ಮೈಕ್ರೋಸಾಫ್ಟ್ ವಿಂಡೋಸ್ ಕಂಪ್ಯೂಟರ್‌ಗಳಲ್ಲಿ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಇನ್ ಬಿಲ್ಟ್ ಆಗಿ ಲಭ್ಯವಿತ್ತು. ಆದರೆ ಹೊಸ ಬ್ರೌಸರ್‌ಗಳ ಹಾವಳಿಯಲ್ಲಿ ಅದು ಅಪ್ರಸ್ತುತವಾಗಿತ್ತು. ಎಡ್ಜ್ ಕ್ರೋಮಿಯಂ ಎಲ್ಲ ಬ್ರೌಸರ್‌ಗಳಿಗೆ ಸ್ಪರ್ಧೆ ಒಡ್ಡಲಿದೆ ಎನ್ನಲಾಗುತ್ತಿದೆ. ಇದರಲ್ಲಿರುವ ವಿಶೇಷಗಳೇನು?

ಕಡೆಗೂ ಮೈಕ್ರೋಸಾಫ್ಟ್ ಕಾಲಕ್ಕೆ ತಕ್ಕ ಬ್ರೌಸರ್ ಅನ್ನು ತಂದಿದೆ. ಇಂದು ಬಿಡುಗಡೆಯಾಗಿರುವ ಎಡ್ಜ್ ಕ್ರೋಮಿಯಂ, ಗೂಗಲ್‌ನ ಕ್ರೋಮ್‌ಗೆ ಹತ್ತಿರವಾದ ವೇಗವಾಗಿ ಸ್ಪಂದಿಸುವ ವಿಶೇಷತೆಗಳೊಂದಿಗೆ ಹೊರಬಂದಿದೆ.
ವಿಂಡೋಸ್ ಮತ್ತು ಮ್ಯಾಕ್ ಒಎಸ್‌ನ ಕಂಪ್ಯೂಟರ್‌ಗಳಿಗೆ ಮತ್ತು ಮೊಬೈಲ್ ಫೋನಿಗೂ ಈ ಬ್ರೌಸರ್ ಲಭ್ಯವಾಗಿದೆ. ಇನ್ನು ಕೆಲ ತಿಂಗಳಲ್ಲಿ ವಿಂಡೋಸ್ 10 ಅಪ್‌ಡೇಟ್‌ನೊಂದಿಗೆ ಈ ಬ್ರೌಸರ್ ಲಭ್ಯವಾಗುವಂತೆ ಮಾಡಲಿದೆ (ಇಲ್ಲಿ ಕ್ಲಿಕ್ ಮಾಡಿ, ಡೌನ್‌ಲೋಡ್ ಮಾಡಿಕೊಳ್ಳಿ).
ಥೇಟ್ ಗೂಗಲ್ ಕ್ರೋಮ್‌ನಂತೆ ಇರುವ, ಕ್ರೋಮ್‌ನ ಕೆಲವು ಎಕ್ಸ್‌ಟೆನ್ಷನ್‌ಗಳನ್ನು ಬೆಂಬಲಿಸುವ ಎಡ್ಜ್‌ನಲ್ಲಿ ಸದ್ಯ ಹಿಸ್ಟರಿ ಮತ್ತು ಎಕ್‌ಟೆನ್ಷನ್‌ಗಳನ್ನು ಸಿಂಕ್ ಮಾಡಿಕೊಳ್ಳುವ ಅವಕಾಶವಿಲ್ಲ. ಆದರೆ ಫೇವರಿಟ್ಸ್, ಸೆಟ್ಟಿಂಗ್ಸ್, ಅಡ್ರೆಸ್‌ಗಳು, ಕಾಂಟ್ಯಾಕ್ಟ್ ಇನ್ಫೋ, ಪಾಸ್‌ವರ್ಡ್‌ಗಳು ಸಿಂಕ್ ಆಗುತ್ತವೆ. ಈ ವರ್ಷದ ಅಂತ್ಯದಲ್ಲಿ ಉಳಿದ ಸಿಂಕ್ ಫೀಚರ್‌ಗಳನ್ನು ಸೇರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಾಗಾದರೆ ವಿಶೇಷಗಳೇನಿವೆ?
