ಡಿಎನ್ಎಗಳ ರಚನೆಯಲ್ಲಿ ಬದಲಾವಣೆ ತರುವ ಕುರಿತು ಸಂಶೋಧನೆಗಳು ನಡೆಯುತ್ತಲೇ ಇವೆ. ಈ ರಚನೆಯಲ್ಲಿ ಮಾರ್ಪಾಡು ಮಾಡುವುದಕ್ಕೆ ಅನುಕೂಲಕರವಾಗುವ ಕತ್ತರಿಯೊಂದನ್ನು ಈ ಇಬ್ಬರು ವಿಜ್ಞಾನಿಗಳು ಶೋಧಿಸಿದ್ದಾರೆ. ಅದಕ್ಕಾಗಿ ಈ ಬಾರಿಯ ರಸಾನಿಯಕ ನೊಬೆಲ್ ಪುರಸ್ಕಾರ ಲಭಿಸಿದೆ

ಕೃಷಿ, ಆರೋಗ್ಯ ಕ್ಷೇತ್ರ ಸೇರಿದಂತೆ ಹಲವು ಮಹತ್ವದ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಬಹುದಾದ ಜೀನ್ ಎಡಿಟಿಂಗ್ ವಿಧಾನ ಕುರಿತ ಸಂಶೋಧನೆಗಾಗಿ ಪ್ರೊ ಇಮ್ಯಾನ್ಯುಯಲ್ ಶೆಪಂತೆ ಮತ್ತು ಪ್ರೊ ಜೆನಿಫರ್ ಡೌನಾ ಅವರಿಗೆ 2020ರ ರಸಾಯನ ವಿಜ್ಞಾನದ ನೊಬೆಲ್ ಪುರಸ್ಕಾರ ಲಭಿಸಿದೆ.
ಬರ್ಲಿನ್‌ನ ಮ್ಯಾಕ್ಸ್ ಪ್ಲಾಂಕ್ ಯೂನಿಟ್ ಫಾರ್ ದಿ ಸೈನ್ಸ್ ಆಪ್ ಪೆಥೋಜನ್ಸ್‌ನ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿರುವ ಇಮ್ಯಾನ್ಯುಯಲ್ ಶೆಂಪೆತೆ ಮತ್ತು ಅಮೆರಿಕದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಪಾಕರಾಗಿರುವ ಜೆನ್ನಿಫರ್ ಡೌನ ಅವರ ಎಂಟು ವರ್ಷಗಳ ಸಂಶೋಧನೆಗೆ ದೊಡ್ಡ ಗೌರವ ಸಂದಿದೆ.
ಜೀನ್ ಕತ್ತರಿ-ಜೆನಿಟಿಕ್ ಸಿಸರ್- ಎಂದು ಕರೆದಿರುವ ಈ ವಿಧಾನವನ್ನು ವೈಜ್ಞಾನಿವಾಗಿ ಸಿಆರ್‌ಐಎಸ್‌ಪಿಆರ್/ಸಿಎಎಸ್9 ಎಂದು ಹೆಸರಿಸಲಾಗಿದೆ. ಇದು ಪ್ರಾಣಿ, ಸಸ್ಯ ಅಥವಾ ಯಾವುದೇ ಸೂಕ್ಷ್ಮ ಜೀವಿಗಳಲ್ಲಿರುವ ಡಿಎನ್‌ಎಯನ್ನು ಅತ್ಯಂತ ನಿಖರಾಗಿ ಕತ್ತರಿಸಬಹುದು ಎಂದು ಈ ಇಬ್ಬರು ಸಾಬೀತು ಮಾಡಿದ್ದಾರೆ.
ಜೀವಕೋಶಗಳಲ್ಲಿರುವ ಜೀನ್‌ಗಳನ್ನು ಮಾರ್ಪಾಡುವ ಮಾಡುವ ಪ್ರಯತ್ನಗಳು ಈ ಹಿಂದೆಯೂ ನಡೆದಿವೆ. ಆದರೆ ಹೆಚ್ಚು ಸಮಯವನ್ನು ಬೇಡುವ ಪ್ರಯೋಗವಾಗಿತ್ತು. ಅಷ್ಟೇ ಸಂಕೀರ್ಣವೂ ಹಾಗೂ ಅಸಾಧ್ಯವೆನಿಸುವ ಕೆಲಸವೂ ಹೌದು. ಆದರೆ ಈಗ ಈ ಜೀನ್ ಕತ್ತರಿಯ ಮೂಲಕ ಕೆಲವೇ ವಾರಗಳಲ್ಲಿ ಜೀವಕೋಶದ ಜೀವನಿಯಮವನ್ನೇ ಬದಲಿಸಬಹುದು ಎಂದಿದ್ದಾರೆ ವಿಜ್ಞಾನಿಗಳು.
