ರಾಜ್ಯದ 14 ಕಂಪನಿಗಳಿಗೆ ರಾಷ್ಟ್ರೀಯ ಸ್ಟಾರ್ಟಪ್‌ ಪ್ರಶಸ್ತಿ

ಸ್ಟಾರ್ಟಪ್‌ಗಳ ಕೇಂದ್ರ ಎಂದೇ ಕರೆಯಲಾಗುವ ಬೆಂಗಳೂರು ನಗರಕ್ಕೆ ಹೊಸ ಗರಿಯೊಂದು ಸೇರಿದೆ. ಕೇಂದ್ರ ಸರ್ಕಾರ 2021ನೇ ಸಾಲಿನ ರಾಷ್ಟ್ರೀಯ ಸ್ಟಾರ್ಟ್‌‌ಅಪ್‌ ಪ್ರಶಸ್ತಿಗಳನ್ನು ಘೋಷಿಸಿದ್ದು, ಬೆಂಗಳೂರಿನ 14 ಕಂಪನಿಗಳು ಈ ಪ್ರಶಸ್ತಿಗೆ ಭಾಜನವಾಗಿವೆ. ಒಟ್ಟು 46 ನವ್ಯೋದ್ಯಮಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.

ಈ ಪ್ರಶಸ್ತಿಗೆ ದೇಶದಾದ್ಯಂತ 2,173 ಅರ್ಜಿಗಳು ಸಲ್ಲಿಕೆಯಾಗಿದ್ದು, ಕರ್ನಾಟಕದಿಂದ 549 ಅರ್ಜಿಗಳು ಬಂದಿದ್ದವು. ಪ್ರಶಸ್ತಿಗೆ ಪಡೆದ ಬೆಂಗಳೂರಿನ ಈ 14 ನವೋದ್ಯಮಗಳು ಕೃಷಿ, ಪಶುಸಂಗೋಪನೆ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮ ವ್ಯವಸ್ಥೆ, ಫಿನ್‌ಟೆಕ್‌, ಆರೋಗ್ಯ ಮತ್ತು ಕ್ಷೇಮೋದ್ಯಮ, ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರವನ್ನು ಕೇಂದ್ರೀಕರಿಸಿವೆ.

‘ಸ್ಟಾರ್ಟಪ್‌ಗಳ ಕಾರ್ಯಕ್ಷಮತೆ ಆಧಾರದ ಮೇಲೆ ₹50 ಲಕ್ಷದವರೆಗೆ ಧನಸಹಾಯ ನೀಡುತ್ತೇವೆ. ಪ್ರಸಕ್ತ ವರ್ಷ ಕರ್ನಾಟಕದ ಸುಮಾರು 200 ಸ್ಟಾರ್ಟಪ್‌ಗಳು ಧನಸಹಾಯ ಪಡೆದಿವೆ. ಆಜಾದಿ ಕಾ ಅಮೃತ್ ಮಹೋತ್ಸವ್ ಸಂದರ್ಭದಲ್ಲಿ ಹೆಚ್ಚುವರಿಯಾಗಿ 75 ನವೋದ್ಯಮಗಳಿಗೆ ಮೂಲನಿಧಿಯನ್ನು ನೀಡಲಾಗುವುದು. ವಿಶೇಷವಾಗಿ ಮಹಿಳೆಯರು ಪ್ರಾರಂಭಿಸಿದ ಸ್ಟಾರ್ಟ್‌ಅಪ್‌ಗಳಿಗೆ ಧನಸಹಾಯ ನೀಡಲು ರಾಜ್ಯವು ಎಲಿವೇಟ್ ವುಮೆನ್ ಯೋಜನೆಯನ್ನು ಸಹ ಪ್ರಾರಂಭಿಸಿದೆ’ ಎಂದು ಕರ್ನಾಟಕದ ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವಥ್‌ ನಾರಾಯಣ್‌ ತಿಳಿಸಿದರು.

ನವೋದ್ಯಮ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವಿದೆ. ಇಡಿ ದೇಶದಲ್ಲಿ 57 ಸಾವಿರ ನವ್ಯೋದ್ಯಮಗಳಿದ್ದು ಆ ಪೈಕಿ 13 ಸಾವಿರ ಕರ್ನಾಟಕವೊಂದರಲ್ಲೇ ಇರುವುದು ಗಮನಾರ್ಹ.

ಪ್ರಶಸ್ತಿಗೆ ಭಾಜನವಾದ ಬೆಂಗಳೂರು ಮೂಲದ ಕಂಪನಿಗಳು:

1. ಉಂಬೊ ಇಡ್‌ಟೆಕ್‌

2. ಆತ್ರೇಯಾ ಗ್ಲೋಬಲ್‌ ಸೊಲ್ಯೂಷನ್ಸ್‌

3. ಲ್ಯೂಸಿನ್ ರಿಚ್ ಬಯೋ

4. ರುಬನ್‌ಬ್ರಿಡ್ಜ್

5. ನಫಾ ಇನ್ನೋವೇಶನ್ಸ್

6. ಸಿಂಪ್ಲೋಟೆಲ್ ಟೆಕ್ನಾಲಜೀಸ್

7. ಝೆಂಟ್ರಾನ್ ಲ್ಯಾಬ್ಸ್

8. ಶಾಪೋಸ್ ಸರ್ವಿಸಿಸ್

9. ಸ್ಟೆಲ್ಲಾಪ್ಸ್ ಟೆಕ್ನಾಲಜೀಸ್

10. ಸ್ಟೆರಾಡಿಯನ್ ಸೆಮಿಕಂಡಕ್ಟರ್ಸ್

11. ಟ್ಯಾಗ್‌ಬಾಕ್ಸ್‌ ಸೊಲ್ಯೂಷನ್ಸ್‌

12. ಮಾರ್ಕೆಟ್‌ಎಕ್ಸ್‌ಪಾಂಡರ್ ಸರ್ವೀಸಸ್

13. ಬ್ಲಿಂಕಿನ್‌ ಟೆಕ್ನಾಲಜಿಸ್‌

14. ಥಿಂಕರ್‌ಬೆಲ್‌ ಲ್ಯಾಬ್ಸ್‌

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: