108 ಮೆಗಾ ಪಿಕ್ಸ್‌ ಫೋನ್‌ ಬಿಡುಗಡೆ | 12 ಗಂಟೆಗೆ ಇಲ್ಲಿ ಲೈವ್‌ ಪ್ರಸಾರ ನೋಡಿ

ಬಹು ನಿರೀಕ್ಷಿತ 108 ಮೆಗಾ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ ಎಂಐ10 ಇಂದು ಬಿಡುಗಡೆಯಾಗುತ್ತಿದೆ. ಫೋನ್‌ ಹೇಗಿದೆ? ಮತ್ತೇನು ಬಿಡುಗಡೆಯಾಗುತ್ತಿದೆ ಎಂಬುದನ್ನು ಲೈವ್‌ ಪ್ರಸಾರದಲ್ಲಿ ನೋಡಿ.

ಶಿಯೋಮಿ ಕಂಪನಿಯ ಅತ್ಯಂತ ನಿರೀಕ್ಷಿತ ಸ್ಮಾರ್ಟ್‌ಫೋನ್‌ ಇಂದು ಬಿಡುಗಡೆಯಾಗುತ್ತಿದೆ. ವಿಶ್ವದ ಮೊದಲ 108 ಮೆಗಾಪಿಕ್ಸೆಲ್‌ ಫೋನ್‌ ಎಂಬ ಕಾರಣಕ್ಕೆ ಕುತೂಹಲಕ್ಕೆ ಕಾರಣವಾಗಿದ್ದ ಈ ಫೋನ್‌ ಇಂದು ಅನಾವರಣಗೊಳ್ಳುತ್ತಿದೆ.

ಎಂಐ10 5ಜಿ ಸ್ಮಾರ್ಟ್‌ಫೋನ್‌ ಇಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗುತ್ತಿದೆ. ಶಿಯೋಮಿ ಈ ವಿಶಿಷ್ಟ ಫೋನ್‌ ಮಾರಾಟಕ್ಕೆ ಅಮೆಜಾನ್‌ ಜೊತೆ ಕೈ ಜೋಡಿಸಿದ್ದು, ಬಿಡುಗಡೆಯಾದ ಕೂಡಲೇ ಅಮೆಜಾನ್‌ ಅದಕ್ಕಾಗಿ ಮೀಸಲಿರಿಸಿರುವ ಮೈಕ್ರೋಸೈಟ್‌ ಮೂಲಕ ಮಾರಾಟ ಆರಂಭಿಸಲಿದೆ.

ಇದನ್ನೂ ಓದಿ | ಜಗತ್ತಿನ ಮೊದಲ 108 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಇರುವ ಫೋನ್‌, ಮಿ ನೋಟ್‌ 10, ಡಿಸೆಂಬರ್‌ನಲ್ಲಿ ಲಾಂಚ್‌

ಸುಮಾರು 42 ರೂ ಮೌಲ್ಯದ ಫೋನ್‌ ಮೊದಲೇ ಆರ್ಡರ್‌ ಮಾಡಿದವರಿಗೆ 2499 ರೂ. ಮೌಲ್ಯದ ವೈರ್‌ಲೆಸ್‌ ಪವರ್‌ ನೀಡಲಾಗುತ್ತಿದೆ. ಫೋನ್‌ ಜೊತೆಗೆ ವೈರ್‌ಲೆಸ್‌ ಇಯರ್‌ಬಡ್ಸ್‌ಗಳನ್ನೂ ಬಿಡುಗಡೆ ಮಾಡುತ್ತಿದೆ. ಫೋನ್‌ ಬಿಡುಗಡೆಯ ನೇರ ಪ್ರಸಾರವನ್ನು ಇಲ್ಲಿ ನೋಡಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.