ಇಲ್ಲಿದೆ ಕರೋನಾ ಕವಚ; ಸೋಂಕು ಟ್ರ್ಯಾಕ್‌ ಮಾಡಲು ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ

ಸೋಂಕು ಎಲ್ಲಿಂದ? ಹೇಗೆ ಹರಡುತ್ತದೆ? ಎಂಬುದೇ ಎಲ್ಲರ ಆತಂಕ, ಅಲ್ಲಿ ಕಾಣಿಸಿಕೊಂಡಿದೆ, ಇಲ್ಲಿ ಕಾಣಿಸಿಕೊಂಡಿದೆ ಎಂದು ಸುದ್ದಿ ಕೇಳಿದಾಗ ಆತಂಕವಾಗುವುದು ಸಹಜ. ಈ ನಿಟ್ಟಿನಲ್ಲಿ ನೆರವಾಗಲು ಭಾರತ ಸರ್ಕಾರ ಕರೋನಾ ಕವಚ ಹೆಸರಿನ ಆ್ಯಪ್‌ ಬಿಡುಗಡೆಗೆ ಸಿದ್ಧವಾಗಿದೆ. ಇಲ್ಲಿದೆ ಅದರ ಬೀಟಾ ವರ್ಷನ್‌

ಕರೋನಾ ವೈರಸ್‌ ಸೋಂಕಿನ ಮೇಲೆ ಕಣ್ಣಿಡಲು, ಕ್ಷಿಪ್ರಗತಿಯಲ್ಲಿ ನೆರವು ಪೂರೈಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್‌ ಅಂಡ್‌ ಇನ್‌ಫರ್ಮೇಷನ್‌ ಟೆಕ್ನಾಲಜಿ ಸಚಿವಾಲಯ ‘ಕರೋನಾ ಕವಚ’ ಹೆಸರಿನ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಬಿಡುಗಡೆಗೆ ಸಿದ್ಧತೆ ನಡೆಸಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಈ ಆಪ್‌ ನೆರವಾಗಲಿದೆ.

ಕರೋನಾ ಕವಚ ಬೀಟಾ ಆವೃತ್ತಿ ಈಗಾಗಲೇ ಗೂಗಲ್‌ ಪ್ಲೇ ಸ್ಟೋರಿನಲ್ಲಿ ಲಭ್ಯವಿದ್ದು, ಬಳಕೆದಾರರ ಅನುಭವ, ಅಭಿಪ್ರಾಯವನ್ನು ಸಚಿವಾಲಯ ಸಂಗ್ರಹಿಸುತ್ತಿದೆ. ಹಾಗೆಯೇ ತಂತ್ರಜ್ಞರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದು, ಸೂಕ್ತ ಹಾಗೂ ಅಗತ್ಯ ಬದಲಾವಣೆಗಳೊಂದಿಗೆ ಶೀಘ್ರದಲ್ಲಿ ಅಧಿಕೃತ ಆವೃತ್ತಿ ಲಭ್ಯವಾಗಲಿದೆ.

ಈ ಆಪ್‌ ಏನು ಮಾಡುತ್ತದೆ?

ನಿಮ್ಮ ಫೋನ್‌ ನಂಬರ್ ದಾಖಲಿಸಿ ಆ್ಯಪ್‌ನಲ್ಲಿ ನಿಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು. ಇಷ್ಟೆ. ನಂತರ ಆ್ಯಪ್‌ ನಿಮ್ಮ ಜಿಪಿಎಸ್‌ ಲೊಕೇಶನ್‌ ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ ಮಾಹಿತಿಯೊಂದಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ಪ್ರತಿಕ್ಷಣ ಸಂಗ್ರಹಿಸಲಾಗುವ ಮಾಹಿತಿಯೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಒಂದು ವೇಳೆ ಮೊಬೈಲ್‌ ಬಳಕೆದಾರನ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿಗೆ ಸೋಂಕಿಗೆ ಒಳಗಾಗಿದ್ದರೆ, ತಕ್ಷಣ ಅಲರ್ಟ್‌ ಬರುತ್ತದೆ. ಆ್ಯಪ್‌ನ ಮೇಲ್ಭಾಗದಲ್ಲಿ ವಿವಿಧ ಬಣ್ಣಗಳ ಮೂಲಕ ಸ್ಥಿತಿಯನ್ನು ಸೂಚಿಸುತ್ತದೆ. ಯಾವುದೇ ಸೋಂಕು ಇಲ್ಲದೇ ಇದ್ದಾಗ ಹಸಿರು, ಸೋಂಕಿನ ಸಂಪರ್ಕ ಇರುವ ವ್ಯಕ್ತಿ ಸಂಪರ್ಕಕ್ಕೆ ಬಂದಿದ್ದಲ್ಲಿ, ನೀಲಿ, ಸೋಂಕಿದ್ದಲ್ಲಿ ಕೆಂಪು ಬಣ್ಣದ ಮೂಲಕ ಸೂಚಿಸುತ್ತದೆ.

ಎಷ್ಟು ಜನ ತಪಾಸಣೆ ಮಾಡಲಾಗಿದೆ, ಎಷ್ಟು ಸಾವು ಸಂಭವಿಸಿವೆ, ಸೋಂಕು ದೃಢಪಟ್ಟಿರುವ ಪ್ರಕರಣಗಳೆಷ್ಟು, ಸೋಂಕಿರುವ ಪ್ರಕರಣಗಳೆಷ್ಟು ಎಂಬ ಮಾಹಿತಿಯನ್ನು ಆ್ಯಪ್‌ ಪ್ರತಿ ಕ್ಷಣ ನೀಡುತ್ತದೆ. ಜೊತೆಗೆ ಪ್ರಶ್ನಾವಳಿಯನ್ನು ನೀಡಿದ್ದು, ಸೋಂಕಿನ ಬಗ್ಗೆ ಅನುಮಾನ ಇರುವವರು ಈ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮೂಲಕ ಖಚಿತ ಪಡಿಸುವುದಕ್ಕೆ ನೆರವಾಗುತ್ತದೆ.

ಉಸಿರಾಟದ ಸಮಸ್ಯೆ ಇರುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಉಸಿರಾಟದ ವ್ಯಾಯಾಮವನ್ನೂ ಮಾಡಿಸುತ್ತದೆ. ಹೆಲ್ಪ್‌ ಡೆಸ್ಕ್‌ನ ಸಂಪರ್ಕವೂ ಇದರಲ್ಲಿದೆ. ಇಂಗ್ಲಿಷ್‌ ಸೇರಿದಂತೆ ಭಾರತದ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಈ ಆ್ಯಪ್‌ ಲಭ್ಯವಾಗಲಿದೆ.

ಪ್ರಸ್ತುತ ಬೀಟಾ ಆವೃತ್ತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇಲ್ಲಿ ಕ್ಲಿಕ್‌ ಮಾಡಿ. ನಂತರ ಅಧಿಕೃತ ಆ್ಯಪ್‌ ಬಿಡುಗಡೆಯಾದಾಗ ಕಡ್ಡಾಯವಾಗಿ ಅಪ್‌ಡೇಟ್‌ ಮಾಡಿಕೊಳ್ಳಬೇಕಾಗುವುದು.

One thought on “ಇಲ್ಲಿದೆ ಕರೋನಾ ಕವಚ; ಸೋಂಕು ಟ್ರ್ಯಾಕ್‌ ಮಾಡಲು ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.