ನಿಮ್ಮ ಮೊಬೈಲ್‌ನಲ್ಲಿ ಕ್ಯಾಮ್‌ಸ್ಕ್ಯಾನರ್‌ ಆ್ಯಪ್ ಇದೆಯೇ? ಈಗಲೇ ಡಿಲೀಟ್‌ ಮಾಡಿ

ಕ್ಯಾಮ್ ಸ್ಕ್ಯಾನರ್ ಬಹಳ ಜನಪ್ರಿಯವಾದ ಆ್ಯಪ್ ಗಳಲ್ಲಿ ಒಂದು. ದಾಖಲೆಗಳನ್ನು ಸ್ಕ್ಯಾನ್ ಮಾಡಿ ಪಿಡಿಎಫ್ ಆಗಿ ಕನ್ವರ್ಟ್ ಮಾಡಿಕೊಡುತ್ತಿದ್ದ ಈಗ ಪ್ಲೇ ಸ್ಟೋರ್ ನಿಂದ ಹೊರಹಾಕಲ್ಪಟ್ಟಿದೆ

ದಾಖಲೆಗಳೊಂದಿಗೆ ನಿತ್ಯವೂ ವ್ಯವಹರಿಸುವವರಿಗೆ ಈ ಆ್ಯಪ್ ಬಹಳ ಉಪಯುಕ್ತವಾಗಿತ್ತು. ಆದರೆ ಮಾಲ್‌ವೇರ್‌ನಿಂದಾಗಿ ಈಗ ಗೂಗಲ್‌ ಪ್ಲೇ ಸ್ಟೋರಿನಿಂದಲೇ ಹೊರಹಾಕಲ್ಪಟ್ಟಿದೆ. ಇದು ಕ್ಯಾಮ್‌ಸ್ಕ್ಯಾನರ್‌ ಆ್ಯಪ್‌ ಸದ್ಯದ ಸ್ಥಿತಿ.

ಯಾವುದೇ ದಾಖಲೆ ಇರಲಿ, ಅದನ್ನು ಡಿಜಿಟಲ್‌ ರೂಪದಲ್ಲಿ ಸೇವ್‌ ಮಾಡಲು ಮತ್ತು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಕ್ಯಾಮ್‌ ಸ್ಕ್ಯಾನ್‌ ಸರಳ ಹಾಗೂ ಸುಲಭದ ದಾರಿಯಾಗಿತ್ತು. ಆದರೆ ಆಂಟಿ ವೈರಸ್‌ ಸಂಸ್ಥೆ ಕ್ಯಾಸ್ಪರ್‌ಸ್ಕಿ ಕ್ಯಾಮ್‌ಸ್ಕ್ಯಾನರ್‌ನಲ್ಲಿ ಟ್ರೋಜನ್‌ ಡ್ರಾಪರ್‌ ಎಂಬ ಮಾಲ್‌ ಇರುವುದನ್ನು ಮತ್ತೆ ಮಾಡಿದ್ದು ದಾಖಲೆಯ ಸುರಕ್ಷತೆಯ ಪ್ರಶ್ನೆಯನ್ನು ಎತ್ತಿದೆ.

ಈ ಆ್ಯಪ್‌ನಲ್ಲಿ ಚೀನೀ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸುತ್ತಿದ್ದ ಟ್ರೋಜನ್‌ ಡ್ರಾಪರ್‌.ಆಂಡ್ರಾಯ್ಡ್‌ಒಎಸ್‌.ನೀಕ್ರೊ.ಎನ್‌. ಎಂಬ ಮಾಡ್ಯೂಲ್‌ ಪತ್ತೆ ಮಾಡಿರುವ ಕ್ಯಾಸ್ಪರ್‌ಸ್ಕಿ, ಇದು ಬಳಕೆದಾರರನ್ನು ಸ್ವತಃ ಹಣಪಾವತಿಸಿದ ಸಬ್‌ಸ್ಕ್ರಿಪ್ಷನ್‌ಗೆ ಸೈನ್‌ ಅಪ್‌ ಮಾಡುತ್ತಿದ್ದು, ಜಾಹೀರಾತುಗಳನ್ನು ತಳ್ಳುತ್ತಿದೆ. ಈ ಮಾಡ್ಯುಲ್‌ನಲ್ಲಿ ಜಾಹೀರಾತುಗಳ ಸಂಗ್ರಹವೇ ಇರುವುದನ್ನು ಕ್ಯಾಸ್ಪರ್‌ಸ್ಕಿ ಬಯಲು ಮಾಡಿದೆ.

ಸುಮಾರು 100 ಕೋಟಿ ಡೌನ್‌ಲೋಡ್‌ಗಳಾಗಿದ್ದ ಈ ಆ್ಯಪ್‌ಅನ್ನು ಸುರಕ್ಷತೆಯ ಕಾರಣಗಳಿಗಾಗಿ ಗೂಗಲ್‌, ಪ್ಲೇಸ್ಟೋರ್‌ನಿಂದ ಕಿತ್ತು ಹಾಕಿದೆ. ಈ ನಡುವೆ ಎಚ್ಚೆತ್ತ ಕ್ಯಾಮ್‌ಸ್ಕ್ಯಾನರ್‌, ಟ್ರೋಜನ್‌ ಡ್ರಾಪರ್‌ ಅನ್ನು ತೆಗೆದು, ಆ್ಯಪ್‌ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.