ಆಕೌಂಟ್ ತೆರೆಯದೇ, ಸಬ್‌ಸ್ಕ್ರಿಪ್ಷನ್ ಇಲ್ಲದೇ ಉಚಿತವಾಗಿ ನೆಟ್‌ಫ್ಲಿಕ್ಸ್ ನೋಡುವ ಅವಕಾಶ!

ಸದ್ಯ ಎಲ್ಲರೂ ಮನೆಯಲ್ಲಿಯೇ ಇರುವ ಕಾರಣದಿಂದಾಗಿ OTT ಪ್ಲಾಟ್‌ಫಾರ್ಮ್‌ಗಳ ಬಳಕೆಯು ಹೆಚ್ಚಾಗುತ್ತಿದೆ. ಇದೇ ಮಾದರಿಯಲ್ಲಿ ಬಹು ಪಾಲು ಮಂದಿಯ ಮನಗೆದ್ದಿರುವ ನೆಟ್‌ಫ್ಲಿಕ್ಸ್‌ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಒಂದಷ್ಟು ಸಿನಿಮಾ ಹಾಗೂ ಓರಿಜಿನಲ್ ಸರಣಿಗಳನ್ನು ಉಚಿತವಾಗಿ ಪ್ರದರ್ಶಿಸಲು ಮುಂದಾಗಿದೆ.

ಇಷ್ಟು ದಿನ ಕೇವಲ ಹಣ ಪಾವತಿಸಿದವರಿಗೆ ಮಾತ್ರವೇ ನೆಟ್‌ಫ್ಲಿಕ್ಸ್‌ ನೋಡುವ ಅವಕಾಶವಿತ್ತು. ಆದರೆ ಇನ್ನು ಮುಂದೆ ನೆಟ್‌ ಫ್ಲಿಕ್ಸ್‌ ಖಾತೆಯೂ ಇಲ್ಲದೇ ಚಂದದಾರಿಕೆಯನ್ನು ಪಡೆಯದೆ ನೀವು ನೆಟ್‌ಫ್ಲಿಕ್ಸ್ ಹಲವಾರು ಮೂಲ ಸರಣಿಗಳು ಮತ್ತು ಚಲನಚಿತ್ರಗಳಿಗೆ ಸೀಮಿತ ಉಚಿತ ಪ್ರವೇಶವನ್ನು ಪಡೆಯಬಹುದಾಗಿದೆ.

ಇದರಲ್ಲಿ ಸ್ಟ್ರೇಂಜರ್ ಥಿಂಗ್ಸ್, ಮರ್ಡರ್ ಮಿಸ್ಟರಿ, ಎಲೈಟ್, ಬಾಸ್ ಬೇಬಿ: ಬ್ಯಾಕ್ ಇನ್ ಬ್ಯುಸಿನೆಸ್, ಬರ್ಡ್ ಬಾಕ್ಸ್, ಲವ್ ಈಸ್ ಬ್ಲೈಂಡ್, ಟು ಪೋಪ್ಸ್ ಗಳು ಸೇರಿದಂತೆ ಇನ್ನು ಹಲವು ಶೋ ಮತ್ತು ಸಿನಿಮಾಗಳನ್ನು ನೋಡಬಹುದಾಗಿದೆ.

ನೆಟ್ಫ್ಲಿಕ್ಸ್ ಮಾಸಿಕ ಚಂದಾದಾರಿಕೆಗೆ ಯೋಗ್ಯವಾಗಿದೆಯೆ ಎಂದು ತೀರ್ಮಾನಿಸಲು ಈ ಸ್ಟ್ರೀಮಿಂಗ್ ಸೇವೆಯೂ ನಿಮಗೆ ಸಹಾಯ ಮಾಡುತ್ತದೆ.

ಉಚಿತ ಪ್ರವೇಶದೊಂದಿಗೆ, ಎಲ್ಲಾ ಚಲನಚಿತ್ರ ಆಯ್ಕೆಗಳೊಂದಿಗೆ ನೀವು ಪೂರ್ಣ ಚಲನಚಿತ್ರವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ, ಆದರೆ ಟಿವಿ ಕಾರ್ಯಕ್ರಮಗಳ ಮೊದಲ ಸಿಸನ್ ನ ಮೊದಲ ಕಂತು ಮಾತ್ರ ಉಚಿತವಾಗಿ ನೋಡಲು ಲಭ್ಯವಿದೆ ಮತ್ತು ಈ ಕೊಡುಗೆಯನ್ನು ಬಳಸಲು ನಿಮಗೆ ನೆಟ್‌ಫ್ಲಿಕ್ಸ್ ಖಾತೆಯ ಅಗತ್ಯವೂ ಇಲ್ಲ.

“ಹೊಸ ಸದಸ್ಯರನ್ನು ಆಕರ್ಷಿಸಲು ಮತ್ತು ಅವರಿಗೆ ಉತ್ತಮ ನೆಟ್‌ಫ್ಲಿಕ್ಸ್ ಅನುಭವವನ್ನು ನೀಡಲು ನಾವು ವಿಭಿನ್ನ ಮಾರ್ಕೆಟಿಂಗ್ ಪ್ರಚಾರಗಳನ್ನು ನೋಡುತ್ತಿದ್ದೇವೆ” ಎಂದು ನೆಟ್‌ಫ್ಲಿಕ್‌ ತಿಳಿಸಿದೆ.  

ಆಯ್ದ ನೆಟ್‌ಫ್ಲಿಕ್ಸ್ ಮೂಲಗಳಿಗೆ ಉಚಿತ ಪ್ರವೇಶ ಜಾಗತಿಕವಾಗಿ netflix.com/watch-free ನಲ್ಲಿ ಲಭ್ಯವಿದೆ. ಕಂಪ್ಯೂಟರ್‌ಗಳಲ್ಲಿ ಬ್ರೌಸರ್‌ಗಳಲ್ಲಿ ಮಾತ್ರವೇ ಇದನ್ನು ನೋಡಬಹುದಾಗಿದೆ. ಆಂಡ್ರಾಯ್ಡ್‌ ಮತ್ತು ಆಪಲ್‌ನಲ್ಲಿ ಲಭ್ಯವಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.