ಬೆಂಗಳೂರು ಸೇರಿದಂತೆ ದೇಶದ ಎಲ್ಲ ನಗರಗಳಲ್ಲಿ ಒಲಾದಿಂದ ಮನೆ ಬಾಗಿಲಿಗೆ ಉಚಿತ 10000 ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳು!

ಕೋವಿಡ್‌ 19ರ 2ನೇ ಅಲೆಯಲ್ಲಿ ಸೋಂಕಿಗೆ ಗುರಿಯಾದ ಬಹುತೇಕರಿಗೆ ಆಕ್ಸಿಜನ್‌ ಅಗತ್ಯವಿದೆ. ಆದರೆ ಆಕ್ಸಿಜನ್‌ ಸುಲಭವಾಗಿ ಎಲ್ಲೂ ಲಭ್ಯವಾಗುತ್ತಿಲ್ಲ. ಈ ಹೊತ್ತಲ್ಲಿ ಹಲವು ಸಂಘ ಸಂಸ್ಥೆಗಳು ಆಕ್ಸಿಜನ್‌ ಒದಗಿಸುವುದಕ್ಕೆ ಮುಂದಾಗುತ್ತಿವೆ. ಓಲಾ ಕೂಡ ಈಗ ಅಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿದೆ

ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತಿರುವ ಓಲಾ ಈಗ ಜೀವ ನೀಡುವ ಆಮ್ಲಜನಕ ಒದಗಿಸುವುದಕ್ಕೆ ಮುಂದಾಗಿದೆ. ಗಿವ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಓಲಾಫೌಂಡೇಷನ್‌ ದೇಶದ ಎಲ್ಲ ಮುಖ್ಯ ನಗರಗಳಲ್ಲಿ O2India ಕಾರ್ಯಕ್ರಮದಡಿ 10000 ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಒದಗಿಸಲಿದೆ.

ಇದು ಉಚಿತ ಸೇವೆಯಾಗಿದ್ದು ಆಕ್ಸಿಜನ್‌ ಅಗತ್ಯವಿರುವವರು ತಮ್ಮ ಓಲಾ ಆಪ್‌ ಮೂಲಕ ನೊಂದಾಯಿಸಿಕೊಂಡರೆ, ಮನೆ ಬಾಗಿಲಿಗೆ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಡೆಲಿವರಿ ಮಾಡಲಾಗುತ್ತದೆ. ಬಳಕೆ ಅಗತ್ಯ ಪೂರೈಸಿದ ಮೇಲೆ ಕಾನ್ಸಂಟ್ರೇಟರ್‌ಗಳನ್ನು ಮರಳಿ ಪಡೆಯಲಾಗುತ್ತದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಶುಲ್ಕವನ್ನು ಒಲಾ ಪಡೆಯುವುದಿಲ್ಲ.

ಸೋಮವಾರ ಹೇಳಿಕೆ ನೀಡಿರುವ ಓಲಾದ ಸಿಇಒ, ಭವೇಶ್‌ ಅಗರ್‌ವಾಲ್, ‘ಇದೇ ವಾರ ಬೆಂಗಳೂರಿನಲ್ಲಿ ಈ ಸೇವೆ ಆರಂಭವಾಗುತ್ತಿದ್ದು, ಬರುವ ದಿನಗಳಲ್ಲಿ ದೇಶದ ಉಳಿದ ನಗರಗಳಿಗೆ ವಿಸ್ತರಿಸಲಿದೆ’ ಎಂದಿದ್ದಾರೆ.

‘ ಈ ಕಾರ್ಯಕ್ರಮದ ಮೂಲಕ ಹೋಮ್‌ ಐಸೋಲೇಷನ್‌ನಲ್ಲಿರುವ, ಗುಣಮುಖರಾಗುತ್ತಿರುವವರಿಗೆ ಆಕ್ಸಿಜನ್‌ ಅನ್ನು ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಆಕ್ಸಿಜನ್‌ ಲಭ್ಯತೆ ಅವರಲ್ಲಿ ಒತ್ತಡ, ಆತಂಕಗಳನ್ನು ನಿವಾರಿಸಬಹುದು ಎಂಬ ವಿಶ್ವಾಸವಿದೆ ಎಂದು’ ಗಿವ್‌ ಇಂಡಿಯಾದ ಅತುಲ್‌ ಸತಿಜಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾನ್ಸಂಟ್ರೇಟರ್‌ಗಳ ಡೆಲಿವರಿಗೆ ಸಂಬಂಧಿಸಿದಂತೆ ಡ್ರೈವರ್‌ಗಳಿಗೆ ಹಾಗೂ ಸ್ವಯಂ ಸೇವೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೆ ತೀವ್ರತರವಾದ ತರಬೇತಿಯನ್ನು ನೀಡಲಾಗುತ್ತಿದೆ ಓಲಾ ತಿಳಿಸಿದೆ. ಒಮ್ಮೆ ರೋಗಿಗೆ ಆಕ್ಸಿಜನ್ ಅಗತ್ಯವಿಲ್ಲದಿರುವಾಗ ಅದನ್ನು ಮರಳಿ ಪಡೆದು, ಸಂಪೂರ್ಣ ಸ್ಯಾನಿಟೈಸ್‌ ಮಾಡಿ, ಅಗತ್ಯವಿರುವ ರೋಗಿಗೆ ತಲುಪಿಸಲಾಗುತ್ತದೆ. ಈ ಅವಧಿಯಲ್ಲಿ ಅಗತ್ಯವಾದ ಎಲ್ಲ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಓಲಾ ತಂಡ ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.