ಕರೋನ ಕಳಕಳಿ | ಸೋಂಕಿನ ಸರಪಳಿ ಒಡೆಯಲು ಜಪಾನಿ ವೈದ್ಯರು ಸೂಚಿಸಿದ ಔಷಧಿ ಇದು!

ಕರೋನಾ ವೈರಸ್‌ಗೆ ಇನ್ನೂ ಲಸಿಕೆ ಲಭ್ಯವಾಗಿಲ್ಲ. ಆದರೆ ಕೆಲವು ರೋಗನಿರೋಧಕ ಔಷಧಿಗಳನ್ನು ಚಿಕಿತ್ಸೆ ಬಳಸಲಾಗುತ್ತಿದೆ. ಆದರೆ ಜಪಾನಿನ ವೈದ್ಯ ತಂಡವೊಂದು ಔಷಧವನ್ನು ಸೂಚಿಸಿದ್ದು, ಇದು ಸೋಂಕು ಹರಡುವ ವೈರಸ್‌ ನಿಯಂತ್ರಿಸುತ್ತದೆ ಎಂದಿದ್ದಾರೆ

ಸಾಂದರ್ಭಿಕ ಚಿತ್ರ

ಕರೋನಾ ವೈರಸ್‌ ಸೋಂಕನ್ನು ನಿಯಂತ್ರಿಸುವ ಸವಾಲು ಜಗತ್ತಿನ ಮುಂದಿದೆ. ನಿರ್ದಿಷ್ಟವಾದ ಲಸಿಕೆ ಪತ್ತೆಯಾಗದೆ ಇರುವುದರಿಂದ ಸೋಂಕು ನಿಯಂತ್ರಿಸುವುದು ಈಗಲೂ ಸವಾಲಾಗಿಯೇ ಉಳಿದಿದೆ. ಪ್ರಸ್ತುತ ಲೊಪಿನಾವೈರ್‌, ರೆಮಿಡೆಸ್ವಿರ್‌, ಕ್ಲೋರೊವಿನ್‌ ಪರಿಣಾಮಕಾರಿ ಔಷಧಿಯಾಗಿ ಬಳಕೆಯಾಗುತ್ತಿವೆ. ಆದರೆ ಇವು ನಿರ್ದಿಷ್ಟವಾಗಿ ಕರೋನಾ ವೈರಸ್‌ ನಿಯಂತ್ರಿಸುವುದಕ್ಕಾಗಿಯೇ ಸಿದ್ಧಪಡಿಸಿದ ಔಷಧಿಗಳಲ್ಲ.

ಸೂಕ್ತ ಕಾಲಕ್ಕೆ ತಪಾಸಣೆ ಹಾಗೂ ಔಷಧಿಗಳಿಂದ ರೋಗಿಗಳು ಗುಣಮುಖರಾಗುತ್ತಿರುವುದು ಹೌದಾದರೂ ಸೋಂಕು ವ್ಯಾಪಕವಾಗಿ ಹರಡುತ್ತಲೇ ಇದೆ. ಈ ಹೊತ್ತಲ್ಲಿ ಜಪಾನಿನ ಶುಟೊಕು ಮತ್ಸುಯಮಾ ಹಾಗೂ ಆರು ವೈದ್ಯರ ತಂಡ ಕಾರ್ಟಿಕೊಸ್ಟಿರಾಯ್ಡ್‌ ಸಿಕಲ್‌ಸೊನೈಡ್‌ ನೇರ ಕರೋನ ವೈರಸ್‌ ವಿರುದ್ಧ ಹೋರಾಡಲಿದೆ ಎಂದಿದ್ದಾರೆ.

ಮಾರ್ಚ್‌ 11ರಂದು ಜೀವ ವಿಜ್ಞಾನ ಸಂಶೋಧನೆಗಳನ್ನು ಪ್ರಕಟಿಸುವ ಕೋಲ್ಡ್‌ ಸ್ಪ್ರಿಂಗ್‌ ಹಾರ್ಬ್‌ ಲ್ಯಾಬೊರೇಟರಿಯ, ಬಯೋಆರ್‌ಎಕ್ಸ್‌ಐವಿ.ಆರ್ಗ್‌ನಲ್ಲಿ ಪ್ರಕಟವಾಗಿರುವ ಪ್ರಬಂಧದಲ್ಲಿ ವೈದ್ಯರು ಪ್ರತಿಪಾದಿಸಿದ್ದಾರೆ. ಈ ಏಳು ಮಂದಿ ವೈದ್ಉರು ಜಪಾನಿನ ಪ್ರತಿಷ್ಠಿತ ಸೋಂಕು ರೋಗ ನಿಯಂತ್ರಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾರ್ಸ್‌-ಸಿಒವಿ-2 ಎಂಬ ವೈರಸ್‌ (ಇದೇ ಕೋವಿಡ್‌-19 ಉಗಮಕ್ಕೆ ಕಾರಣ) ವುಹಾನ್‌ನಲ್ಲಿ ಕಾಣಿಸಿಕೊಂಡು ವ್ಯಾಪಕವಾಗಿ ಹರಡಲಾರಂಭಿಸಿತು. ಫೆಬ್ರವರಿ ಹೊತ್ತಿಗೆ 43 ದೇಶಗಳಲ್ಲಿ ಹರಡಿತ್ತು; ಈ ಹೊತ್ತಿಗೆ ರೂಪಾಂತರಗೊಂಡಿತ್ತು.

