ಭಾರತ ಸರ್ಕಾರ ಚೀನಾಗೆ ಪಾಠ ಕಲಿಸುವ ಮತ್ತು ನಮ್ಮ ದೇಶದಿಂದ ಚೀನಾಕ್ಕೆ ಸಾಗುತ್ತಿರುವ ವೈಯಕ್ತಿಕ ಡೇಟಾ ಹರಿವನ್ನು ತಡೆಯುವ ಸಲುವಾಗಿ ಚೀನಾ ಮೂಲದ ಹಲವು ಆಪ್ ಗಳನ್ನು ನಿಷೇಧ ಮಾಡಿರುವುದು ನಿಮಗೆಲ್ಲ ತಿಳಿದೇ ಇದೆ. ಆದರೆ ಹಲವು ಚೀನಾ ಆಪ್‌ಗಳ ಬಳಕೆಗೆ ದಾಸರಾಗಿದ್ದ ಜನರಿಗೆ ಬದಲಿ ಆಪ್ ಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಹಲವು ಗೊಂದಲಗಳು ಇದ್ದವು.
ಎಲ್ಲದಕ್ಕಿಂತ ಹೆಚ್ಚಾಗಿ ಚೀನಾದ ಟಿಕ್ ಟಾಕ್ ಬದಲಿಗೆ ಯಾವ ಆಪ್ ಬಳಕೆ ಮಾಡಬೇಕು ಎಂದು ಹುಡುಕುತ್ತಿದ್ದವರಿಗೆ ಮಾರುಕಟ್ಟೆಯಲ್ಲಿ ಹಲವು ಆಪ್‌ಗಳು ಕಾಣಿಸಿಕೊಂಡರೂ ಸಹ ಆಯ್ಕೆ ಮಾಡುವುದು ಕಷ್ಟವಾಗಿತ್ತು. ಆದರೆ ಈಗ ಅದು ಸುಲಭವಾಗಿದೆ.
ಟಿಕ್ ಟಾಕ್ ಬಂದ್ ಆಗಿದ್ದೇ ಆಗಿದ್ದು, ಟೆಕ್ ದೈತ್ಯ ಫೇಸ್‌ಬುಕ್ ತನ್ನ ಜನಪ್ರಿಯ ಆಪ್ ಇನ್ಸ್ಟಾಗ್ರಾಮ್‌ನಲ್ಲಿಯೇ ಟಿಕ್ ಟಾಕ್ ಮಾದರಿ ವಿಡಿಯೋಗಳನ್ನು ಕ್ರಿಯೇಟ್ ಮಾಡಲು ಹೊಸದಾಗಿ ಆಯ್ಕೆಯೊಂದನ್ನು ನೀಡಿದ್ದು, ಅದಕ್ಕೆ ರೀಲ್ಸ್ ಎಂದು ನಾಮಕರಣವನ್ನು ಮಾಡಿದೆ.
ಇನ್ಸ್ಟಾಗ್ರಾಮ್ ರೀಲ್ಸ್ ಹಂತ ಹಂತವಾಗಿ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದು, ಇದನ್ನು ಬಳಕೆ ಮಾಡುವುದು ಹೇಗೆ ಎಂಬುದನ್ನು ಸುಲಭವಾಗಿ ತಿಳಿಸುವ ಪ್ರಯತ್ನ ಇದಾಗಿದೆ.
ನೀವು ಈ ಹಂತಗಳನ್ನು ಅನುಸರಿಸಿದರೆ ರೀಲ್ಸ್ ರಚಿಸುವುದು ತುಂಬಾ ಸರಳವಾಗಿದೆ.
- ಮೊದಲಿಗೆ ನೀವು ಇನ್ಸ್ಟಾಗ್ರಾಮ್ ತೆಗೆದು, ಮೇಲೆ ಎಡಭಾಗದಲ್ಲಿರುವ ಕ್ಯಾಮೆರಾ ಐಕಾನ್ ಮೇಲೆ ಟ್ಯಾಪ್ ಮಾಡಿ.
- ಕೆಳಭಾಗದಲ್ಲಿ ನೀವು ಲೈವ್, ಸ್ಟೋರಿ ಮತ್ತು ರೀಲ್ಸ್ ನಂತಹ ಆಯ್ಕೆಗಳನ್ನು ನೋಡುತ್ತೀರಿ. ರೀಲ್ಸ್ ಮೇಲೆ ಟ್ಯಾಪ್ ಮಾಡಿ.
- ಈಗ ನೀವು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ರಚಿಸಲು ಪ್ರಾರಂಭಿಸಬಹುದು. (ಯಾವುದೇ ವೀಡಿಯೊ ಕ್ಲಿಪ್ ಅನ್ನು 15 ಸೆಕೆಂಡುಗಳಷ್ಟು ಮಾಡಬಹುದು)
- ಇನ್ಸ್ಟಾಗ್ರಾಮ್ ರೀಲ್ಸ್ ರೆಕಾರ್ಡ್ ಮಾಡಲು, ದೊಡ್ಡ ಬಿಳಿ ಐಕಾನ್ ಟ್ಯಾಪ್ ಮಾಡಿ. ಅದೇ ಬಟನ್ ರೆಕಾರ್ಡಿಂಗ್ ಅನ್ನು ಸಹ ನಿಲ್ಲಿಸಲು ನಿಮಗೆ ಅನುಮತಿಸುತ್ತದೆ.
ಇದನ್ನು ನೋಡಿ: ಬಡ ದೇಶಗಳಿಗೆ ಸಹಾಯ ಮಾಡುವ ಮುಖವಾಡ ತೊಟ್ಟ ದೈತ್ಯ ಟೆಕ್ ಕಂಪನಿಗಳ ಮೊದಲ ಹೆಜ್ಜೆ…!
