ಆತ್ಮನಿರ್ಭರತೆಯ ಮಾರ್ಕೆಟ್‌ಗೆ ಬರುತ್ತಿದೆ ಮೈಕ್ರೊಮ್ಯಾಕ್ಸ್‌ ಹೊಸ ಸ್ಮಾರ್ಟ್‌ಫೋನ್‌!

ಮೈಕ್ರೋಮ್ಯಾಕ್ಸ್‌ ಭಾರತದಲ್ಲಿ ಅಪಾರ ಯಶ ಕಂಡ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌. ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ಸ್ಪರ್ಧೆಯಲ್ಲಿ ಹಿಂದೆ ಬಿದ್ದ ಈ ಕಂಪನಿ ಈಗ ಮತ್ತೆ ಮೈಕೊಡವಿಕೊಂಡು ಬರುತ್ತಿದೆ

ಮೈಕ್ರೋಮ್ಯಾಕ್ಸ್‌, ಭಾರತದ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಿಗೆ ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಟಿವಿಗಳನ್ನು ನೀಡಿದ ಕಂಪನಿ. ದಿಢೀರನೆ ಹೆಚ್ಚಿದ ಸ್ಪರ್ಧೆಯಿಂದಾಗಿ ಹಿಂದೆ ಬಿದ್ದ ಈ ಕಂಪನಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು. ಎಲ್ಲ ಆತ್ಮನಿರ್ಭರತೆಯ ಮಹಿಮೆ, ಈಗ ಮತ್ತೆ ಮಾರುಕಟ್ಟೆಗೆ ಕಾಲಿಡುತ್ತಿದೆ.

ದೇಸಿ ಫೋನ್‌, ಸ್ವದೇಶಿ ಉತ್ಪನ್ನ, ಆತ್ಮನಿರ್ಭರತೆ, ವೋಕಲ್‌ ಫಾರ್‌ ಲೋಕಲ್‌ ಎಂಬ ಯಾವ ಘೋಷಣೆಯೂ ಇಲ್ಲದ ಕಾಲದಲ್ಲಿ ಮೈಕ್ರೋಮ್ಯಾಕ್ಸ್‌ ಕೈಗುಟುಕುವ ಫೋನ್‌ಗಳನ್ನು ನೀಡಿತ್ತು. ಆದರೆ ಮುಕ್ತ ಮಾರುಕಟ್ಟೆಯಿಂದಾಗಿ ಚೀನಾದ ಫೋನ್‌ಗಳು ದಾಳಿ ಇಟ್ಟು ಮೈಕ್ರೋಮ್ಯಾಕ್ಸ್‌ ಸದ್ದೇ ಇಲ್ಲದಂತಾಗಿತ್ತು.

ಈಗ ಮೈಕ್ರೋಮ್ಯಾಕ್ಸ್‌ ಮಾಲಿಕ ರಾಹುಲ್‌ ಶರ್ಮಾ ಹೊಸ ಫೋನ್‌ಗಳ ಘೋಷಣೆ ಮಾಡಿದ್ದಾರೆ. ‘ಇನ್‌’ ಹೆಸರಿನ ಸರಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಹೊರತರಲಾಗುತ್ತಿದೆ ಎಂದು ತಿಳಿಸಿದ್ದಾರೆ. ನವೆಂಬರ್‌ 2ರಂದು ಈ ಸರಣಿಯ ಎರಡು ಫೋನ್‌ಗಳು ಬಿಡುಗಡೆಯಾಗುತ್ತಿವೆ. 7000 ರೂ.ಗಳಿಂದ 15000 ರೂಗಳ ಶ್ರೇಣಿಯಲ್ಲಿ ಫೋನ್‌ಗಳು ಲಭ್ಯವಾಗಲಿವೆ.

ಮುಂದಿನ ವಾರ ಬಿಡುಗಡೆಯಾಗಲಿರುವ ಫೋನ್‌ಗಳಲ್ಲಿ ಒಂದು; 2 ಜಿಬಿ ರ್ಯಾಮ್‌, 32 ಜಿಬಿ ಸ್ಟೋರೇಜ್‌ ಮತ್ತು 3 ಜಿಬಿ ರ್ಯಾಮ್‌ ಮತ್ತು 32 ಜಿಬಿ ಸ್ಟೋರೇಜ್‌, 5000 ಎಂಎಎಚ್‌ ಬ್ಯಾಟರಿ ಒಳಗೊಂಡಿವೆ.

ಚೀನಾ ಜೊತೆಗಿನ ರಾಜಕೀಯ ಸಂಘರ್ಷ, ಕರೊನಾದಿಂದಾಗಿ ಫೋನ್‌ಗಳು ಮಾರುಕಟ್ಟೆಗೆ ಬರುತ್ತಿರುವ ಪ್ರಮಾಣ ಎಲ್ಲವನ್ನು ಅರಿತಿರುವ ಮೈಕ್ರೋಮ್ಯಾಕ್ಸ್‌ ಕಂಪನಿ ಇಂತಹದ್ದೊಂದು ಸಾಹಸಕ್ಕೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈಗಾಗಲೇ ಸುಲಭ ದರದ, ಗ್ರಾಹಕನಿಗೆ ತೃಪ್ತಿ ನೀಡುವಂತಹ ಸ್ಮಾರ್ಟ್‌ಫೋನ್‌ಗಳನ್ನು ಕೊಟ್ಟ ಮೈಕ್ರೋಮ್ಯಾಕ್ಸ್‌ ಆತ್ಮನಿರ್ಭರತೆಯ ಹೆಸರಿನಲ್ಲಿ ಯಶ ಕಂಡರೆ ಅಚ್ಚರಿಯೇನಲ್ಲ!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.