ಮಕ್ಕಳ ಆನ್‌ಲೈನ್‌ ಕ್ಲಾಸಿಗೆ ಬೆಸ್ಟ್: ರೂ.12,999ಕ್ಕೆ ಐಬಾಲ್ ಟೆಚ್‌ಸ್ಕ್ರಿನ್ ಲಾಪ್‌ಟಾಪ್‌

ಕೊರೋನಾದಿಂದಾಗಿ ಶಾಲೆಗೆ ತೆರೆಯದ ಹಿನ್ನಲೆಯಲ್ಲಿ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಶುರುವಾಗಿದೆ. ಒಂದನೇ ತರಗತಿಯ ಮಗುವಿಗೂ ಲ್ಯಾಪ್‌ಟಾಪ್‌ ಅವಶ್ಯಕತೆ ಉಂಟಾಗಿದೆ. ಮನೆಯಲ್ಲಿ ಎರಡು ಮಕ್ಕಳಿದ್ದರೆ ಇಬ್ಬರಿಗೂ ಬೇರೆ ಬೇರೆ ಲ್ಯಾಪ್‌ಟಾಪ್‌ ಕೊಡಿಸಬೇಕಾದ ಅನಿರ್ವಾಯತೆ ಎದುರಾಗಿದೆ.

ಹಣವಂತರು ಹೇಗೋ ತಮ್ಮ ಮಕ್ಕಳಿಗೆ ಉತ್ತಮವಾದ ಲ್ಯಾಪ್‌ಟಾಪ್‌ಗಳನ್ನು ಕೊಡಿಸುವ ಶಕ್ತಿಯನ್ನು ಹೊಂದಿದ್ದಾರೆ. ಆದರೆ ಮಧ್ಯಮ ವರ್ಗ ಮತ್ತು ಕಡಿಮೆ ಆದಾಯ ಹೊಂದಿದವರು ಅದುವೇ ಕೊರೋನಾ ಹಾವಳಿಯ ಸಂದರ್ಭದಲ್ಲಿ ಹೊಸ ಲ್ಯಾಪ್‌ಟಾಪ್ ಕೊಡಿಸಲು ಸಾಲ ಮಾಡುವ ಹಂತವನ್ನು ತಲುಪಿದ್ದಾರೆ.

ಆದರೆ ಇದೇ ಸಂದರ್ಭದಲ್ಲಿ ಐಬಾಲ್ ಕಂಪನಿಯ ಅತೀ ಕಡಿಮೆ ಬೆಲೆಯಲ್ಲಿ, ಸಾಮಾನ್ಯರ ಜೇಬಿಗೆ ಹೊರೆಯಾಗದಂತಹ ಲ್ಯಾಪ್‌ಟಾಪ್‌ವೊಂದನ್ನು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಕಾಂಪ್‌ ಬುಕ್ i360 (CompBook i360) ಹೆಸರಿನ ಟ್ಯಾಬ್ಲೆಟ್ ಕಮ್ ಲ್ಯಾಪ್‌ಟಾಪ್‌ ರೂ. 12999ಕ್ಕೆ ಮಾರಾಟವಾಗಲಿದ್ದು, ಮಕ್ಕಳಿಗೆ ಮನೆಯಲ್ಲಿ ಕುಳಿತು ಆನ್‌ಲೈನ್ ಪಾಠಗಳನ್ನು ಕೇಳಲು ಮತ್ತು ಇತರೆ ಶಾಲೆಗೆ ಸಂಬಂಧಪಟ್ಟ ಕಾರ್ಯಗಳನ್ನು ಮಾಡಲು ಇದು ಸೂಕ್ತವಾಗಿದೆ.

ವಿಂಡೋಸ್ 10 ಸಪೋರ್ಟ್ ಮಾಡಲಿರುವ ಕಾಂಪ್‌ ಬುಕ್ i360 ಲ್ಯಾಪ್‌ಟಾಪ್‌ ಅನ್ನು 360 ಡಿಗ್ರಿ ರೋಟೆಟ್ ಮಾಡಬಹುದಾಗಿದೆ. ಲಾಪ್‌ಟಾಪ್‌ ಅನ್ನು ನೀವು ಹೇಗೆ ಮಡಚಿದರು ಯಾವುದೇ ತೊಂದರೆ ಇಲ್ಲ.

ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸ್ಟ್ಯಾಂಡ್ ಮೋಡ್ ಮತ್ತು ಟೆಂಟ್ ಮೋಡ್ ಗಳಲ್ಲಿ ಇದನ್ನು ಬಳಕೆ ಮಾಡಲು ಸಾಧ್ಯವಿದೆ.  ಸದ್ಯ ಈ ಲ್ಯಾಪ್‌ಟಾಪ್‌ ಎಲ್ಲಾ ಕಂಪ್ಯೂಟರ್ ಅಂಗಡಿಗಳಲ್ಲಿಯೂ ಲಭ್ಯವಿದೆ ಎನ್ನಲಾಗಿದೆ.

ಈ ಲ್ಯಾಪ್‌ಟಾಪ್ ಅನ್ನು ವಿಶೇಷವಾಗಿ ವಿದ್ಯಾರ್ಥಿಗಳಿಗೆ, ಸಣ್ಣ ಉದ್ಯಮವನ್ನು ನಡೆಸುತ್ತಿರುವವರಿಗೆ ಮತ್ತು ಮೊದಲ ಬಾರಿಗೆ ಲ್ಯಾಪ್‌ಟಾಪ್‌ ಅನ್ನು ಬಳಕೆ ಮಾಡುವವರಿಗಾಗಿಯೇ ರೂಪಿಸಲಾಗಿದೆ.

ಇದನ್ನು ಓದಿ: ಕೇವಲ 15 ನಿಮಿಷದಲ್ಲಿ ಫುಲ್ ಬ್ಯಾಟರಿ ಚಾರ್ಜ್ ಮಾಡುವ ಹೊಸ ತಂತ್ರಜ್ಞಾನ!

ಈ ಲ್ಯಾಪ್‌ಟಾಪ್‌ ಮಲ್ಟಿ-ಟಚ್‌ನ ಬೆಂಬಲದೊಂದಿಗೆ 11.6-ಇಂಚಿನ HD ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. 1.84GHz ವೇಗದ ಇಂಟೆಲ್ ಕ್ವಾಡ್-ಕೋರ್ ಪ್ರೊಸೆಸರ್ ಜೊತೆಗೆ 2GB RAM ಅನ್ನು ಹೊಂದಿದೆ. ಅಲ್ಲದೇ 32GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಅಲ್ಲದೇ ನೀವು ಇದನ್ನು ಮೈಕ್ರೊ SD ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ (64GB ವರೆಗೆ).

ಈ ಲ್ಯಾಪ್‌ಟಾಪ್ 10000 mAh ಬ್ಯಾಟರಿಯನ್ನು ಹೊಂದಿದ್ದು, ಕಂಪನಿಯ ಪ್ರಕಾರ, ಸರಾಸರಿ 7 ಗಂಟೆಗಳವರೆಗೆ ನಿರಂತರವಾಗಿ ವಿಡಿಯೋಗಳನ್ನ ನೋಡಬಹುದಾಗಿದೆ. ಇದಲ್ಲದೇ ವೈ-ಫೈ, ಬ್ಲೂಟೂತ್ (ವಿ 4.0), HDMI ಪೋರ್ಟ್ ಮತ್ತು 2 USB ಪೋರ್ಟ್‌ಗಳನ್ನು (1 x USB 3.0, 1 x USB 2.0) ಗಳನ್ನು ಹೊಂದಿದೆ.

ಕಾಂಪ್‌ ಬುಕ್ i360 ವಿಡಿಯೋ ಚಾಟ್ ನಡೆಸುವ ಸಲುವಾಗಿ ಮುಂಭಾಗದಲ್ಲಿ ಕ್ಯಾಮೆರಾವನ್ನು ಹೊಂದಿದೆ. ಡ್ಯುಯಲ್ ಸ್ಪೀಕರ್‌ಗಳು ಮತ್ತು 3.5 ಎಂಎಂ ಜ್ಯಾಕ್‌ ಸಹ ನೀಡಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.