ಹೊಸ ಸ್ಮಾರ್ಟ್‌ಫೋನ್ ಮೋಟೋ G9: ಬೆಲೆ ಎಷ್ಟು? ವಿಶೇಷಗಳೇನು?

ಮೊಟೊರೊಲಾದ ಹೊಸ ಸ್ಮಾರ್ಟ್‌ಫೋನ್  ಮೋಟೋ G9 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಲೆನೊವೊ ಒಡೆತನದ ಕಂಪನಿಯು ಭಾರತದಲ್ಲಿ ಉತ್ತಮ ಬೇಡಿಕೆಯನ್ನು ಉಳಿಸಿಕೊಂಡಿದ್ದು, G ಸರಣಿಯ ಸ್ಮಾರ್ಟ್‌ಫೋನ್‌ಗಳು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಮೋಟೋ G 8 ರ ಉತ್ತರಾಧಿಕಾರಿಯಾಗಿರುವ, ಮೋಟೋ G 9 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ ಮತ್ತು 6.5 ಇಂಚಿನ ದೊಡ್ಡ ಡಿಸ್ಪ್ಲೇ ಹೊಂದಿದೆ. ಮೋಟೋ ಜಿ 8 ಮತ್ತು ಹಿಂದಿನ ಮೋಟೋ G-ಸರಣಿ ಫೋನ್‌ಗಳಲ್ಲಿ ಕಾಣಿಸಿಕೊಂಡ ಕಂಪನಿಯ ವಾಟರ್-ರಿಪ್ಲಿನೆಂಟ್ ವಿನ್ಯಾಸವನ್ನು ಮೋಟೋ G 9 ಉಳಿಸಿಕೊಂಡಿದೆ.

ಭಾರತದಲ್ಲಿ ಮೋಟೋ G 9 ಬೆಲೆ

ಭಾರತದಲ್ಲಿ ಮೋಟೋ G 9 ಸ್ಮಾರ್ಟ್‌ಫೋನ್ 4 GB RAM + 64 GB ಸ್ಟೋರೇಜ್ ಮಾದರಿಯಲ್ಲಿ ಮಾತ್ರ ಮಾರಾಟವಾಗಲಿದ್ದು, ರೂ11,499ಕ್ಕೆಎರಡು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ – ಫಾರೆಸ್ಟ್ ಗ್ರೀನ್ ಮತ್ತು ನೀಲಮಣಿ ನೀಲಿ ಮತ್ತು ಫ್ಲಿಪ್ಕಾರ್ಟ್ ಮೂಲಕ ಖರೀದಿಸಲು ಲಭ್ಯವಿರುತ್ತದೆ. ಮೊದಲ ಮಾರಾಟ ಆಗಸ್ಟ್ 31 ರಂದು ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ) ನಡೆಯಲಿದೆ.

ಮೋಟೋ G 9  ವಿಶೇಷಣಗಳು, ವೈಶಿಷ್ಟ್ಯಗಳು

ಡ್ಯುಯಲ್-ಸಿಮ್ (ನ್ಯಾನೋ) ಹಾಕಿಕೊಳ್ಳಬಹುದಾದ ಮೋಟೋ G 9 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 10 ನಲ್ಲಿ ಕಾರ್ಯನಿರ್ವಹಿಸುತ್ತದೆ. 6.5-ಇಂಚಿನ HD+ ಮ್ಯಾಕ್ಸ್ ವಿಷನ್ TFT ಡಿಸ್ಪ್ಲೇ 20: 9 ಅನುಪಾತ ಮತ್ತು 87 ಪ್ರತಿಶತ ಸ್ಕ್ರೀನ್-ಟು-ಬಾಡಿ ಹೊಂದಿದೆ.

ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 662 SoC ಜೊತೆಗೆ 4GB LPDDR4 RAM ಅನ್ನು ಹೊಂದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ 48 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ f / 1.7 ಲೆನ್ಸ್ ಹೊಂದಿದೆ ಮತ್ತು ಇದು ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನವನ್ನು ಆಧರಿಸಿದೆ. ಕ್ಯಾಮೆರಾ ಸೆಟಪ್ ನಲ್ಲಿ f / 2.4 ಲೆನ್ಸ್ ಹೊಂದಿರುವ 2 ಮೆಗಾಪಿಕ್ಸೆಲ್ ಡೀಪ್ ಸಂವೇದಕ ಮತ್ತು f / 2.4 ಮ್ಯಾಕ್ರೋ ಲೆನ್ಸ್ ಹೊಂದಿರುವ 2 ಮೆಗಾಗಪಿಕ್ಸೆಲ್ ಸಂವೇದಕಗಳನ್ನು ಒಳಗೊಂಡಿದೆ.

ಸೆಲ್ಫಿಗಳಿಗಾಗಿ, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಸಂವೇದಕ f/ 2.2 ಲೆನ್ಸ್ ಇದೆ. ಆಟೋ ಸ್ಮೈಲ್ ಕ್ಯಾಪ್ಚರ್, HDR, ಫೇಸ್ ಬ್ಯೂಟಿ, ಮ್ಯಾನುಯಲ್ ಮೋಡ್, ಮತ್ತು ರಾ ಫೋಟೋ ಔಟ್‌ಪುಟ್‌ನಂತಹ ಕ್ಯಾಮೆರಾ ವೈಶಿಷ್ಟ್ಯಗಳನ್ನು ಕಾರಣಬಹುದಾಗಿದೆ.

ಮೋಟೋ G 9 ಸ್ಮಾರ್ಟ್‌ಫೋನ್ 5,000 mAh ಬ್ಯಾಟರಿ ಹೊಂದಿದ್ದು, 20 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳ ಬ್ಯಾಟರಿ ಬಾಳಿಕೆ ಬರಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.