ನಕ್ಷತ್ರ ಸ್ಫೋಟಿಸುವುದನ್ನು ನೋಡಿದ್ದೀರಾ? ಇಲ್ಲವಾದರೆ ಈ ವಿಡಿಯೋ ನೋಡಿ

ಬಾಹ್ಯಾಕಾಶದ ವಿದ್ಯಮಾನಗಳು ನಿಜಕ್ಕೂ ಕುತೂಹಲಕಾರಿ, ಬೆರಗು ಹುಟ್ಟಿಸುವಂತಹವು. ಸೂಪರ್‌ನೋವಾ ಕೂಡ ಅಂಥದ್ದೇ ಒಂದು ವಿದ್ಯಮಾನ. ಇದನ್ನು ನೋಡುವ ಅವಕಾಶ ಬಹಳ ಕಡಿಮೆ. ಆದರೆ ನಾಸಾ ಸಾಧ್ಯವಾಗಿಸಿದೆ

Picture: NASA

ನಕ್ಷತ್ರವೊಂದರ ಮಹಾ ಸ್ಫೋಟ, ಸೂಪರ್‌ನೋವಾ ನೋಡಲು ಸಿಗುವುದು ಅಪರೂಪ. ಹಬಲ್‌ ಬಾಹ್ಯಾಕಾಶ ದೂರದರ್ಶಕ ಅಂಥದ್ದೊಂದು ಅಪರೂಪದ ದೃಶ್ಯವನ್ನು ಸೆರೆಹಿಡಿದು ಕಳಿಸಿದೆ.

ನಾಸಾ ಬಿಡುಗಡೆ ಮಾಡಿರುವ 30 ಸೆಕೆಂಡ್‌ಗಳ ಈ ಟೈಪ್‌ ಲ್ಯಾಪ್ಸ್‌ ವಿಡಿಯೋದಲ್ಲಿ, ಭೂಮಿಯಿಂದ 70 ಕೋಟಿ ಜ್ಯೋತಿರ್ವರ್ಷ ದೂರದಲ್ಲಿರುವ ಗ್ಯಾಲೆಕ್ಸಿಯೊಂದರಲ್ಲಿ ನಕ್ಷತ್ರ ಸಿಡಿದ ದೃಶ್ಯವಿದೆ.

ಸ್ಥಿರ ಚಿತ್ರವಾಗಿ ಸೆರೆಹಿಡಿದ ಈ ದೃಶ್ಯಗಳನ್ನು 2018ರಿಂದ 19ರವರೆಗೆ, ಅಂದರೆ ಒಂದು ವರ್ಷ ಕಾಲ ಸೆರೆಹಿಡಿಯಲಾಗಿದ್ದು, ಸ್ಫೋಟದ ದೃಶ್ಯವನ್ನು ಕಟ್ಟಿಕೊಡುವ ಸಲುವಾಗಿ ಅವುಗಳನ್ನು ವಿಡಿಯೋ ರೂಪದಲ್ಲಿ ಪ್ರಕಟಿಸಿದೆ.

ಆ ದೃಶ್ಯ ಇಲ್ಲಿದೆ ನೋಡಿ:

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: