ಗೂಗಲ್‌ ಪ್ಲೇಸ್ಟೋರ್‌, ಆ್ಯಪ್‌ ಸ್ಟೋರ್‌ ಬದಲಿಗೆ ಬರಲಿದೆಯೇ ಭಾರತದ್ದೇ ಆ್ಯಪ್‌ ಸ್ಟೋರ್‌ ಆರಂಭವಾಗುವುದೆ?

ಭಾರತದಲ್ಲಿ ಈಗ ಮೊಬೈಲ್‌ ಆ್ಯಪ್‌ ಗಳದ್ದೇ ಸದ್ದು. ಚೀನಿ ಆ್ಯಪ್‌ಗಳು ಬ್ಯಾನ್‌ ಆಗುತ್ತಿವೆ. ಭಾರತದ್ದೇ ಪರ್ಯಾಯ ಆ್ಯಪ್‌ಗಳು ಸಿದ್ಧವಾಗುತ್ತಿವೆ. ಅಷ್ಟೇ ಅಲ್ಲ, ಈಗ ಭಾರತದ್ದೇ ಒಂದು ಆ್ಯಪ್‌ ಸ್ಟೋರ್‌ ರೂಪಿಸುವ ಸಿದ್ಧತೆ ನಡೆದಂತಿದೆ

ಭಾರತದಲ್ಲಿ ಮೊಬೈಲ್‌ ಆ್ಯಪ್‌ಗಳು ಈಗ ಹೆಚ್ಚು ಮಹತ್ವ ಪಡೆದುಕೊಂಡಿವೆ. ಕೇವಲ ಔದ್ಯಮಿಕವಷ್ಟೇ ಅಲ್ಲ, ರಾಜಕೀಯ ಮಹತ್ವವನ್ನು ಪಡೆದುಕೊಂಡಿವೆ. ಹಾಗಾಗಿ ದೇಶ ಹಲವು ಸಮಸ್ಯೆಗಳ ನಡುವೆ ಆ್ಯಪ್‌ ನಿಷೇಧ, ದೇಸಿ ಆ್ಯಪ್‌ ರಚನೆ ಇತ್ಯಾದಿಗಳ ಚರ್ಚೆ ನಡೆದಿದೆ.

ಈ ಚರ್ಚೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು ಭಾರತ ತಮ್ಮದೇ ಆದ ಆ್ಯಪ್‌ ಸ್ಟೋರ್‌ ಹೊಂದುವ ಸುಳಿವು ಸಿಕ್ಕಿದೆ. ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಈ ಕುರಿತು ಸುಳಿವು ನೀಡಿರುವ ಬಗ್ಗೆ ಆಯ್ದೆ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಗೂಗಲ್‌ನ ಏಕಸ್ವಾಮ್ಯವನ್ನು ತಡೆಯಬೇಕು, ಈ ಕ್ಷೇತ್ರದಲ್ಲೂ ಆತ್ಮನಿರ್ಭರತೆಯನ್ನು ಸಾಧಿಸಲು ಸರ್ಕಾರ ಆಲೋಚಿಸುತ್ತಿದೆ ಎನ್ನಲಾಗುತ್ತಿದೆ. ಗೂಗಲ್‌ ತನ್ನ ಪ್ಲೇ ಸ್ಟೋರ್‌ನಿಂದ ಪೇಟಿಎಂ ಆ್ಯಪ್‌ ಇತ್ತೀಚೆಗೆ ತೆಗೆದು ಹಾಕಿತ್ತು. ಸಾಫ್ಟ್‌ಬ್ಯಾಂಕ್‌

ಸರ್ಕಾರಿ ಅಧಿಕಾರಿಯೊಬ್ಬರ ಮೂಲಕ ಹೊರಬಿದ್ದಿದೆ ಎನ್ನಲಾದ ಈ ಮಾಹಿತಿಯ ಪ್ರಕಾರ, ದೇಶದಲ್ಲಿ 50 ಕೋಟಿ ಸ್ಮಾರ್ಟ್‌ ಫೋನ್‌ ಬಳಕೆದಾರರಿದ್ದಾರೆ. ಬಹುತೇಕ ಗೂಗಲ್‌ ಆಂಡ್ರಾಯ್ಡ್‌ ಫೋನ್‌ಗಳನ್ನು ಬಳಸುತ್ತಾರೆ. ಸಾಫ್ಟ್‌ಬ್ಯಾಂಕ್‌ ಬೆಂಬಲಿತ ಪೇಟಿಎಂ ಗೂಗಲ್‌ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕೆ ಆ್ಯಪ್‌ ಅನ್ನು ಕಿತ್ತು ಹಾಕಿತ್ತು.

ಈ ಹಿನ್ನೆಲೆಯಲ್ಲಿ ಮಹತ್ವದ ಪಡೆದುಕೊಂಡು ದೇಶಿ ಆ್ಯಪ್‌ ಸ್ಟೋರ್‌ ಹೊಂದು ಚರ್ಚೆ, ಈಗ ಸಾಕಷ್ಟು ಬೆಳವಣಿಗೆಗಳನ್ನು ಕಂಡಂತಿದೆ. ದೇಶದ ಸ್ಟಾರ್ಟ್‌ ಅಪ್‌ಗಳು, ಆರ್ಥಿಕ ಕಾರಣಗಳಿಗೆ, ಟೆಕ್‌ದೈತ್ಯ ಕಂಪನಿಗಳ ಸವಾರಿಯನ್ನು ತಪ್ಪಿಸಿಕೊಳ್ಳುವುದಕ್ಕೆ ದೇಸಿ ಆ್ಯಪ್‌ ಸ್ಟೋರ್‌ ಹೊಂದು ಬಗ್ಗೆ ಆಸಕ್ತಿ ಹೊಂದಿದ್ದಾರೆ.

ಗೂಗಲ್‌ನೊಂದಿಗೆ ಹಣಕಾಸಿನ ಪಾಲುದಾರಿಕೆಯ ವಿಷಯದಲ್ಲಿ ಎತ್ತಿದೆ. ಜೊತೆಗೆ. ಇತ್ತೀಚೆಗೆ ಪೇಟಿಎಂ ಅಲ್ಲದೆ, ಗೂಗಲ್‌ ಸಂಸ್ಥೆಯಿಂದ ಹಾಟ್‌ಸ್ಟಾರ್‌, ಸ್ವಿಗ್ಗಿ, ಝ್ಯೊಮ್ಯಾಟೊ ಸೇರಿದಂತೆ ಕೆಲವು ಆ್ಯಪ್‌ಗಳಿಗೆ ಎಚ್ಚರಿಕೆಯನ್ನು ನೀಡಿರುವುದು ಆ್ಯಪ್‌ ಸ್ಟೋರ್‌ ಹೊಂದು ಚರ್ಚೆಗೆ ಬಲ ಬಂದಿದೆ.

ಗೂಗಲ್‌ಗೆ ಪ್ರಸ್ತುತ 30% ಸೇವಾ ಶುಲ್ಕ ನೀಡಬೇಕಾಗಿದ್ದು, ಇದರ ಜೊತೆಗೆ ಗ್ರಾಹಕರ ಸಂಖ್ಯೆ ಹೆಚ್ಚಿದಂತೆ ಅದಕ್ಕೂ ಹಣ ತೆರಬೇಕು ಎಂಬುದು ಸ್ಟಾರ್ಟಪ್‌ಗಳ ವಾದ. ಹಾಗಾಗಿಯೇ ದೇಸಿ ಆ್ಯಪ್‌ ಸ್ಟೋರ್‌ ಆರಂಭಿಸುವುದಕ್ಕೆ 150 ಸ್ಟಾರ್ಟ್‌ಅಪ್‌ಗಳು ಆಸಕ್ತಿ ತೋರಿವೆ. ಇತ್ತೀಚೆಗೆ ಪಬ್‌ಜಿಗೆ ಪರ್ಯಾಯವಾಗಿ ಗಮನಸೆಳೆದಿರುವ ಫೌಜಿ ಹೆಸರಿನ ಆ್ಯಪ್‌ ರೂಪಿಸಿರುವ ಬೆಂಗಳೂರು ಮೂಲದ ಎನ್‌ಕೋರ್‌ ಸಂಸ್ಥೆ ಸಂಸ್ಥಾಪಕ ವಿಶಾಲ್‌ ಗುಂಡಾಲ್‌ ಕೂಡ ಸಮರ್ಥಿಸಿ ಹೇಳಿಕೆ ನೀಡಿರುವುದು ವರದಿಯಾಗಿದೆ.

ಇದನ್ನೂ ಓದಿ | ವಿಶ್ವ ಪ್ರವಾಸೋದ್ಯಮ ದಿನ | ಕೂತಲ್ಲೇ ಖರ್ಚಿಲ್ಲದೆ ಈ ವಿಶ್ವ ಪ್ರಸಿದ್ಧ ಮ್ಯೂಸಿಯಂಗಳ ಪ್ರವಾಸ ಮಾಡಿ!

ಭಾರತದ ಅತಿ ದೊಡ್ಡ ಉದ್ಯಮ ಸಂಸ್ಥೆ ರಿಲಯನ್ಸ್‌ನಲ್ಲಿ ಹಣ ಹೂಡಿಕೆ ಮಾಡಿರುವ ಗೂಗಲ್‌, ತನ್ನದೇ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಉತ್ಸಾಹದಲ್ಲಿದೆ. ಜಿಯೋ ಮತ್ತು ಗೂಗಲ್‌ ಜೊತೆಯಾಗಿ ಅಗ್ಗದ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ತರುವ ಬಗ್ಗೆ ಚಿಂತನೆ ನಡೆಸಿವೆ. ಇಂತಹ ಹೊತ್ತಲ್ಲಿ ಈ ಬೆಳವಣಿಗೆ ಯಾವ ತಿರುವು ಪಡೆಯುತ್ತದೆ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.