ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಇಸ್ರೋದಿಂದ 3 ಉಚಿತ ಆನ್‌ಲೈನ್‌ ಕೋರ್ಸ್‌ಗಳು

ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ವಿದ್ಯಾರ್ಥಿಗಳಿಗೆ ವಿಶೇಷ ಕೋರ್ಸ್‌ಗಳನ್ನು ಅಧ್ಯಯನ ಮಾಡುವುದಕ್ಕೆ ಉಚಿತ ಅವಕಾಶವನ್ನು ನೀಡುತ್ತಿದೆ. ಈ ಕೋರ್ಸ್‌ಗಳನ್ನು ಮನೆಯಲ್ಲಿದ್ದೇ ಕಲಿಯಬಹುದು. ನೀವೂ ಅರ್ಜಿ ಸಲ್ಲಿಸಿ

ಭಾರತೀಯ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶವನ್ನು ನೀಡುತ್ತಿದೆ. ಜಿಐಎಸ್‌, ಜಿಯೋ ಕಂಪ್ಯೂಟೇಷನ್‌ ಮತ್ತು ಜಿಯೊವೆಬ್‌ ಸೇವೆ ಕುರಿತ ಆನ್‌ಲೈನ್‌ ಕೋರ್ಸ್‌ಗಳನ್ನು ಅರ್ಜಿ ಕರೆದಿದೆ.

7 ರಿಂದ 12 ದಿನಗಳ ಕಾಲ ನಡೆಯಲಿರುವ ಈ ಕೋರ್ಸ್‌ಗಳಿಗೆ ಆಸಕ್ತ ವಿದ್ಯಾರ್ಥಿಗಳು ಒಂದು ಅಥವಾ ಮೂರೂ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು.

ಜಿಐಎಸ್‌ ಕೋರ್ಸ್‌

ಜಿಯೋಗ್ರಾಫಿಕಲ್‌ ಇನ್‌ಫರ್ಮೇಷನ್‌ ಸಿಸ್ಟಮ್‌ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಭೌಗೋಳಿಕ ವಿದ್ಯಮಾನಗಳು, ಪರಿಕಲ್ಪನೆಗಳ ಮತ್ತು ಉದಾಹರಣೆಗಳನ್ನು ಪರಿಚಯಿಸಲಾಗುತ್ತದೆ. ಇದು ಅಕ್ಟೋಬರ್‌ 15ರವರೆಗೆ ನಡೆಯಲಿದೆ. ನೊಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ | ಲಿಂಕ್

ಜಿಯೋ ಕಂಪ್ಯುಟೇಷನ್‌

ಭೂಗೋಳಶಾಸ್ತ್ರದ ಅಧ್ಯಯನದಲ್ಲಿ ಕಂಪ್ಯೂಟರ್‌ ತಂತ್ರಜ್ಞಾನ ಅನ್ವಯಿಸುವ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಬಗೆಯನ್ನು ಈ ಕೋರ್ಸ್‌ ತಿಳಿಸುತ್ತದೆ. ಅಕ್ಟೋಬರ್‌ 19ರಿಂದ ಅಕ್ಟೋಬರ್ 29ರವರೆಗೆ ಕೋರ್ಸ್‌ ನಡೆಯಲಿದೆ. ನೊಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ | ಲಿಂಕ್

ಜಿಯೋವೆಬ್‌ ಸೇವೆ

ರಿಮೋಟ್‌ ಸೆನ್ಸಿಂಗ್‌ ಅಪ್ಲಿಕೇಷನ್‌ಗಳು, ಬೆಳೆ ಸಂಪನ್ಮೂಲ ಅರಿಯುವ ಜಿಎಸ್‌ ಅಪ್ಲಿಕೇಷನ್ಸ್‌ ಮುಂತಾದ ವಿಷಯಗಳನ್ನು ಬಗ್ಗೆ ತಿಳಿಸಿಕೊಡಲಾಗುತ್ತದೆ. ಕೋರ್ಸ್‌ ನವೆಂಬರ್ 2ರಿಂದ 20ರವರೆಗೆ ನಡೆಯಲಿದೆ. ನೊಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ | ಲಿಂಕ್

ಕೋರ್ಸ್‌ಗೆ ನೊಂದಾಯಿಸಿಕೊಂಡು ಹಾಜರಾಗುವವರು 70% ಹಾಜರಾತಿ ಮತ್ತು 40% ಅಂಕಗಳೊಂದಿಗೆ ಕೋರ್ಸ್‌ ಪೂರ್ಣಗೊಳಿಸಿದ ಮೇಲೆ ಪ್ರಮಾಣ ಪತ್ರ ನೀಡಲಾಗುತ್ತದೆ. ಕೋರ್ಸ್‌ ವೇಳೆಯಲ್ಲಿ ವಿವಿಧ ಮಾಹಿತಿ ಸಂಪನ್ಮೂಲಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ ಎಂದು ಇಸ್ರೋ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.