ಕರೋನಾ ವೈರಸ್‌ ಹೇಗೆ ಹರಡುತ್ತಿದೆ? ಈ ಮ್ಯಾಪ್‌ಗಳ ಮೂಲಕ ನೀವೂ ಒಂದು ಕಣ್ಣಿಡಬಹುದು

ದಿನದಿನಕ್ಕೂ ಕರೋನಾವೈರಸ್‌ನ ಆತಂಕ ಹೆಚ್ಚುತ್ತಲೇ ಇದೆ. ಜೊತೆಗೆ ಕರೋನಾ ವೈರಸ್‌ ಕುರಿತು ತಪ್ಪು ಮಾಹಿತಿಯೂ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿಇದು ಹೇಗೆ ಹರಡುತ್ತಿದೆ? ಎಲ್ಲೆಲ್ಲಿ ಹರಡುತ್ತಿದೆ ಎಂಬುದನ್ನು ತಿಳಿಯುವುದಕ್ಕೆ ಇಲ್ಲಿವೆ ಕೆಲವು ಮ್ಯಾಪ್‌ಗಳು

ಜನವರಿ 22ರಂದು ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾದ ಕರೋನಾ ವೈರಸ್‌ ಇಂದು ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಮಾರಣಾಂತಿಕ ವೈರಸ್‌ ಅಲ್ಲ ಎಂದು ತಜ್ಞರು ಹೇಳುತ್ತಿದ್ದರೂ, ಅದು ವ್ಯಾಪಿಸುತ್ತಿರುವ ಬಗೆ ಮತ್ತು ವೇಗ ಜನರಲ್ಲಿ ಆತಂಕ ಮೂಡಿಸಿದೆ. ಸೋಂಕು ನಿಯಂತ್ರಿಸುವುದಕ್ಕಾಗಿ ಸರ್ಕಾರಗಳು ರಜೆ ಘೋಷಣೆ ಮಾಡುತ್ತಿವೆ.

ಜಾನ್‌ ಹಾಪ್‌ಕಿನ್ಸ್‌ ವಿವಿ

ಅಮೆರಿಕದ ಮೊದಲ ಸಂಶೋಧನಾ ವಿವಿ ಎನಿಸಿಕೊಂಡ ಜಾನ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯ ಕರೋನಾ ವೈರಸ್‌ ಕುರಿತು ತನ್ನದೇ ಆತ ಮಾಹಿತಿ ಮೂಲವನ್ನು ಹೊಂದಿದ್ದು, ಅದನ್ನು ಮ್ಯಾಪ್‌ ರೂಪದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಎಲ್ಲೆಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ, ಯಾವ ಪ್ರಮಾಣದ ತೀವ್ರತೆ ಇದೆ ಎಂಬ ಮಾಹಿತಿಯನ್ನು ಒದಗಿಸುತ್ತದೆ.

ಹೆಲ್ತ್‌ ಮ್ಯಾಪ್‌

ಅತ್ಯಂತ ಆಕರ್ಷಕ ರೀತಿಯಲ್ಲಿ ಸೋಂಕು ಹರಡುತ್ತಿರುವುದನ್ನು ಈ ಮ್ಯಾಪ್‌ ಕಟ್ಟಿಕೊಡುತ್ತದೆ. ಇದು ಆನಿಮೇಷನ್‌ ರೂಪದಲ್ಲೂ ಲಭ್ಯವಿದೆ. ಕರೋನಾ ಎಂದು ತಿಳಿಯದಿದ್ದರೂ, ವಿಶ್ವದಲ್ಲೇ ಮೊದಲ ಬಾರಿಗೆ ಅಹಜವಾದ ಸೋಂಕನ್ನು ಗುರುತಿಸಿದ್ದು ಇದೇ ತಾಣ. ಇದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿ ಕಾರ್ಯನಿರ್ವಹಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ

ವಿಶ್ವ ಆರೋಗ್ಯ ಸಂಸ್ಥೆಯು ನೊವೆಲ್‌ ಕರೋನಾ ವೈರಸ್‌ ಸೋಂಕು ಹರಡುತ್ತಿರುವುದ ನೇರವಾಗಿ ಅಪ್‌ಡೇಟ್‌ ಮಾಡುತ್ತಿದೆ. ಪ್ರತಿ ದೇಶದಲ್ಲಿ ಪ್ರತಿ ದಿನ ಎಷ್ಟು ಪ್ರಕರಣಗಳು ವರದಿಯಾಗುತ್ತಿವೆ, ಎಷ್ಟು ಸಾವು ಸಂಭವಿಸಿವೆ ಎಂಬುದನ್ನು ದಾಖಲಿಸುತ್ತಿದೆ. ಮ್ಯಾಪ್‌ನಲ್ಲಿ ಎಲ್ಲ ದೇಶಗಳ ಮೇಲೆ ಸಂಖ್ಯೆಯನ್ನು ನಮೂದಿಸಿದ್ದು, ಅದರ ಮೇಲೆ ಕ್ಲಿಕ್‌ ಮಾಡಿದರೆ ಇನ್ನಷ್ಟು ಮಾಹಿತಿ ತೆರೆದುಕೊಳ್ಳುತ್ತದೆ.

ನೆಕ್ಸ್ಟ್‌ಸ್ಟ್ರೇನ್‌

ಕಳೆದ ವರ್ಷ ಡಿಸೆಂಬರ್‌ 18ರಿಂದ ಇಲ್ಲಿಯವರೆಗೆ ಜಗತ್ತಿನಲ್ಲಿ ಕರೋನಾ ವ್ಯಾಪಿಸಿರುವುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇದು ನೀಡುತ್ತದೆ. ಸ್ವಲ್ಪ ತಾಂತ್ರಿಕವಾಗಿರುವ ಈ ತಾಣವೂ, ದೇಶ, ಪ್ರದೇಶ ಆಧರಿಸಿ ಅಂಕಿ ಅಂಶಗಳನ್ನು ಸಂಸ್ಕರಿಸಿ ನೀಡುತ್ತದೆ.

ನ್ಯೂಯಾರ್ಕ್‌ ಟೈಮ್ಸ್‌

ಕರೋನಾ ವೈರಸ್‌ ಹರಡುವಿಕೆಯನ್ನು ನಾಲ್ಕು ವಿಭಾಗಗಳಲ್ಲಿ ನ್ಯೂಯಾರ್ಕ್‌ ಟೈಮ್ಸ್‌ ನೀಡಿದೆ. ವಿಶ್ವ, ಅಮೆರಿಕ, ಏಷ್ಯಾ, ಯುರೋಪ್‌ ಎಂದು ವಿಭಾಗಿಸಿದೆ. ಜೊತೆಗೆ ಸಲಹೆಗಳನ್ನು ನೀಡಿದೆ. ಎಲ್ಲೆಲ್ಲಿ ಪ್ರಕರಣಗಳು ದೃಢಪಟ್ಟಿವೆ ಅವುಗಳ ಅಂಕಿಗಳನ್ನು ನೀಡಿದ್ದು, ಪ್ರವಾಸ ನಿರ್ಬಂಧಿಸಿರುವ ಅಂಕಿ ಸಂಖ್ಯೆಗಳನ್ನು ನೀಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.