ಮೊಬೈಲ್‌ನಲ್ಲೇ ಇಯರ್ ಬಡ್ ಇಡುವ ವಿನ್ಯಾಸ: ಶಿಯೋಮಿಗೆ ಪೆಟೆಂಟ್

ಇಷ್ಟು ದಿನ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುತ್ತಾ ತನ್ನದೇ ಅಭಿಮಾನಿ ವೃಂದವನ್ನು ಹೊಂದಿದಂತಹ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಶಿಯೋಮಿ, ಸದ್ಯ ಹೊಸ ಹೊಸ ತಂತ್ರಜ್ಞಾನದ ಆವಿಷ್ಕಾರದಲ್ಲಿ ನಿರತವಾಗಿದೆ.

ಇದೇ ಮಾದರಿಯಲ್ಲಿ ಸದ್ಯ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಕ್ರಾಂತಿಕಾರಕ ಆವಿಷ್ಕಾರವೊಂದನ್ನು ಮಾಡುವ ಮೂಲಕ ಹೊಸ ಭಾಷ್ಯವನ್ನು ಬರೆದಿದೆ. ಅಲ್ಲದೇ ಅದಕ್ಕಾಗಿ ಪೆಟೆಂಟ್ ಅನ್ನು ಸಹ ಪಡೆಯಲು ಮುಂದಾಗಿದೆ.

ಶಿಯೋಮಿ ಹೊಸ ತಂತ್ರಜ್ಞಾನವನ್ನು ಪ್ರಯೋಗಿಸಲು ಮುಂದಾಗಿದ್ದು,  ಕಂಪನಿಯು ಸ್ಮಾರ್ಟ್‌ಫೋನಿನಲ್ಲಿಯೇ ಇಯರ್ ಬಡ್ ಅನ್ನು ಸಂಗ್ರಹಿಸುವ ಮತ್ತು ಬಹುಶಃ ಚಾರ್ಜ್ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಿದೆ.

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎಲ್ಲಾ ತಯಾರಕರು ತಮ್ಮದೇ ಆದ ಇಯರ್ ಬಡ್‌ಗಳನ್ನು ಲಾಂಚ್ ಮಾಡಿದ್ದು, ಜನರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇಯರ್ ಬಡ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಯರ್ ಬಡ್ ವಿಭಾಗದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದೆ.

ಇದನ್ನು ಓದಿ: ಚಂದ್ರ-ಮಂಗಳ ಗ್ರಹದಲ್ಲಿ ನ್ಯೂಕ್ಲಿಯರ್ ರಿಯಾಕ್ಟರ್ ನಿರ್ಮಿಸಲಿದೆ ಅಮೆರಿಕ…!

ಶಿಯೋಮಿ ಇತ್ತೀಚೆಗೆ ಚೀನಾ ಮತ್ತು ನೆದರ್‌ಲ್ಯಾಂಡ್‌ನಲ್ಲಿ ಪೇಟೆಂಟ್‌ಗಳನ್ನು ಸಲ್ಲಿಸಿದೆ ಎಂದು ಡಚ್ ಮೂಲದ ಮಾಧ್ಯಮ ಲೆಟ್ಸ್ ಗೊ ಡಿಜಿಟಲ್ ವರದಿ ಮಾಡಿದೆ.  

ಒಂದು ಸ್ಮಾರ್ಟ್‌ಫೋನ್‌ನಲ್ಲಿಯೇ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಸಂಗ್ರಹಿಸಲು ಎರಡು ಮೀಸಲಾದ ಸ್ಲಾಟ್‌ಗಳನ್ನು ನೀಡುವುದಾಗಿದೆ. ಒಮ್ಮೆ ಸ್ಮಾರ್ಟ್‌ಫೋನಿನಲ್ಲಿ ಈ ಬದಲಾವಣೆಯನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾದರೆ, ವೈರ್‌ಲೆಸ್ ಇಯರ್‌ಬಡ್‌ ಗಳಿಗಾಗಿಯೇ ಬರುವ ಚಾರ್ಜಿಂಗ್ ಕೇಸ್‌ಗಳಿಗೆ ವಿದಾಯ ಹೇಳಬಹುದಾಗಿದೆ.

ಹೇಗೆ ಕಾರ್ಯನಿರ್ವಹಿಸಲಿದೆ?

ಪೇಟೆಂಟ್‌ಗಳ ಪ್ರಕಾರ, ಸ್ಮಾರ್ಟ್‌ಫೋನ್ ಎರಡು ಉದ್ದದ ಪೈಪ್ ತರಹದ ಸ್ಲಾಟ್‌ಗಳೊಂದಿಗೆ ಬರುತ್ತದೆ, ಅದರಲ್ಲಿ ಇಯರ್‌ಬಡ್‌ಗಳು ಸ್ಲೈಡ್ ಆಗುತ್ತವೆ. ಅಲ್ಲದೇ ಪೇಟೆಂಟ್‌ ಪಡೆಯಲಿರುವ ಇಯರ್‌ಬಡ್‌ಗಳು ಚಲಿಸಬಲ್ಲ “ತಲೆ” ಯೊಂದಿಗೆ ಬರುತ್ತವೆ, ಅದು ಫೋನ್‌ನೊಳಗೆ ಸಂಗ್ರಹಿಸಿದಾಗ ಮೇಲಕ್ಕೆ ಮಾಡಬಹುದು ಮತ್ತು ಬಳಕೆದಾರರ ಕಿವಿಗೆ ಸುಲಭವಾಗಿ ಹೊಂದಿಕೊಳ್ಳುವಂತೆ ಭಾಗಿಸಬಹುದಾಗಿದೆ.

ಇಯರ್‌ಬಡ್‌ಗಳು ಮೇಲ್ಭಾಗದಲ್ಲಿರುವ ಎರಡು ಸ್ಲಾಟ್‌ಗಳ ಮೂಲಕ ಫೋನ್‌ನ ಒಳಗೆ ನೇರವಾಗಿ ಹೋಗುತ್ತವೆ. ಮತ್ತು ಪೇಟೆಂಟ್ ಪ್ರಕಾರ, ಈ ಇಯರ್‌ಬಡ್‌ಗಳನ್ನು ಮೊಬೈಲ್‌ನ ಪ್ರಾಥಮಿಕ ಸ್ಪೀಕರ್‌ಗಳಲ್ಲಿ ಒಂದಾಗಿ ಕೆಲಸ ಮಾಡುವಂತೆ ವಿನ್ಯಾಸಗೊಳಿಸಲಾಗುವುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.