ಅಗತ್ಯವೇ ಇಲ್ಲ, ಬದಲಾಗಿ ಆಲ್‌ ಸ್ಕ್ರಿನ್ ಬಯೋಮೆಟ್ರಿಕ್ ತಂತ್ರಜ್ಞಾನದ ಸಹಾಯದಿಂದ ನಿಮ್ಮ ಬೆರಳುಗಳಿಗೆ ಆಪ್‌ಗಳನ್ನು ಸ್ಪೀಡ್‌ ಡಯಲ್ ಮಾದರಿಯಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಉದಾ: ನೀವು ತೋರು ಬೆರಳಿಗೆ ವಾಟ್ಸಾಪ್‌ ಅನ್ನು ಸಿಂಕ್ ಮಾಡಿದ್ದರೆ, ನಿಮ್ಮ ತೋರು ಬೆರಳಿನಲ್ಲಿ ಮೊಬೈಲ್ ಪರದೆಯನ್ನು ಮುಟ್ಟಿದರೆ ಸಾಕು ಫೋನಿನಲ್ಲಿ ವಾಟ್ಸಾಪ್ ತೆರೆದುಕೊಳ್ಳಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.