ದೇಶದ ಮೊದಲ ಎಲೆಕ್ಟ್ರಿಕ್‌ ಮೋಬೈಕ್‌ ರಿವೋಲ್ಟ್‌ ಆರ್‌ ವಿ 400 ಮಾರುಕಟ್ಟೆಗೆ

ಭಾರತದಲ್ಲಿ ಈಗ ಎಲೆಕ್ಟ್ರಿಕ್‌ ವಾಹನಗಳ ಸದ್ದು ಜೋರಾಗುತ್ತಿದೆ. ಸ್ಕೂಟರ್‌ಗಳಿಗೆ ಒಗ್ಗಿಕೊಳ್ಳುತ್ತಿರುವ ಹೊತ್ತಲ್ಲೇ ದೇಶದ ಮೊದಲ ಎಲೆಕ್ಟ್ರಿಕ್‌ ಮೋಟರ್‌ ಬೈಕ್‌ ಬಿಡುಗಡೆಗೆ ಸಿದ್ಧವಾಗಿದೆ. ಇದು ಭಾರತದಲ್ಲೇ ಉತ್ಪಾದನೆಯಾದ ಬೈಕ್‌. ಆಗಸ್ಟ್‌ 28ಕ್ಕೆ ಮಾರುಕಟ್ಟೆಗೆ ಬರುತ್ತಿದೆ

  • ಟೆಕ್‌ ಕನ್ನಡ ಡೆಸ್ಕ್‌

ಈ ಲೇಖನದ ಆಡಿಯೋ ರೂಪ ಇಲ್ಲಿದೆಕ್ಲಿಕ್ ಮಾಡಿ ಕೇಳಿ

ನಿಮಗೆ ಏಥರ್‌ ಎನರ್ಜಿ ಎಂಬ ಕಂಪನಿಯ ಹೆಸರು ನೆನಪಿದೆಯೇ?ಬೆಂಗಳೂರು ಮೂಲದ ಈ ಕಂಪನಿ ದೇಶದ ಮೊದಲ ಎಲೆಕ್ಟ್ರಿಕ್‌ ಸ್ಕೂಟರ್‌ ಪರಿಚಯಿಸಿತು.

ಈಗ ಮೈಕ್ರೋ ಮ್ಯಾಕ್ಸ್‌ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ರಿವೋಲ್ಟ್‌ ಕಂಪನಿಯ ಸಿಇಒ ರಾಹುಲ್‌ ಶರ್ಮಾ ಸರದಿ. ರಿವೋಲ್ಟ್‌ ಕಂಪನಿಯ ಮೂಲಕ ಮೋಟರ್‌ಬೈಕ್‌ ಅನ್ನು ತರುತ್ತಿದ್ದಾರೆ. ವಿಶೇಷವೆಂದರೆ ಇದು ಎಲೆಕ್ಟ್ರಿಕ್‌ ಮೋಟರ್‌ ಬೈಕ್‌. ಅಷ್ಟೇ ಅಲ್ಲ ಇದು ಬುದ್ಧಿವಂತ ಮೋಟರ್‌ ಬೈಕ್‌. ಯಾಕೆಂದರೆ ಇದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಒಳಗೊಂಡಿರುವ ಬೈಕ್‌.

ಕಳೆದ ಜೂನ್‌ನಲ್ಲೇ ಈ ಬೈಕ್‌ ಅನ್ನು ರಿವೋಲ್ಟ್‌ ಕಂಪನಿ ಅನಾವರಣ ಮಾಡಿದೆ. ರಿವೋಲ್ಟ್‌ ಆರ್‌ ವಿ400 ಹೆಸರಿನ ಈ ಮಾಡೆಲ್‌ 4ಜಿ ಸಿಮ್‌ ಕಾರ್ಡ್‌ ಒಳಗೊಂಡಿದೆ. ಇದು ಬೈಕ್‌ಗೆ ಇಂಟರ್ನೆಟ್‌ ಸೇವೆಯನ್ನು ಕಲ್ಪಿಸುತ್ತದೆ. ಒಟಿಎ ಅಪ್‌ಡೇಟ್‌, ರಿಮೋಟ್‌ ನಿಯಂತ್ರಣ ಮತ್ತು ಬೈಕ್‌ ಸ್ಥಳವನ್ನು ತಿಳಿಯುವುದು ಮುಂತಾದ ಸ್ಮಾರ್ಟ್‌ ಫೀಚರ್‌ಗಳು ಇಂಟರ್ನೆಟ್‌ನಿಂದಾಗಿ ಸಕ್ರಿಯವಾಗಿರಲಿವೆ.
ಗಂಟೆಗೆ ಗರಿಷ್ಠ 85 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಈ ಬೈಕ್‌, ಎಲ್‌ಇಡಿ ಹೆಡ್‌ ಲ್ಯಾಂಪ್‌ಗಳನ್ನು ಹೊಂದಿದೆ. ಒಂದು ಗಂಟೆ ಚಾರ್ಜ್‌ ಮಾಡಿದರೆ 156 ಕಿ.ಮೀ. ದೂರ ಚಲಿಸಬಲ್ಲದು.

ಹರ್ಯಾಣದ ಮಣೇಸರ್‌ನಲ್ಲಿ ಉತ್ಪಾದನೆಯಾಗುತ್ತಿರುವ ಈ ಬೈಕ್‌ ಈ ತಿಂಗಳಾಂತ್ಯದಲ್ಲಿ ದೇಶದಾದ್ಯಂತ ಲಭ್ಯವಾಗಲಿವೆ. ಪ್ರೀ ಬುಕಿಂಗ್‌ ಅನ್ನು ಮೊದಲು ದೆಹಲಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಈಗ ಪೂನಾ, ಬೆಂಗಳೂರು, ಹೈದರಾಬಾದ್‌, ನಾಗ್‌ಪುರ, ಅಹ್ಮದಾಬಾದ್‌ ಮತ್ತು ಚೆನ್ನೈಗಳಲ್ಲಿ ಮುಂದಿನ ನಾಲ್ಕು ತಿಂಗಳುಗಳಲ್ಲಿ ಈ ಬೈಕ್‌ ಲಭ್ಯವಾಗಲಿದೆ. ಕೊಳ್ಳುವ ಉತ್ಸಾಹದಲ್ಲಿರುವವರು ಆಮೆಜಾನ್‌ ವೆಬ್‌ಸೈಟ್‌ಗೆ ಭೇಟಿ ನೀಡಿ 1000 ರೂ. ಟೋಕನ್‌ ಮೊತ್ತವನ್ನು ಪಾವತಿಸಿ ಬುಕಿಂಗ್‌ ಮಾಡಬಹುದು.

ಧ್ವನಿ ನೆರವು: ಶರತ್‌ ಬಿಜೂರು