‘ದೇಶ ಭಕ್ತಿ’ ಹೆಸರಲ್ಲಿ ರಿಯಲ್ ಮಿ‌ಗೆ ಕುಟುಕಿದ ಲಾವಾ

ದೇಶಿಯ ಸ್ಮಾರ್ಟ್‌‌ಫೋನ್ ಕಂಪನಿ ಲಾವಾ ಮೊಬೈಲ್ಸ್ ಹೊಸದಾಗಿ ಅಗ್ನಿ ಹೆಸರಿನ 5ಜಿ ಮೊಬೈಲನ್ನು ಪರಿಚಯಿಸಿದೆ.
ಇದಕ್ಕಾಗಿ ವಿಭಿನ್ನ ಮಾರ್ಕೆಟಿಂಗ್ ಕ್ರಮ ಅನುಸರಿಸಿದ್ದು ಚೈನಾ ಮೂಲದ ರಿಯಲ್ ಮಿಗೆ ಸೆಡ್ಡು ಹೊಡೆಯುವ ಪ್ರಯತ್ನ ಮಾಡಿದೆ. ರಿಯಲ್ಮಿ 8ಎಸ್ ಫೋನ್ ಹೊಂದಿದವರು ಅದನ್ನು ಲಾವಾ ಅಗ್ನಿ5 ಜತೆಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು ಎಂದು ಕಂಪನಿ ಟ್ವೀಟ್ ಮಾಡಿದೆ.

‘ಭಾರತ ನನ್ನ ತಾಯ್ನಾಡು. ಆದರೆ ಸ್ಮಾರ್ಟ್‌ಫೋನ್ ಮಾತ್ರ ಚೀನಿ’ ಎಂದು ಕುಹಕವಾಡಿರುವ ಲಾವಾ ಭಾರತೀಯರು ಸ್ವದೇಶಿ ಬ್ರ್ಯಾಂಡ್‌ ಮೊಬೈಲನ್ನೇ ಖರೀದಿಸಿ ಎಂದು ಒತ್ತಾಯಿಸಿದೇ. ಇದಕ್ಕಾಗಿ #ChooseAside ಎಂದು ಟ್ವಿಟ್ಟರ್ ಕ್ಯಾಂಪೇನ್ ಆರಂಭಿಸಿದೆ.

ಇದಕ್ಕೆ ಟ್ವಿಟ್ಟರ್ ಬಳಕೆದಾರರೂ ಖಾರವಾಗಿ ಪ್ರತಿಕ್ರಿಯಿಸಿದ್ದು ‘ಪ್ರೌಡ್ಲಿ ಇಂಡಿಯನ್’ ಎಂಬ ಅಂಶವನ್ನು ಲಾವಾ ದುರುಪಯೋಗ ಪಡಿಸಿಕೊಳ್ಳುತ್ತಿದೆ‌ ಎಂದು ಬೊಟ್ಟು ಮಾಡಿದ್ದಾರೆ. ‘ಉತ್ಪನ್ನಗಳೇ ತಮ್ಮ ಬಗ್ಗೆ ಮಾತಾಡಿಕೊಳ್ಳಬೇಕು’ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ಬಿಬಿಕೆ ಕಂಪನಿ ಒಡೆತನದ ರಿಯಲ್‌ ಮಿ ಚೀನಾ ಮೂಲದಾಗಿದ್ದು ಭಾರತದಲ್ಲಿ ಅಸೆಂಬ್ಲಿ ಘಟಕ ಹೊಂದಿದೆ. ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್‌ಗಳನ್ನು ನೇಪಾಳದಂತಹ ನೆರೆ ದೇಶಗಳಿಗೆ ರಫ್ತು ಮಾಡುತ್ತದೆ. ರಿಯಲ್ಮಿ ಮಾತ್ರವಲ್ಲದೆ ಭಾರತದಲ್ಲಿ ವ್ಯವಹರಿಸುತ್ತಿರುವ ಚೀನಾ ಮೂಲದ ಬಹುತೇಕ ಬ್ರ್ಯಾಂಡ್‌ಗಳು ಸ್ಥಳೀಯವಾಗಿ ಅಸೆಂಬ್ಲಿ ಘಟಕ ಹೊಂದಿದ್ದು ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿವೆ.

ಲಾವಾ ಪರಿಚಯಿಸಿರುವ ಅಗ್ನಿ 5ಜಿ ಮೊಬೈಲ್ ಕ್ವಾಡ್ ಕ್ಯಾಮೆರಾ ಸೆಟಪ್, 8GB RAM ಮತ್ತು 6.78-ಇಂಚಿನ ಪೂರ್ಣ HD+ ಡಿಸ್ಪ್ಲೇ ಜೊತೆಗೆ 128 GB ಇಂಟರ್‌ನಲ್‌ ಮೆಮೊರಿ ಹೊಂದಿದೆ. ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್ ಮತ್ತು 5000mAh ವೇಗದ ಚಾರ್ಜಿಂಗ್ ಸಾಮರ್ಥ್ಯವಿದೆ. ಫ್ಲಿಪ್ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಫೋನ್ 19,999 ರೂಗೆ ಲಭ್ಯವಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.