ವಾಟ್ಸ್ಆಪ್‌ ಖಾಸಗಿ ನೀತಿ: ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ ಭಾರತ ಸರ್ಕಾರ

ವಾಟ್ಸ್‌ಆಪ್‌ ತನ್ನ ಹೊಸ ಖಾಸಗಿ ನೀತಿ ಜಾರಿಯ ವಿಷಯದಲ್ಲಿ ಪಟ್ಟು ಬಿಡುತ್ತಿಲ್ಲ. ಬಳಕೆದಾರರ ಹಕ್ಕು ಕಸಿಯುವಂತಿರುವ ಈ ನಿಯಮಗಳಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಟ್ಸ್‌ಆಪ್ ಹಿಂದೆ ಸರಿದಿತ್ತು. ಆದರೆ ತನ್ನ ವರಸೆ ಬದಲಿಸಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಎಚ್ಚರಿಕೆ ನೀಡಿದೆ

ವಾಟ್ಸ್‌ಆಪ್‌ ತನ್ನ ಹೊಸ ಖಾಸಗಿ ನೀತಿ ಜಾರಿಯ ವಿಷಯದಲ್ಲಿ ಪಟ್ಟು ಬಿಡುತ್ತಿಲ್ಲ. ಬಳಕೆದಾರರ ಹಕ್ಕು ಕಸಿಯುವಂತಿರುವ ಈ ನಿಯಮಗಳಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಟ್ಸ್‌ಆಪ್ ಹಿಂದೆ ಸರಿದಿತ್ತು. ಆದರೆ ತನ್ನ ವರಸೆ ಬದಲಿಸಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಎಚ್ಚರಿಕೆ ನೀಡಿದೆ

ವಾಟ್ಸ್‌ಆಪ್‌ ಹೊಸ ಖಾಸಗಿ ನೀತಿಯನ್ನು ಜಾರಿಗೊಳಿಸುವುದಕ್ಕೆ ಕಳೆದ ಐದು ತಿಂಗಳಿನಿಂದ ಪ್ರಯತ್ನಿಸುತ್ತಲೇ ಇದೆ. ಬಳಕೆದಾರರು ತಮ್ಮ ಮಾಹಿತಿ ಹಂಚಿಕೊಳ್ಳುವುದಕ್ಕೆ ಸಮ್ಮತಿ ಸೂಚಿಸಲು ಒತ್ತಡ ತರುತ್ತಿರುವ ವಾಟ್ಸ್‌ಆಪ್‌ ನಿಯಮದಲ್ಲಿ ಯಾವುದೇ ಬದಲಾವಣೆ ತರದೆ ಶತಾಯಗತಾಯ ಜಾರಿಗೆ ಪ್ರಯತ್ನಿಸುತ್ತಿದೆ.

ಈಗ ಭಾರತ ಸರ್ಕಾರ ಮಧ್ಯಪ್ರವೇಶಿಸಿದ್ದು, ತಮ್ಮ ನಿಲುವನ್ನು ಬದಲಿಸಿಕೊಳ್ಳಬೇಕು ಇಲ್ಲವಾದರೆ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದೆ. ಈ ಸಂಬಂಧ ಮೇ 18ರಂದು ವಾಟ್ಸ್‌ಆಪ್‌ಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ನೋಟಿಸ್‌ ನೀಡಿದೆ.

ವಾಟ್ಸ್‌ಆಪ್‌ನ ಖಾಸಗಿನೀತಿಯು ಬೇಜವಾಬ್ದಾರಿಯಿಂದ ಕೂಡಿದ್ದು, ನ್ಯಾಯಯುತವಾಗಿಲ್ಲ. ಏಳು ದಿನಗಳ ಒಳಗೆ ಉತ್ತರಿಸುವಂತೆ ಫೇಸ್‌ಬುಕ್‌ ಮಾಲೀಕತ್ವದ ವಾಟ್ಸ್‌ಆಪ್‌ಗೆ ನೀಡಿರುವ ನೋಟಿಸ್‌ಗೆ ಸಮಾಧಾನಕರ ಉತ್ತರ ದೊರೆಯದೇ ಇದ್ದಲ್ಲಿ ಕಾನೂನು ಕ್ರಮವಷ್ಟೇ ಅಲ್ಲ, ವಾಟ್ಸ್‌ಆಪ್‌ನ ಖಾಸಗಿ ನೀತಿಯಲ್ಲಿರುವ ಅಂಶಗಳಿಗೆ ಸಂಬಂಧ ಕಠಿಣ ನಿಲುವು ತಳೆಯಲಾಗುವುದು ಎಂದು ತಿಳಿಸಿದೆ.

