ಕರೋನಾ ಕಳಕಳಿ | ಎರಡು ವರ್ಷಗಳ ಹಿಂದೆಯೇ ಕರೋನಾ ವೈರಸ್‌ ಸುಳಿವು ನೀಡಿತ್ತೆ ಈ ಕೊರಿಯನ್‌ ಸರಣಿ?

ಕಳೆದ ಎರಡು ಮೂರು ದಿನಗಳಿಂದ ಕೊರಿಯಾ ಮೂಲದ ಈ ನೆಟ್‌ಫ್ಲಿಕ್‌ ವೆಬ್‌ಸರಣಿ ಸಾಕಷ್ಟು ಗಮನಸೆಳೆಯುತ್ತಿದೆ. ಈ ಸರಣಿಯಲ್ಲಿ ಕರೋನಾ ವೈರಸ್‌ ಕುರಿತ ಪ್ರಸ್ತಾಪವಿದ್ದು, ಕರೋನಾ ವೈರಸ್‌ ಕುರಿತು ಭವಿಷ್ಯ ನುಡಿದಿತ್ತು ಎಂಬ ಚರ್ಚೆಗೆ ಕಾರಣವಾಗಿದೆ

ಮೇಲಿನ ವಿಡಿಯೋ ತುಣುಕು ಎರಡು ವರ್ಷಗಳ ಹಿಂದೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ‘ಮೈ ಸೀಕ್ರೆಟ್‌ ಟೆರ್ರಿಯಸ್‌’ ಹೆಸರಿನ ವೆಬ್‌ಸರಣಿಯದ್ದು. ಕೊರಿಯಾ ಭಾಷೆಯಲ್ಲಿ ಹೊರ ಬಂದ 32 ಕಂತುಗಳ ಈ ಸರಣಿ ಗುಪ್ತದಳ ಮಾಜಿ ಏಜೆಂಟನ ಬದುಕಿನ ಸುತ್ತ ನಡೆಯುವ ಕತೆಯನ್ನು ಹೊಂದಿತ್ತು. ಪಾರ್ಕ್‌ ಸ್ಯಾಂಗ್ ಹೂನ್‌ ನಿರ್ದೇಶನದಲ್ಲಿ ಈ ಸರಣಿ 2018ರ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನವಾಗಿತ್ತು.

ಆದರೆ ಈಗ ಸದಣಿಯ ಹತ್ತನೆಯ ಕಂತು ಜಗತ್ತಿನ ಕಣ್ಣರಳಿಸುವಂತೆ ಮಾಡಿದೆ.

ನಮಗೆಲ್ಲಾ ತಿಳಿದಿರುವ ಕೊರೊನಾ ವೈರಸ್‌- ಅಂದರೆ ನೊವೆಲ್‌ ಕರೋನಾ ವೈರಸ್‌ ಪತ್ತೆಯಾಗಿದ್ದು 2019ರ ಡಿಸೆಂಬರ್‌ ತಿಂಗಳಲ್ಲಿ. ಆದರೆ 2018ರ ಸೆಪ್ಟೆಂಬರ್‌ ಅಂತ್ಯದಲ್ಲಿ ಬಿಡುಗಡೆಯಾದ ‘ಮೈ ಸೀಕ್ರೆಟ್‌ ಟೆರ್ರಿಯಸ್‌’ಸರಣಿಯ ಹತ್ತನೆಯ ಕಂತಿನಲ್ಲಿ ಈ ವೈರಸ್‌ ಉಲ್ಲೇಖವಿದೆ.

ಕರೋನಾ ವೈರಸ್‌, ಸಾರ್ಸ್‌, ಎಂಇಆರ್‌ಎಸ್‌ ಎಂಬ ಕುಟುಂಬಕ್ಕೆ ಸೇರಿದ ವೈರಸ್‌. ಆದರೆ ಕರೋನಾ ಕುರಿತು ನಮಗೆ ತಿಳಿದಿದ್ದ ಕಳೆದ ವರ್ಷದ ಅಂತ್ಯದಲ್ಲಿ ಹೀಗಿರುವಾಗ ಈ ಸರಣಿಯಲ್ಲಿ ಕರೋನಾದ ಪ್ರಸ್ತಾಪ ಬಂದಿದ್ದು ಹೇಗೆ ಎಂಬ ಕುತೂಹಲದ ಪ್ರಶ್ನೆ.

