ಜಿಯೋಮೀಟ್: ರಿಲಯನ್ಸ್ ಜಿಯೋ ನಿಂದ ಉಚಿತ ದೇಶಿ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆದಂತಹ ರಿಲಯನ್ಸ್ ಜಿಯೋ, ಡಿಜಿಟಲ್ ಮಾರುಕಟ್ಟೆಯಲ್ಲಿಯೂ ತನ್ನ ಛಾಪು ಮುಡಿಸುತ್ತಿದೆ. ಕೇವಲ ಟೆಲಿಕಾಂ ಸೇವೆ ಮಾತ್ರವಲ್ಲದೇ, ಡಿಜಿಟಲ್ ಲೋಕಕ್ಕೂ ತನ್ನ ಜಾಲವನ್ನು ವಿಸ್ತಿರಿಸಿರುವ ಜಿಯೋ ಈಗಾಗಲೇ ಹಲವು ಮಾದರಿಯ ಆಪ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ.

ಲಾಕ್‌ಡೌನ್‌ನಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿರುವವರಿಗೆ ಮತ್ತು ಕಂಪನಿಗಳ ನಡುವೆ ಸಂಪರ್ಕವನ್ನು ಏರ್ಪಡಿಸುವ ಸಲುವಾಗಿ ಜಿಯೋ ಮೀಟ್ ಎನ್ನುವ ವಿಡಿಯೋ ಕಾನ್ಫರೆನ್ಸ್ ಆಪ್‌ವೊಂದು ಬಿಡುಗಡೆ ಮಾಡಿದೆ.

ಕಳೆದ ತಿಂಗಳಿನಲ್ಲಿ ದಾಖಲೆಯ ಫಂಡ್‌ ಸ್ವೀಕರಿಸಿದ ಟೆಲಿಕಾಂ ದೈತ್ಯ ಜಿಯೋ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಹೊಸ ಜಿಯೋ ಮೀಟ್ ಅನ್ನು ಬ್ರೌಸರ್ ಮೂಲಕ ನೇರವಾಗಿ ಬಳಕೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. (ಕ್ರೋಮ್ ಅಥವಾ ಫೈರ್‌ಫಾಕ್ಸ್ ಅನ್ನು ಬಳಸುತ್ತಿದ್ದರೆ ಮಾತ್ರ) ಇದರೊಂದಿಗೆ ವಿಂಡೋಸ್, ಮ್ಯಾಕ್, ಐಒಎಸ್ ಮತ್ತು ಆಂಡ್ರಾಯ್ಡ್‌ ಆಪ್‌ಗಳಲ್ಲಿ ಸಹ ಇದು ಕಾರ್ಯನಿರ್ವಹಿಸಲಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಜೂಮ್, ಗೂಗಲ್ ಮೀಟ್ ಮತ್ತು ಮೈಕ್ರೋಸಾಫ್ಟ್ ಟೀಮ್ಸ್ ಆಪ್‌ಗಳಿಗೆ ಪರ್ಯಾಯವಾಗಿ ದೇಶಿಯ ಜಿಯೋ ಮಿಟ್ ಅನ್ನು ರಿಯಲನ್ಸ್ ಜಿಯೋ ಲಾಂಚ್ ಮಾಡಿದೆ.

ಈ ಸೇವೆಯನ್ನು ಜಿಯೋ ಉಚಿತವಾಗಿ ನೀಡುತ್ತಿದೆ. ಇದು ವಿಡಿಯೋ ಕಾನ್ಫರೆನ್ಸಿಂಗ್ ಆಪ್ ಗಳ ನಡುವಿನ ಸಮರಕ್ಕ ಕಾರಣವಾಗಲಿದೆ ಎನ್ನಲಾಗಿದೆ.

