ಲಾಕ್‌ಡೌನ್‌ನಿಂದ ಮೈಕೊಡವಿಕೊಂಡಿರುವ ಕಂಪನಿಗಳು ಹೊಸ ಹೊಸ ಮೊಬೈಲ್, ಟಿವಿ ಹಾಗೂ ಇತರೆ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿವೆ. ಒನ್‌ಪ್ಲಸ್ ಕೈಗೆಟುಕುವ ಸ್ಮಾರ್ಟ್ ಟಿವಿಗಳೊಂದಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ

ಒನ್‌ಪ್ಲಸ್‌ನ ಫ್ಲಾಗ್‌ಶಿಪ್ ಸ್ಮಾರ್ಟ್ ಫೋನ್‌ಗಳ ಬೆಲೆ ಮೇಲಕ್ಕೆ ಏರುತ್ತಿದೆ. ಆದರೆ ಸ್ಮಾರ್ಟ್ ಫೋನನ್ನು ಸುಲಭದ ದರಕ್ಕೆ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಸ್ಪರ್ಧೆಯ ಅಲೆ ಎಬ್ಬಿಸುವುದಕ್ಕೆ ಸಿದ್ಧವಾಗಿದೆ.
ಕ್ಯು1 ಹೆಸರಿನ ಪ್ರೀಮಿಯಂ ಟಿವಿಯನ್ನು ಕಳೆದ ವರ್ಷವೇ ಬಿಡುಗಡೆ ಮಾಡಿದ್ದ ಒನ್‌ಪ್ಲಸ್ ಮಧ್ಯಮ ವರ್ಗದ ಅಗತ್ಯಗಳಿಗೆ ತಕ್ಕಂತ ಸುಲಭದ ದರದಲ್ಲಿ ಲಭ್ಯವಾಗುವ ಸ್ಮಾರ್ಟ್ ಟಿವಿ ಉತ್ಪಾದಿಸುವ ಆಸಕ್ತಿ ತೋರಿದ್ದು ಸುಮಾರು 15000 ರೂ.ಗಳಿಗೆ ಲಭ್ಯವಾಗುವಂತಹ ಟಿವಿಯನ್ನು ಸಿದ್ಧಪಡಿಸಿದೆ. 32 ಮತ್ತು 43 ಇಂಚುಗಳ ಗಾತ್ರದಲ್ಲಿ ಈ ಟಿವಿ ಲಭ್ಯವಾಗಲಿದೆ. ಸ್ಮಾರ್ಟ್ ಟಿವಿಗಳ ಬಿಡುಗಡೆಯು ಜುಲೈ 2ರಂದು ಲೈವ್ ಸ್ಟ್ರೀಮ್ ಮಾಡುತ್ತಿದೆ.
ಭಾರತದಲ್ಲಿ ಸುಲಭವಾಗಿ ಲಭ್ಯವಾಗುತ್ತಿರುವ ಬ್ರಾಡ್‌ಬ್ಯಾಂಡ್ ಸೇವೆ ಹಾಗೂ ಅಷ್ಟೇ ವ್ಯಾಪಕವಾಗುತ್ತಿರುವ ಸ್ಟ್ರೀಮ್ ಮಾರುಕಟ್ಟೆಯನ್ನು ಗಮನಿಸಿದ ಒನ್‌ಪ್ಲಸ್ ಸ್ಮಾರ್ಟ್ ಟಿವಿಯನ್ನು ಭಾರತೀಯ ಮಾರುಕಟ್ಟೆಗೆ ಅನುಗುಣವಾಗಿ ರೂಪಿಸುವ ಆಸಕ್ತಿ ತೋರಿದಂತಿದೆ.
ಕಳೆದ ವರ್ಷ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ವಿಶಿಷ್ಟ ಫೀಚರ್‌ಗಳಿಂದ ವರ್ಷದ ಫೋನ್ ಎನಿಸಿಕೊಂಡು ಮಾರುಕಟ್ಟೆಯನ್ನು ವ್ಯಾಪಿಸಿಕೊಂಡಿತ್ತು. ಈ ಬಾರಿ ಟಿವಿ ಅಂತಹದ್ದೊಂದು ಅಲೆಯನ್ನು ಸೃಷ್ಟಿಸುವ ನಿರೀಕ್ಷೆಯಲ್ಲಿದೆ ಒನ್‌ಪ್ಲಸ್.