ಹೊಸ ಎರಡು ಸ್ಮಾರ್ಟ್ ಫೋನ್‌ಗಳೊಂದಿಗೆ ಮತ್ತೆ ಸದ್ದು ಮಾಡುತ್ತಿದ್ದೆ ನೋಕಿಯಾ

ನೋಕಿಯಾ ಮೊಬೈಲ್‌ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿಯನ್ನು ಇಂದಿಗೂ ಯಾರೂ ಮರೆತಿಲ್ಲ. ಸ್ಮಾರ್ಟ್‌ಫೋನ್‌ಗಳ ಕಾಲಕ್ಕೆ ಹೊರಳಿಕೊಳ್ಳುವ ಹೊತ್ತಲ್ಲಿ ನೋಕಿಯಾ ಅಪ್ರಸ್ತುತವಾಗಿದ್ದು ಅನೇಕರಿಗೆ ಅಚ್ಚರಿ. ಆದರೆ ಛಲದ ಬಿಡದ ನೋಕಿಯಾ ಹೊಸ ಫೋನ್‌ಗಳೊಂದಿಗೆ ಬರುತ್ತಿದೆ!

  • ಟೆಕ್‌ ಕನ್ನಡ ಡೆಸ್ಕ್‌

ಎಚ್‌ಎಂಡಿ ಗ್ಲೋಬಲ್‌ ನೋಕಿಯಾ ಮೊಬೈಲ್‌ ಬ್ರ್ಯಾಂಡನ್ನು ಜಗತ್ತಿಗೆ ಪರಿಚಯಿಸಿದ ಕಂಪನಿ. ಈ ತಿಂಗಳು ಎರಡು ಹೊಸ ನೋಕಿಯಾ ಸ್ಮಾರ್ಟ್‌ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ.
ನೋಕಿಯಾ ಪವರ್‌ ಯೂಸರ್‌ ವರದಿ ಮಾಡಿರುವಂತೆ ನೋಕಿಯಾ 6.2 ಮತ್ತು ನೋಕಿಯಾ 7.2 ಬಿಡುಗಡೆಯಾಗಲಿರುವ ಫೋನ್‌ಗಳು. ಈಗಾಗಲೇ ಸರ್ಟಿಫಿಕೇಷನ್‌ಗೆ ಸಲ್ಲಿಸಿದ ಅರ್ಜಿಗೆ ಭಾರತದಲ್ಲಿ ಮನ್ನಣೆ ಸಿಕ್ಕಿದೆ. ಇಂಡೋನೇಷ್ಯಾದಲ್ಲೂ ಸಿಕ್ಕಿದ್ದು, ರಷ್ಯಾದಲ್ಲಿ ಶೀಘ್ರದಲ್ಲೇ ಲಭ್ಯವಾಗ ನಿರೀಕ್ಷೆ ಇದೆ. ಎರಡು ಫೋನ್‌ಗಳಲ್ಲಿ ಏನಿದೆ?

ನೋಕಿಯಾ 6.2

ಇದು ನೋಕಿಯಾ ಎಕ್ಸ್‌ 71 ಅನ್ನು ಹೋಲುತ್ತದೆ. 6 ಇಂಚ್‌ ಫುಲ್‌ ಎಚ್‌ಡಿ ಮತ್ತು ಅಮೋಲ್ಡ್‌ ಡಿಸ್‌ಪ್ಲೇ ಇದೆ. ವಿಶೇಷವೆಂದರೆ ಸೆಲ್ಫಿ ಕ್ಯಾಮೆರಾಇರುವ ನಾಚ್‌ ಬದಲು, ಹೋಲ್‌ ಪಂಚ್‌ ಡಿಸ್‌ಪ್ಲೇಯನ್ನು ಹೊಂದಿದೆ. ಅಂದರೆ ಸೆಲ್ಫಿ ಕ್ಯಾಮೆರಾ ಸ್ಕ್ರೀನ್‌ ಮೇಲ್ತುದಿಯಲ್ಲಿ ಸಣ್ಣ ರಂಧ್ರದಂತೆ ಇದ್ದು ಸ್ಕ್ರೀನ್‌ನಲ್ಲಿ ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ. ಅಂದರೆ ಡಿಸ್‌ಪ್ಲೇ ಪ್ರಮಾಣ ಇನ್ನಷ್ಟು ಹೆಚ್ಚಿರುತ್ತದೆ.ಜೊತೆಗೆ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳು ಇರಲಿವೆ- 48 ಮೆಗಾ ಪಿಕ್ಸೆಲ್‌, 8 ಮೆಗಾ ಪಿಕ್ಸೆಲ್‌ ಮತ್ತು 5 ಮೆಗಾ ಪಿಕ್ಸೆಲ್‌. 660 ಕಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್‌ ಇರುವ ಈ ಫೋನ್‌ ದರವಿನ್ನೂ ಬಹಿರಂಗವಾಗಿಲ್ಲ.

ನೋಕಿಯಾ 7.2

6.18 ಸ್ಕ್ರೀನ್‌ ಫುಲ್‌ ಎಚ್‌ಡಿ ಯೂ ಆಕಾರದ ಡಿಸ್‌ಪ್ಲೇ ನಾಚ್‌ ಇದೆ. 4 ಜಿಬಿ ರ್ಯಾಮ್‌, ರಾಮ್‌ 64 ಜಿಬಿ, 3500 ಎಂಎಎಚ್‌ ಬ್ಯಾಟರಿಯನ್ನು ಹೊಂದಿದೆ. ಹೈಬ್ರೀಡ್‌ ಸಿಮ್‌ ಸ್ಲಾಮ್‌ ಮತ್ತು ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಒಳಗೊಂಡಿದೆ. ಇದರಲ್ಲೂ ಆಕ್ಟಾ ಕೋರ್‌ (2.2 ಗಿಗಾ ಹರ್ಟ್ಸ್‌) ೬60 ಕಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್‌ ಇರುವ ಈ ಫೋನ್‌ ದರವಿನ್ನೂ ಬಹಿರಂಗವಾಗಿಲ್ಲ.