8199 ರೂ.ಗಳಿಗೆ ನೋಕಿಯಾ 2.3 ಸ್ಮಾರ್ಟ್‌ಫೋನ್‌; ಡಿಸೆಂಬರ್‌ 27ಕ್ಕೆ ಮಾರುಕಟ್ಟೆಗೆ

ಹಲವು ಸ್ಮಾರ್ಟ್‌ ಫೋನ್‌ ಕಂಪನಿಗಳ ತೀವ್ರ ಸ್ಪರ್ಧೆಯ ನಡುವೆ ಹಳೆಯ ಹುಲಿ ನೋಕಿಯಾ ಸ್ಮಾರ್ಟ್‌ಫೋನ್‌ನೊಂದಿಗೆ ಮಾರುಕಟ್ಟೆಯಲ್ಲಿ ಗಮನಸೆಳೆಯುತ್ತಿದೆ. ಕೈಗೆಟುಕುವ ಬೆಲೆಯ ಈ ಫೋನ್‌ ನಿಜಕ್ಕೂ ಈಗಾಗಲೇ ಇರುವ ಫೋನ್‌ಗಳಿಗೆ ಸಡ್ಡು ಹೊಡೆಯುವುದೆ?

ದಶಕಗಳ ಹಿಂದೆ ಮೊಬೈಲ್‌ಗೆ ಎಂದರೆ ನೆನಪಾಗುವ ಏಕೈಕ ಬ್ರಾಂಡ್‌ ಎನಿಸಿಕೊಂಡಿದ್ದ ನೋಕಿಯಾ ಸ್ಮಾರ್ಟ್‌ಫೋನ್‌ ಬರುವ ಹೊತ್ತಿಗೆ ಅಪ್ರಸ್ತುತವಾಗಿತ್ತು. ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತಾದರೂ ಮಾರುಕಟ್ಟೆಯಲ್ಲಿ ತನ್ನ ಗುರುತು ದಾಖಲಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಈಗ ಮತ್ತೆ ಮೈಕೊಡವಿ ನಿಂತಿರುವ ನೋಕಿಯಾ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್‌ನೊಂದಿಗೆ ಬಂದಿದೆ.

ಬುಧವಾರ ಬಿಡುಗಡೆಯಾಗಿರುವ ನೋಕಿಯಾ 2.3 ಸ್ಮಾರ್ಟ್‌ಫೋನ್‌ ಹೊಸ ಅಲೆ ಎಬ್ಬಿಸುವ ನಿರೀಕ್ಷೆಯನ್ನು ಹೊಂದಿದೆ. ಕೇವಲ ರೂ. 8199 ಬೆಲೆ ಈ ಫೋಣ್‌, 2ಜಿಬಿ ಮತ್ತು 32ಜಿಬಿ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. 400 ಜಿಬಿವರೆಗೆ ವಿಸ್ತರಿಸುವುದಕ್ಕೆ ಅವಕಾಶವಿದೆ. ನೀಲಿ, ಹಸಿರು, ಕಪ್ಪು ಮತ್ತು ಮರಳಿನ ಬಣ್ಣದಲ್ಲಿ ಲಭ್ಯವಿರುವ ಈ ಫೋನ್‌ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ನೊಂದಿಗೆ 13 ಮತ್ತು2 ಮೆಗಾ ಪಿಕ್ಸೆಲ್‌ ಹೊಂದಿದ್ದು, ೬.೨ ಎಚ್‌ಡಿ ಸ್ಕ್ರೀನ್‌ ಡಿಸ್‌ಪ್ಲೇ ಒಳಗೊಂಡಿದೆ. ಆಂಡ್ರಾಯ್ಡ್‌ 10 ಒಎಸ್‌ ಇದ್ದು, 4000 ಎಂಎಎಚ್‌ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಎರಡು ಸಿಮ್‌ ಸ್ಲಾಟ್‌ ಹೊಂದಿದ್ದು, ಗೂಗಲ್‌ ಅಸಿಸ್ಟಂಟ್‌ ಬಟನ್‌ ಇದೆ.

