ವುಹಾನ್‌ನಲ್ಲಿ ಸೋಂಕು ಪತ್ತೆಯಾದಾಗ, ಕ್ವಾರಂಟೈನ್‌ನಲ್ಲಿರುವ ರೋಗಿಗಳ ಮೇಲ್ವಿಚಾರಣೆ, ಅಗತ್ಯ ವಸ್ತುಗಳ ಪೂರೈಕೆಗೆ ಬಳಕೆಯಾಗಿದ್ದು ರೊಬೊಟ್‌ಗಳು. ಈಗ ಭಾರತದಲ್ಲೂ ಪರಿಚಯಿಸಲಾಗುತ್ತಿದ್ದು, ತಮಿಳುನಾಡಿನ ತಿರುಚಿರಪಳ್ಳಿಯ ಸರ್ಕಾರಿ ಶಾಲೆಯಲ್ಲಿ ವೈದ್ಯರಿಗೆ ನೆರವಾಗುತ್ತಿವೆ.

ಪ್ರಸ್ತುತ ಭಾರತ ಕರೋನಾ ವೈರಸ್ ಹರಡುತ್ತಿರುವ ವೇಗದಿಂದಲೇ ಭಾರಿ ಆತಂಕವನ್ನು ಎದುರಿಸುತ್ತಿದೆ. ಮನುಷ್ಯನಿಂದ ಮನುಷ್ಯನಿಗೆ ಸುಲಭವಾಗಿ ದಾಟಬಹುದಾದ ಈ ವೈರಸ್ ನಿಯಂತ್ರಿಸಬೇಕೆಂದರೆ ಮನುಷ್ಯರ ನಡುವಿನ ಸಂಪರ್ಕವನ್ನು ಕಡಿಮೆ ಮಾಡಲೇಬೇಕು. ಹಾಗೇ ಮಾಡಿದರೆ ಚಿಕಿತ್ಸೆ ಹೇಗೆ ಸಾಧ್ಯ? ಅದಕ್ಕೆ ತಮಿಳುನಾಡಿನ ಟೆಕ್‌ಕಂಪನಿ ಪ್ರೊಪೆಲ್ಲರ್ ಟೆಕ್ನಾಲಜಿಸಿ ಪರಿಹಾರ ಒದಗಿಸಿದೆ.
ಈ ಕಂಪನಿ ಸಿದ್ಧಪಡಿಸಿರುವ ಹ್ಯೂಮನಾಯ್ಡ್ ರೊಬೊಟ್‌ಗಳು ಈತ ತಮಿಳುನಾಡಿನ ತಿರುಚಿರಪಳ್ಳಿಯ ಸರ್ಕಾರಿ ಆಸ್ಪತ್ರೆಗಳ ರೋಗಿಗಳ ಆರೈಕೆಯಲ್ಲಿ ನೆರವಾಗುತ್ತಿವೆ.
ಝಾಫಿ ಮತ್ತು ಝಾಫಿ ಮೆಡಿಕ್ ಹೆಸರಿನ ಈ ರೊಬೊಟ್‌ಗಳು ನಾಲ್ಕ ಅಡಿ ಎತ್ತರ ಇವೆ. ಇವು ಝಾಫಿ ರೊಬೊಟ್ ಅನ್ನು 250 ಮೀಟರ್ ದೂರದಿಂದ ನಿಯಂತ್ರಿಸಬಹುದಾಗಿದ್ದು, 8 ಕಿ.ಮೀ. ತೂಕವನ್ನು ಹೊರಬಲ್ಲಷ್ಟು ಸಮರ್ಥವಾಗಿದೆ. ಇನ್ನು ಝಾಫಿ ಮೆಡಿಕ್ 1.5 ಮೀಟರ್‌ದಿಂದಲೂ ನಿಯಂತ್ರಿಸಬುದಾಗಿದ್ದು, 20 ಕಿ.ಮೀ. ತೂಕವನ್ನು ಹೊರಬಲ್ಲದು.
ಕ್ವಾರಂಟೈನ್‌ನಲ್ಲಿರುವ ರೋಗಿಗಳ ಕೊಠಡಿಯ ಮುಂದೆ ಹೋಗಿ ಬೆಲ್ ಹೊಡೆದು, ಅಗತ್ಯವಸ್ತು ಮತ್ತು ಔಷಧಿಗಳನ್ನು ನೀಡುತ್ತವೆ. ಇದನ್ನು ವೈದ್ಯರು ದೂರದಲ್ಲಿ ಕೂತು ಮೊಬೈಲ್ ಅಥವಾ ಆಂಡ್ರಾಯ್ಡ್ ಸಾಧನಗಳ ಮೂಲಕ ನಿಯಂತ್ರಿಸಬಹುದು. ಕ್ಯಾಮೆರಾ ಮತ್ತು ವೈರ್‌ಲೆಸ್ ಸಂಪರ್ಕ ಸೋಂಕಿತರೊಂದಿಗಿನ ಸಂಪರ್ಕವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಈ ರೊಬೊಟ್‌ಗಳನ್ನು ಅಭಿವೃದ್ಧಿಪಡಿಸುವ ಹಿಂದಿನ ಉದ್ದೇಶ ಎಂದು ತಿರುಚಿರಪಳ್ಳಿಯ ಪ್ರೊಪೆಲರ್ ಟೆಕ್ನಾಲಜೀಸ್ ಸಂಸ್ಥೆ ತಿಳಿಸಿದೆ.
ಮಹಾತ್ಮ ಗಾಂಧಿ ಮೆಮೊರಿಯಲ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ಈ ರೊಬೊಟ್‌ಗಳ ಪ್ರಾಯೋಗಿಕ ಬಳಕೆ ಯಶಸ್ವಿಯಾಗಿದ್ದು, ಇನ್ನಷ್ಟು ರೊಬೊಟ್‌ಗಳನ್ನು ಸಂಸ್ಥೆ ನೀಡಲಿದೆ.
ಪ್ರಸ್ತುತ ತಮಿಳುನಾಡಿನಲ್ಲಿ 50 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಹೀಗೊಂದು ತಾಂತ್ರಿಕ ನೆರವು ಒದಗಿದ್ದು ಚಿಕಿತ್ಸೆಗೆ ಹೊಸ ಬಲ ತುಂಬಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದೆ.