ಕೊರೊನಾ ಸೋಂಕು ಕುರಿತು ಟೀಕೆ ಮಾಡುವ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದ ಟ್ವಿಟರ್, ಆಕ್ಸಿಜನ್ ಲಭ್ಯತೆ, ಆಸ್ಪತ್ರೆ ಬೆಡ್‌ಗಳ ಲಭ್ಯತೆ ತಿಳಿಯುವುದಕ್ಕೆ ನೆರವಾಗುತ್ತಿದೆ

ಕೊರೊನಾ ಸೋಂಕಿನ 2ನೇ ಅಲೆ ತೀವ್ರವಾಗಿ ವೈದ್ಯಕೀಯ ಸೇವೆ ಇತ್ಯಾದಿ ನೆರವುಗಳಿಗಾಗಿ ನಾಗರಿಕರು ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸಿದ್ದಾರೆ. ರಕ್ತ, ಪ್ಲಾಸ್ಮಾ, ಬೆಡ್‌ಗಳು, ಔಷಧಿಗಳ ಮಾಹಿತಿ ಮತ್ತು ಲಭ್ಯತೆಗಾಗಿ ಜಾಲತಾಣಗಳ ಮೂಲಕ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕವೇ ಪರಿಹಾರ ಕ್ರಮಗಳನ್ನು, ಜಾಗೃತಿಯ ಸಲಹೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ವಾಟ್ಸ್‌ಆಪ್‌ಗಳು ಈ ನಿಟ್ಟಿನಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಟ್ವಿಟರ್ ಬಳಕೆದಾರರು ಮಾಹಿತಿ ಪಡೆಯುವುದನ್ನು ಇನ್ನಷ್ಟು ಸುಲಭವಾಗಿಸಲು ಸರ್ಚ್ ಫಿಲ್ಟರ್‌ಗಳನ್ನು ಪರಿಚಯಿಸಿದೆ. ಈ ಮೂಲಕ ನಿರ್ಧಿಷ್ಟ ಕೀವರ್ಡ್, ಪದ, ಹ್ಯಾಷ್‌ಟ್ಯಾಗ್, ಸ್ಥಳ, ದಿನಾಂಕಗಳನ್ನು ಹುಡುಕಿಕೊಳ್ಳಬಹುದು.
ಅಂದರೆ ನಿರ್ದಿಷ್ಟ ಸ್ಥಳದಲ್ಲಿ ಯಾವ ಆಸ್ಪತ್ರೆಯಲ್ಲಿ ಬೆಡ್‌ಗಳು ಇವೆ, ಆಕ್ಸಿಜೆನ್ ಎಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂಬುದನ್ನು ಹುಡುಕಬಹುದು. ಸಂಬಂಧ ಪಟ್ಟ ಹ್ಯಾಷ್‌ಟ್ಯಾಗ್‌ಗಳು ಅಥವಾ ಈ ವಿವರಗಳನ್ನು ಪ್ರಕಟಿಸುವ ಟ್ವಿಟರ್ ಪ್ರೊಫೈಲ್‌ಗಳನ್ನು ಹುಡುಕಿಕೊಳ್ಳಬಹುದು.