ಇದನ್ನು ಓದಿ: ಚೀನಾ ಆಪ್‌ಗಳು ಇಲ್ಲ ಅಂತ ಬೇಜಾರು ಬೇಡ: ಇಲ್ಲಿದೆ ನೋಡಿ ಸುರಕ್ಷಿತ ಆಪ್‌ಗಳು

ಜಿಯೋ ಮೀಟ್ ಆಪ್ ಮೂಲಕ ಬಳಕೆದಾರರು ನೇರ ಕರೆಗಳನ್ನು (1: 1 ಕರೆ) ಮಾಡಬಹುದಾಗಿದ್ದು, ಇದರೊಂದಿಗೆ 100 ಜನರ ಮೀಟಿಂಗ್‌ಗಳನ್ನು ಆಯೋಜಿಸಬಹುದಾಗಿದೆ. ರಿಲಯನ್ಸ್ ಜಿಯೋ ಪ್ರಕಾರ, ಅಪ್ಲಿಕೇಶನ್ ಎಂಟರ್‌ಪ್ರೈಸ್-ಗ್ರೇಡ್ ಹೋಸ್ಟ್ ನಿಯಂತ್ರಣಗಳನ್ನು ನೀಡಿದ್ದು, ಇದನ್ನು ಫೋನ್ ನಂಬರ್ ಮತ್ತು ಇಮೇಲ್ ಐಡಿ ಮೂಲಕ ಬಳಕೆ ಮಾಡಬಹುದಾಗಿದೆ.

ಜಿಯೋ ಮೀಟ್ HD  ಕ್ವಾಲಿಟಿಯನ್ನು ಸಪೋರ್ಟ್ ಮಾಡಲಿದ್ದು, ಈ ಉಚಿತ ಸೇವೆಯಲ್ಲಿ ನೀವು ದಿನವೊಂದರಲ್ಲಿ ಎಷ್ಟು ಬೇಕಾದರು ಮೀಟಿಂಗ್‌ಗಳನ್ನು ಆಯೋಜಿಸಬಹುದಾಗಿದೆ. ಅಲ್ಲದೇ ಮೀಟಿಂಗ್‌ಗಳನ್ನು ಪಾಸ್‌ವರ್ಡ್‌ನಿಂದ ರಕ್ಷಿಸಬಹುದು ಮತ್ತು ಜೂಮ್ ಮಾದರಿಯಲ್ಲಿ ವೈಟಿಂಗ್ ರೂಮ್ ಆಯ್ಕೆಯೂ ಇದರಲ್ಲಿದೆ. ಅಲ್ಲದೇ ಸಂಪೂರ್ಣವಾದ ಸುಕ್ಷತೆಯನ್ನು ಹೊಂದಿದೆ.

ಹೇಗಿದೆ ಜಿಯೋ ಮೀಟ್:

ಜಿಯೋ ಮೀಟ್ ಪ್ಲಾಟ್‌ಫಾರ್ಮ್ ತುಂಬಾ ಸರಳವಾದ ಇಂಟರ್ಫೇಸ್ ಅನ್ನು ಹೊಂದಿದೆ, ನೋಡಲು ಮತ್ತು ಬಳಕೆಯನ್ನು ಮಾಡಲು ಜೂಮ್‌ ನಂತೆಯೇ ಇದೆ.  ಅಲ್ಲದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ವಿಡಿಯೋ ಕಾನ್ಫರೆನ್ಸಿಂಗ್ ಆಪ್ ಗಳು ಹೊಂದಿರುವ ಆಯ್ಕೆಗಳನ್ನು ಇದರಲ್ಲಿಯೂ ಕಾಣಬಹುದಾಗಿದೆ.

ಇದಲ್ಲದೇ ಜಿಯೋ ಮೀಟ್ – ಬಹು ಸಾಧನ ಲಾಗಿನ್ ಬೆಂಬಲವನ್ನು ಬೆಂಬಲಿಸುತ್ತದೆ, ಒಮ್ಮೆಗೆ ಐದು ಸಾಧನಗಳಲ್ಲಿ ಬಳಕೆ ಮಾಡಬಹುದಾಗಿದೆ. ಕರೆಯಲ್ಲಿರುವಾಗ ನೀವು ಸಾಧನಗಳ ನಡುವೆ ಬದಲಾಯಿಸಬಹುದು. ಸುರಕ್ಷಿತ ಡ್ರೈವಿಂಗ್ ಮೋಡ್ ಜೊತೆಗೆ ಸ್ಕ್ರೀನ್ ಹಂಚಿಕೆಯಂತಹ ವೈಶಿಷ್ಟ್ಯಗಳೂ ಇವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.