ಟ್ರ್ಯಾಕರ್‌ಗಳನ್ನು ಮೂರು ಹಂತಗಳಲ್ಲಿ ತಡೆಯುವ ಮೂಲಕ ನಿಮ್ಮ ಖಾಸಗಿತನವನ್ನು ಉಳಿಸಿಕೊಳ್ಳುವುದಕ್ಕೆ ಅವಕಾಶವಿದೆ. ನೀವು ಹಿಂದೆ ಎಂದು ಭೇಟಿ ನೀಡದ ವೆಬ್‌ತಾಣಗಳು ನಿಮ್ಮ ಮಾಹಿತಿಗೆ ಹೊಂಚು ಹಾಕುತ್ತಿದ್ದರೆ, ಅಂತಹವರನ್ನು ನಿಯಂತ್ರಿಸುತ್ತದೆ. ಫೋಟೋ ಮತ್ತು ಮಾಹಿತಿಯನ್ನು ಸಂಗ್ರಹಿಸುವ ಕಲೆಕ್ಷನ್ ಎನ್ನುವ ಹೊಸ ಫೀಚರ್ ಕೂಡ ಇದೆ.
ನಿಮ್ಮ ಹೊಸ ಟ್ಯಾಬ್ ಫೀಚರ್ ಅನ್ನು ನಿಮಗೆ ಬೇಕಾದಂತೆ ಬದಲಿಸಿಕೊಳ್ಳಬಹುದು. ನ್ಯೂಸ್ ಫೀಡನ್ನು ನಿಮ್ಮ ಆಯ್ಕೆಯಂತೆ ನಿಯಂತ್ರಿಸಬಹುದು. ಇಷ್ಟದ ವೆಬ್‌ಸೈಟ್‌ಗಳನ್ನು ಟಾಸ್ಕ್‌ಬಾರ್‌ಗೆ ಸೇರಿಸಲು ಅವಕಾಶವಿದೆ. ಪರ್ಸನಲೈಸ್ಡ್ ಜಾಹೀರಾತುಗಳನ್ನು ಬ್ಲಾಕ್ ಮಾಡಬಹುದು. ಲೈಟ್ ಮತ್ತು ಡಾರ್ಕ್ ಮೋಡ್‌ಗಳಿವೆ. ಈ ಮೋಡ್‌ಗಳನ್ನು ನೀವು ಬಳಸುವ ಎಲ್ಲ ವೆಬ್‌ತಾಣಗಳಿಗೂ ಅನ್ವಯವಾಗುವಂತೆ ಮಾಡಿಕೊಳ್ಳಬಹುದು! 4K ವಿಡಿಯೋಗಳನ್ನು ಅಂದರೆ ನೆಟ್‌ಫ್ಲಿಕ್ ಸ್ಟ್ರೀಮಿಂಗ್ ತಾಣಗಳಲ್ಲಿ ಸಿನಿಮಾ ನೋಡುವ ಅನುಭವ ಉತ್ತಮವಾಗಲಿದೆ. ನಿಮಗೆ ಮುಖ್ಯವಾದ ವೆಬ್‌ತಾಣದ ಮೇಲಿನ ಗಮನ ತಪ್ಪದೇ ಇರಲು ಫೋಕಸ್ ದಿಸ್ ಟ್ಯಾಬ್ ಎಂಬ ಫೀಚರ್ ಇದೆ. ಏಕಾಗ್ರತೆಯಿಂದ ಕೆಲಸ ಮಾಡಲು ನಿಮಗೆ ನೆರವಾಗುತ್ತದೆ.
ಟ್ಯ್ರಾಕರ್‌ಗಳು, ಜಾಹೀರಾತುಗಳ ಹಾವಳಿಯಿಂದ ಮುಕ್ತವಾಗಿ ಬ್ರೌಸ್ ಮಾಡುವ ಅನುಭವವನ್ನು ಎಡ್ಜ್ ನೀಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.