ಇದೊಂದು ಕ್ರಾಂತಿಕಾರಿ ತಂತ್ರಜ್ಞಾನ ಎಂದು ಅಭಿಪ್ರಾಯಪಟ್ಟಿರುವ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್, ಸಸ್ಯಗಳನ್ನು ನಿರ್ದಿಷ್ಟ ವೈಶಿಷ್ಟ್ಯಗಳೊಂದಿಗೆ ಬೆಳೆಸುವಲ್ಲಿ, ಅಂದರೆ ಉಷ್ಣಾಂಶವಿರುವ ಪ್ರದೇಶದಲ್ಲಿ ಬರದಲ್ಲೂ ಬೆಳೆಯಲು ಸಾಧ್ಯವಾಗುವಂತಹ ಸಸ್ಯಗಳನ್ನು ಬೆಳೆಸಲು ಮಹತ್ವದ ಪಾತ್ರವಹಿಸುತ್ತದೆ.
ಔಷಧೀಯ ಕ್ಷೇತ್ರದಲ್ಲೂ ಈ ತಂತ್ರಜ್ಞಾನ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು. ಆನುವಂಶಿಕ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ, ಕ್ಯಾನ್ಸರ್‌ನಂತಹ ಕಾಯಿಲೆಗಳ ಚಿಕಿತ್ಸೆಗೆ ಹೊಸ ಆಯಾಮವನ್ನೇ ನೀಡಬಹುದು ಎಂದು ಹೇಳಲಾಗುತ್ತಿದೆ.
2011ರಲ್ಲಿ ಪೊರ್ಟೊರಿಕೊದಲ್ಲಿ ಇಮ್ಯಾನ್ಯುಯಲ್ ಮತ್ತು ಜೆನ್ನಿಫರ್ ಅವರ ಭೇಟಿ ಇಂಥದ್ದೊಂದು ಮಹತ್ವದ ಸಂಶೋಧನೆಗೆ ನಾಂದಿ ಹಾಡಿತು. ಈ ಭೇಟಿಗೂ ಮೊದಲೇ ಇಮ್ಯಾನ್ಯುಯಲ್ ಶೆಪೆಂತೆ, ಮನುಕುಲಕ್ಕೆ ಅಪಾಯ ಒಡ್ಡುತ್ತಲೇ ಬಂದಿರುವ ಸ್ಟ್ರೆಪ್ಟೊಕೊಕಸ್ ಪೈಯೊಜೀನ್ಸ್ ಬ್ಯಾಕ್ಟೀರಿಯಾ ಕುರಿತು ಅಧ್ಯಯನ ಆರಂಭಿಸಿದ್ದರು.
ಈ ಬ್ಯಾಕ್ಟೀರಿಯಾದ ಜೀನ್ ಸ್ವರೂಪವನ್ನು, ಅದರ ನಿಯಂತ್ರಣದ ಕುರಿತು ಕುತೂಹಲದಿಂದ ಅಧ್ಯಯನ ನಡೆಸಿದ್ದು, ಜೀವನಿರೋಧಕ ಶಕ್ತಿಯ ಬಗ್ಗೆ ಅರಿತುಕೊಂಡರು. ಇದು ಕ್ರಾಂತಿಕಾರಿ ತಂತ್ರಜ್ಞಾನ ರೂಪಿಸುವ ಮೂಲಕ ರಸಾಯನಿಕ ವಿಜ್ಞಾನ ಕ್ಷೇತ್ರದಲ್ಲಿ ಅಪೂರ್ವ ಹೆಜ್ಜೆ ಗುರುತು ಮೂಡಿಸಿದೆ.
ಇದನ್ನೂ ಓದಿ | ನೊಬೆಲ್ 2020 | ಗೆಲಾಕ್ಸಿ ಮತ್ತು ಕಪ್ಪು ಕುಳಿ ಅಧ್ಯಯನ ಮಾಡಿದ ಮೂವರಿಗೆ ಈ ಬಾರಿಯ ಭೌತಶಾಸ್ತ್ರದ ನೊಬೆಲ್
ರಸಾಯನ ವಿಜ್ಞಾನ ವಿಭಾಗದಲ್ಲಿ ಈ ಪುರಸ್ಕಾರಕ್ಕೆ ಭಾನಜರಾಗುತ್ತಿರುವ ಇಮ್ಯಾನ್ಯುಯಲ್ ಶೆಪೆಂತೆ ಮತ್ತು ಜೆನ್ನಿಫರ್ ಡೌನಾ ಏಳನೆಯ ಮತ್ತು ಎಂಟನೆಯ ವಿಜ್ಞಾನಿಗಳಾಗಿದ್ದಾರೆ.