ಹತ್ತನೆಯ ಕಂತಿನ 50ನೇ ನಿಮಿಷಗಳ ನಂತರ ವೈದ್ಯರು ಪಾತ್ರವೊಂದಕ್ಕೆ ರೋಗಿಯ ಸ್ಥಿತಿಯನ್ನು ವಿವರಿಸುತ್ತಾ ಹೇಳುತ್ತಾರೆ; ಇದೊಂದು ಮ್ಯೂಟಂಟ್ ವೈರಸ್‌ನಂತೆ ಕಾಣುತ್ತದೆ. ಇದು ಹಿಂದಿನ 2002ರಲ್ಲಿ ಕಾಣಿಸಿಕೊಂಡ ಸಾರ್ಸ್‌, 2012ರಲ್ಲಿ ಬಂದ ಎಂಇಆರ್‌ಎಸ್‌ಗಿಂತ ಮಾರಣಾಂತಿಕ. ಇದು ಶ್ವಾಸಕೋಶಕ್ಕೆ ಹೆಚ್ಚು ಆನಿ ಉಂಟು ಮಾಡುತ್ತದೆ. ವೈರಸ್‌ನ ಜೀವಿತ ಅವಧಿ 2ರಿಂದ 14 ದಿನಗಳು ಎಂದೆಲ್ಲಾ ವಿವರಿಸುತ್ತಾರೆ. ವೈದ್ಯ ಪಾತ್ರ ವಿವರಿಸುವಂತೆ ಕರೋನಾ ವೈರಸ್‌ನಿಂದ ಸಾಯುವವರ ಸಂಖ್ಯೆ ಶೇ.90!

ಇದೀಗ ಆತಂಕಕ್ಕೆ, ಅನುಮಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಈ ಕುರಿತು ಬರೆದು ತಮ್ಮ ಅನುಮಾನಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕರೋನಾ ವೈರಸ್‌ ಹರಡಲು ಆರಂಭಿಸಿದ ಸಂದರ್ಭದಲ್ಲಿ ಇದು ಚೀನಾ ಸೃಷ್ಟಿಸಿದ ಜೈವಿಕ ಯುದ್ಧವೆಂದೂ, ಅಭಿವೃದ್ಧಿಹೊಂದಿದ ದೇಶಗಳು ನಡೆಸುತ್ತಿರುವ ಸಂಚು ಎಂಬ ವಿಚಾರಗಳು ಚರ್ಚೆಯಾಗುತ್ತಿದ್ದವು. ಇದಕ್ಕೆ ಇಂಬು ನೀಡುವಂತೆ ಈಗ ಸರಣಿಯ ತುಣುಕು ವೈರಲ್‌ ಆಗಿದೆ.

”ಕಾಕತಾಳೀಯ ಹಾಗೇ ಆಗಿಬಿಡುವುದಿಲ್ಲ. ಎಲ್ಲವೂ ಜೋಪಾನವಾಗಿ ಯೋಜಿಸಲಾಗಿದೆ. ಕರೋನಾ ವೈರಸ್‌ ಒಂದು ಅರ್ಥಿಕ ಯುದ್ಧವಾಗಿದ್ದು ಜಗತ್ತಿನಿಂದ ಬಡವರನ್ನು ನಿರ್ಮೂಲ ಮಾಡುವ ಉದ್ದೇಶವಿದೆ” ಎಂದಿದ್ದಾರೆ.

ಪಾಶ್ಚಿಮಾತ್ಯ ಆರ್ಥಿಕತೆಯನ್ನು ನಾಶ ಮಾಡುವುದಕ್ಕೆ ಚೀನಾ ಸೃಷ್ಟಿಸಿ ಹರಡುತ್ತಿದೆ ಎಂದು ಕೆಲವರು ಹೇಳಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.