ನೀವು ರೆಕಾರ್ಡಿಂಗ್ ಪ್ರಾರಂಭಿಸುವ ಮೊದಲು ಕೆಲವು ಎಫೆಕ್ಟ್‌ಗಳನ್ನು ಸೇರಿಸಬಹುದು.
- ವೀಡಿಯೊ ರೆಕಾರ್ಡಿಂಗ್ ವೇಗವನ್ನು ಸರಿಹೊಂದಿಸಲು ಪ್ಲೇ ಬಟನ್‌ನಂತೆ ಕಾಣುವ ಐಕಾನ್ ಟ್ಯಾಪ್ ಮಾಡಿ. ಇಲ್ಲಿ ವೀಡಿಯೊಗಳನ್ನು 0.3x ವರೆಗೆ ನಿಧಾನವಾಗಿ ಮತ್ತು 3x ವರೆಗೆ ವೇಗಗೊಳಿಸಬಹುದು.
- ನಿಮ್ಮ ವೀಡಿಯೊಗಳಿಗೆ ಎಫೆಕ್ಟ್‌ಗಳನ್ನು ಸೇರಿಸಲು, ನಗು ಬಟನ್ ಟ್ಯಾಪ್ ಮಾಡಿ ಮತ್ತು ಬಲಕ್ಕೆ ಸ್ವೈಪ್ ಮಾಡಿ. ಇದು ಲಭ್ಯವಿರುವ ಎಲ್ಲ ಎಫೆಕ್ಟ್‌ಗಳನ್ನು ನಿಮಗೆ ತೋರಿಸುತ್ತದೆ.
- ನೀವು ಇಷ್ಟಪಡುವದನ್ನು ನೀವು ಆರಿಸಿಕೊಳ್ಳಬಹುದು. ಎಫೆಕ್ಟ್ ಐಕಾನ್ ದೊಡ್ಡ ಬಿಳಿ ವೃತ್ತದೊಳಗೆ ತೋರಿಸುತ್ತದೆ ಮತ್ತು ರೆಕಾರ್ಡಿಂಗ್ ಪ್ರಾರಂಭಿಸಲು ನೀವು ಅದನ್ನು ಟ್ಯಾಪ್ ಮಾಡಬಹುದು.
- ಯಾವುದೇ ವೀಡಿಯೊ ರೆಕಾರ್ಡ್ ಮಾಡುವ ಮೊದಲು ಮೂರು ಸೆಕೆಂಡುಗಳ ಟೈಮರ್ ಅನ್ನು ಹೊಂದಿಸಲು ರೀಲ್ಸ್ ನಿಮಗೆ ಅನುಮತಿಸುತ್ತದೆ. ಅದಕ್ಕಾಗಿ ಎಡಭಾಗದಲ್ಲಿರುವ ಟೈಮರ್ ಐಕಾನ್ ಮೇಲೆ ಟ್ಯಾಪ್ ಮಾಡಿ.
- ನೀವು ರೆಕಾರ್ಡಿಂಗ್ ಪ್ರಾರಂಭಿಸಿದಾಗ, ವೀಡಿಯೊ ಪ್ರಾರಂಭವಾಗುವ ಮೊದಲು ನೀವು ಮೂರು ಸೆಕೆಂಡುಗಳ ಟೈಮರ್ ಅನ್ನು ಪರದೆಯ ಮೇಲೆ ನೋಡುತ್ತೀರಿ.
- ಅಂತಿಮವಾಗಿ, ಎಡಭಾಗದಲ್ಲಿರುವ ಸಂಗೀತ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ನೀವು ಅದಕ್ಕೆ ಮ್ಯಾಸಿಕ್ ಕೂಡ ಸೇರಿಸಬಹುದು. ಇಲ್ಲಿ ನೀವು ಆಯ್ಕೆ ಮಾಡುವ ಹಾಡಿನ ಸಾಹಿತ್ಯವನ್ನು ಪರದೆಯ ಮೇಲೆ ನೋಡಬಹುದು ಮತ್ತು ನೀವು ಬಳಸಲು ಬಯಸುವ ಹಾಡಿನ ಯಾವುದೇ ಭಾಗವನ್ನು ಆಯ್ಕೆ ಮಾಡಬಹುದು.
- ಟಿಕ್‌ಟಾಕ್ ನಿಮಗೆ ಪ್ರತಿ ಹಾಡಿಗೆ ನಿರ್ದಿಷ್ಟ 30 ಸೆಕೆಂಡುಗಳ ಕ್ಲಿಪ್ ಅನ್ನು ಮಾತ್ರ ಅನುಮತಿಸಿದೆ, ಆದರೆ ಇನ್‌ಸ್ಟಾಗ್ರಾಮ್ ರೀಲ್ಸ್ ನಲ್ಲಿ ಯಾವುದೇ ಟ್ರ್ಯಾಕ್‌ನ ನಿಮ್ಮ ನೆಚ್ಚಿನ ಭಾಗಗಳನ್ನು ಆಯ್ಕೆ ಮಾಡಲು ನಿಮಗೆ ಸ್ವಾತಂತ್ರ್ಯವಿದೆ.
- ಲಿಪ್-ಸಿಂಕ್ ವೀಡಿಯೊಗಳನ್ನು ರಚಿಸಲು ವೀಡಿಯೊವನ್ನು ರೆಕಾರ್ಡ್ ಮಾಡುವ ಮೊದಲು ನೀವು ಸಂಗೀತವನ್ನು ಸೇರಿಸಬಹುದು.