ವಿಶೇಷವೆಂದರೆ, ಎಲ್ಲ ಸ್ಮಾರ್ಟ್‌ಫೋನ್‌ಗಳು ಇಕಾಮರ್ಸ್‌ ಸೈಟ್‌ಗಳನ್ನು ಮಾರುಕಟ್ಟೆಯ ಕೇಂದ್ರವಾಗಿಸಿಕೊಂಡಿದ್ದರೆ, ನೋಕಿಯಾ ಆಫ್‌ಲೈನ್‌ ಮಾರುಕಟ್ಟೆಯತ್ತಲೂ ಹೆಚ್ಚು ಆಸಕ್ತಿ ತೋರಿದೆ. ಕ್ರೋಮಾ, ಸಂಗೀತಾ, ಪೂರ್ವಿಕಾ, ಬಿಗ್‌ಸಿ ಮತ್ತು ಮೈಜಿ ಸ್ಟೋರ್‌ಗಳಲ್ಲಿ ಈ ಫೋನ್‌ ಲಭ್ಯವಾಗಲಿದೆ.

ಈಗಾಗಲೇ ಜಿಯೋ ಚಂದಾದಾರರಾಗಿರುವವರು ಅಥವಾ ಹೊಸದಾಗಿ ಚಂದದಾರಾಗುವರು ವಿಶೇಷ ಕೊಡುಗೆಯನ್ನು ಪಡೆಯಲಿದ್ದಾರೆ. ರೂ. 249 ಮತ್ತು ರೂ.349 ಪ್ರೀಪೇಡ್‌ ಪ್ಲಾನ್‌ ಖರೀದಿಸಿದರೆ, ರೂ. 7200 ಮೌಲ್ಯದ ಕೊಡುಗೆಯನ್ನು ಪಡೆಯಲಿದ್ದಾರೆ. ಇದರಲ್ಲಿ ಜಿಯೋನಿಂದ 2200 ಕ್ಯಾಷ್‌ ಬ್ಯಾಕ್‌, ಝೂಮ್‌ಕಾರ್‌ನಿಂದ ರೂ 2,000 ಮೌಲ್ಯದ ರಿಯಾಯಿತಿ, ಕ್ಲಿಯರ್‌ಟ್ರಿಪ್‌ನಿಂದ ರೂ. 3,000 ಮೌಲ್ಯದ ವೋಚರ್‌ ನೀಡಲಾಗುತ್ತಿದೆ.

ಒಂದು ವರ್ಷ ಅವಧಿಯಲ್ಲಿ ಫೋನ್‌ ಯಾವುದೇ ಸಮಸ್ಯೆಯಾದಲ್ಲಿ, ಬದಲಾವಣೆಗೆ ಅವಕಾಶ ನೀಡುತ್ತಿದ್ದು, ಯುಎಸ್‌ಬಿ, ಚಾರ್ಜರ್‌ ಸಮಸ್ಯೆಗಳಿದ್ದರೆ, ಆರು ತಿಂಗಳಲ್ಲಿ ನೋಕಿಯಾ ಮೊಬೈಲ್‌ ಕೇರ್‌ನಲ್ಲಿ ಬದಲಾಯಿಸಿಕೊಳ್ಳಬಹುದು.

ಕೈಗೆಟುಕುವ ಬೆಲೆ, ಬೆಲೆಗಿಂತ ಹೆಚ್ಚಿನ ಸೌಲಭ್ಯಗಳಿರುವ ಫೋನ್‌, ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವಂತೆ ಪೂರೈಸುತ್ತಿರುವುದು, ಗ್ರಾಹಕರಿಗೆ ವಿಶ್ವಾಸ ಮೂಡಿಸುವ ಸೇವೆ,ಇವುಗಳ ಜೊತೆಗೆ ವಿಶೇಷ ಕೊಡುಗೆ-ರಿಯಾಯಿತಿಗಳು ಹೊಸ ಸ್ಮಾರ್ಟ್‌ ಫೋನ್‌ನತ್ತ ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯನ್ನು ನೋಕಿಯಾ ಸಂಸ್ಥೆ ಹೊಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.