ಭಾರತದಲ್ಲಿ 53 ಕೋಟಿ ವಾಟ್ಸ್‌ಆಪ್‌ ಬಳಕೆದಾರರಿದ್ದು, ಭಾರತದ ಕಾನೂನು ಮತ್ತು ನಿಯಮಗಳ ನೀಡುವ ಅವಕಾಶಗಳನನ್ನು ವಾಟ್ಸ್‌ಆಪ್‌ನ ಖಾಸಗಿ ನಿಯಮಗಳು ಉಲ್ಲಂಘಿಸಿವೆ ಎಂದಿದೆ.

ಯೂರೋಪ್‌ನಲ್ಲಿ ಹೊಸ ಖಾಸಗಿ ನಿಯಮಗಳು ಜಾರಿಗೆ ಬಂದಿವೆ. ಆದರೆ ಬಳಕೆದಾರರು ತಮ್ಮ ಖಾತೆಯ ಡಿಲೀಟ್‌ ಆಗುವ ಭಯವೇ ಇಲ್ಲದೆ ನಿಯಮಗಳನ್ನು ತಿರಸ್ಕರಿಸಬಹುದಾಗಿದೆ. ಆದರೆ ಭಾರತೀಯ ಬಳಕೆದಾರರಿಗೆ ಈ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ತಕರಾರು ತೆಗೆದಿದೆ.

ಭಾರತದಲ್ಲಿ ಮಾಹಿತಿ ರಕ್ಷಣಾ ಕಾಯ್ದೆ ಎಂಬುದು ಇಲ್ಲದೇ ಇರುವುದು ಬಳಕೆದಾರರನ್ನು ಇಂತಹ ಇಬ್ಬಂದಿಗೆ ಸಿಲುಕಿಸಿದೆ ಎಂಬುದು ತಜ್ಞರ ಅಭಿಪ್ರಾಯ.

ಕೇಂದ್ರದ ನೋಟಿಸ್‌ನಿಂದ ವಾಟ್ಸ್‌ಆಪ್‌ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೇಳಿಕೆಯೊಂದು ಬಿಡುಗಡೆ ಮಾಡಿರುವ ವಾಟ್ಸ್‌ಆಪ್‌, ಈಗಾಗಲೇ ಬಹಳಷ್ಟು ಬಳಕೆದಾರರು ಹೊಸ ನಿಯಮಗಳನ್ನು ಒಪ್ಪಿಕೊಂಡಿದ್ದಾರೆ. ಈ ಹೊಸ ಅಪ್‌ಡೇಟ್‌ನಿಂದಾಗಿ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಬಳಕೆದಾರರಿಗೆ ನಿಯಮಗಳನ್ನು ಒಪ್ಪಿಕೊಳ್ಳುವಂತೆ ನೆನಪಿಸಲಾಗುವುದು ಎಂದಿದೆ.

ಈಗಾಗಲೇ ದೊಡ್ಡ ಪ್ರಮಾಣದ ಬಳಕೆದಾರರನ್ನು ಕಳೆದುಕೊಂಡಿರುವ ವಾಟ್ಸ್‌ಆಪ್‌ ತನ್ನ ಪಟ್ಟು ಸಡಿಲಿಸದೇ ಇರುವುದು ಇನ್ನಷ್ಟು ಹಾನಿ ಉಂಟಮಾಡಬಹುದು ಎನ್ನಲಾಗುತ್ತಿದೆ.

ಇವು ತಾರತಮ್ಯದಿಂದ ಕೂಡಿರುವ ನಿಯಮಗಳಾಗಿವೆ. ವಾಟ್ಸ್‌ಆಪ್‌ನ ಯುರೋಪ್‌ನ ಖಾಸಗಿ ನಿಯಮಗಳು ಭಿನ್ನವಾಗಿವೆ ಎಂದು ಸರ್ಕಾರ ಹೇಳಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.