ಮಾರುತಿ ಸುಝುಕಿ ಎಕ್ಸ್‌ಎಲ್ 6 ಇಂದು ಮಾರುಕಟ್ಟೆಗೆ

ಆರು ಆಸನಗಳ ಹೊಸ ಲಕ್ಸುರಿ ಎಂಪಿವಿ. ನೆಕ್ಸಾ ಶೋರೂಮ್‌ಗಳಲ್ಲಿ ಮಾತ್ರ ಲಭ್ಯ.
ಪೆಟ್ರೋಲ್ ಇಂಜಿನ್ ಮಾತ್ರ, ಡೀಸಿಲ್ ಆಯ್ಕೆ ಇಲ್ಲ

  • ಟೆಕ್‌ ಕನ್ನಡ ಡೆಸ್ಕ್‌

ಮಾರುತಿ ಸುಝುಕಿ ತನ್ನ ಉನ್ನತ ಶ್ರೇಣಿ ಕಾರುಗಳನ್ನು ನೆಕ್ಸಾ ಮೂಲಕ ಮಾರಾಟ ಮಾಡುತ್ತದೆ. ಈ ಪಟ್ಟಿಗೆ ಸೇರ್ಪಡೆಯಾಗಲಿರುವ ಹೊಸ‌ ವಾಹನ ಎಕ್ಸ್‌ಎಲ್‌6 ಆಗಸ್ಟ್‌ 21ರಂದು ಬಿಡುಗಡೆಯಾಗಲಿದೆ.

ಮಾರುತಿ ಸುಝುಕಿಯ ನಾಮಕರಣ ಸೂತ್ರದ ಅನುಸಾರ ಇಂಥದ್ದೊಂದು ಹೆಸರು ಹೊಸ ಪ್ರಯೋಗ. ಆದರೆ ಈ ವಾಹನ ಈಗಾಗಲೇ ಮಾರುಕಟ್ಟೆಯಲ್ಲಿರುವ ಎರ್ಟಿಗಾದ ಉನ್ನತ ಅವತರಣಿಕೆ. ಆದರೆ ಎರ್ಟಿಗಾಕ್ಕೆ ಭಿನ್ನವಾದ ಹೊಸ ಮುಂಬಾಗ, ಕೊಂಚ ಭಿನ್ನ ಹಿಂಭಾಗದ ಹೊರನೋಟದಲ್ಲಿ ಎರ್ಟಿಗಾದಿಂದ ಪ್ರತ್ಯೇಕಿಸುತ್ತದೆ. ಆದರೆ ಮಧ್ಯದಲ್ಲಿ ಕ್ಯಾಪ್ಟನ್ ಸೀಟ್ ಹೊಂದಿರುವುದು ಇದರ ವಿಶೇಷತೆ.

ಈಗಾಗಲೇ ಎರ್ಟಿಗಾ, ಸಿಯಾಝ್‌, ಎಸ್‌ ಕ್ರಾಸ್‌ನಲ್ಲಿ ಬಳಕೆಯಲ್ಲಿರುವ 1.5 ಕೆ ಸೀರೀಸ್ ಪೆಟ್ರೋಲ್ ಎಂಜಿನ್ 103.5 ಬಿಎಚ್‌ಪಿ ಹಾಗೂ 138 ನ್ಯೂಟನ್ ಮೀಟರ್ ಟಾರ್ಕ್‌ನ ಸಾಮರ್ಥ್ಯ ಹೊಂದಿದೆ. ಹನ್ನೆರಡು ಲಕ್ಷ ರೂಪಾಯಿ ಒಳಗಿನ ಬೆಲೆಯಲ್ಲಿ ಇರಲಾಗುತ್ತದೆ ಎನ್ನಲಾಗಿರುವ ಎಕ್ಸ್‌ಎಲ್ 6ನ ಮೂಲಕ ಹೊಸ ಗ್ರಾಹಕರನ್ನು ನೆಕ್ಸಾದೆಡೆ ಸೆಳೆಯುವ ನಿರೀಕ್ಷೆಯಲ್ಲಿದೆ ಮಾರುತಿ.