ವೈದ್ಯರ ಅಧ್ಯಯನದಿಂದ ತಿಳಿದು ಬಂದಿದ್ದೇನೆಂದರೆ, ಉಸಿರಾಟದ ಮೂಲಕ ಸೇವಿಸಬಹುದಾದ ಕಾರ್ಟಿಕೊಸ್ಟಿರಾಯ್ಡ್‌ ಸಿಕಲ್‌ಸೊನೈಡ್‌ ಎರಡು ಕ್ರಿಯೆಗಳನ್ನು ಏಕಕಾಲಕ್ಕೆ ಮಾಡಬಲ್ಲ ಸಾಮರ್ಥ್ಯವಿರುವ ರಾಸಾಯನಿಕ್ತ ಸಂಯುಕ್ತ ಪದಾರ್ಥ. ಇದರಲ್ಲಿ, ಸಿಕಲ್‌ಸೊನೈಡ್‌, ಮೊಮೆಟೊಸೋನ್‌, ಫ್ಯುರೇಟ್‌, ಮೈಫ್‌ಪ್ರಿಸ್ಟೋನ್‌, ಆಲ್ಗೆಸ್ಟೋನ್‌, ಅಸೆಟೊಫಿನೈಡ್‌ಗಳಿವೆ. ಇದು ಕರೋನಾ ವೈರಸ್‌ ದ್ವಿಗುಣವಾಗುವುದನ್ನು ತಡೆಯುತ್ತದೆ ಮತ್ತು ವೈರಸ್‌ನಿಂದಾಗುವ ಶ್ವಾಸಕೋಶದಲ್ಲಿ ಉಂಟಾಗುವ ಉರಿಯನ್ನು ನಿವಾರಿಸುತ್ತದೆ.

11 ಬಾರಿ ಸತತವಾಗಿ ಎಂಇಆರ್‌ಎಸ್‌-ಸಿಒವಿ ವೈರಸ್‌ ಮೇಲೆ ಪ್ರಯೋಗ ನಡೆಸಿದ ವೈದ್ಯರು ಕರೋನ್‌ ವೈರಸ್‌ನಲ್ಲಿರುವ ಆರ್‌ಎನ್‌ಎ ಎರಡಾಗಿ, ನಾಲ್ಕಾಗಿ ದ್ವಿಗುಣವಾಗುವುದನ್ನು ಈ ಔಷಧಿ ನಿಯಂತ್ರಿಸಿದ್ದನ್ನು ಖಚಿತಪಡಿಸಿಕೊಂಡಿದ್ದಾರೆ.

ಔಷಧಿಯ ಸುರಕ್ಷತೆಯ ಬಗ್ಗೆ ಏಳಬಹುದಾದ ಪ್ರಶ್ನೆಗಳಿಗೂ ಉತ್ತರಿಸಿದ್ದು, ಸಿಕಲ್‌ಸೊನೈಡ್‌ ಸುರಕ್ಷಿತವಾದ ಔಷಧವಾಗಿದ್ದು, ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀಡುವುದೂ ಅಪಾಯಕಾರಿಯಾಗದು ಎಂದಿದ್ದಾರೆ.

ಹೊಸ ವೈರಸ್‌ ಆಗಿರುವುದರಿಂದ ಇದರ ಶಕ್ತಿ, ನಿರೋಧಕ ಶಕ್ತಿಯನ್ನು ಅರಿಯುವುದಕ್ಕೆ ವೈದ್ಯರು ಹೆಣಗಾಡುತ್ತಿರುವಾಗ ಜಪಾನಿನ ವೈದ್ಯರ ಈ ಸಂಶೋಧನೆ ಒಂದು ಆಶಾವಾದದ ಬೆಳವಣಿಗೆಯಾಗಿದ್ದು, ಸರ್ಕಾರಗಳು ಕೂಡಲೇ ಈ ಔಷಧವನ್ನು ಸಾರ್ವಜನಿಕ ಲಭ್ಯತೆಗೆ ಸೂಕ್ತ ಕ್ರಮಕೈಗೊಂಡಲ್ಲಿ. ಜಾಗತಿಕವಾಗಿ ಹರಡುತ್ತಿರುವ ಮಾರಿಯನ್ನು ತಡೆಯಲು ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.