ಒನ್‌ಪ್ಲಸ್ ನಾರ್ಡ್ ಲಾಂಚ್: ಬೇಡ ಎನ್ನಲಾಗದ ಚೀನಾ ಫೋನ್

ಚೀನಾ ಮೂಲದ ಪ್ರೀಮಿಯಮ್ ಸ್ಮಾರ್ಟ್‌ಪೋನ್ ತಯಾರಕ ಒನ್‌ಪ್ಲಸ್ ಹೊಸದೊಂದು ಫೋನ್ ಲಾಂಚ್ ಮಾಡಿದೆ. ಮಧ್ಯಮ ಆವೃತ್ತಿಯಲ್ಲಿ ಒನ್‌ಪ್ಲಸ್ ನಾರ್ಡ್ ಎನ್ನುವ ಪೋನ್ ಅನ್ನು ಪರಿಚಯಿಸಿದೆ.

ಇದುವರೆಗೂ ಕೇವಲ ನಂಬರ್‌ಗಳಲ್ಲಿ ತನ್ನ ಪೋನ್ ಹೆಸರು ಇಡುತ್ತಿದ್ದ ಒನ್‌ಪ್ಲಸ್,‌ ಈ ಬಾರಿ ಹೊಸದೊಂದ ಹೆಸರಿನೊಡನೆ ಮಧ್ಯ ಶ್ರೇಣಿಯ ವಿಭಾಗಕ್ಕೆ ಕಾಲಿಟ್ಟಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಮತ್ತೊಂದು ವಿಭಾಗದ ಬಳಕೆದಾರರನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ.

ಒನ್‌ಪ್ಲಸ್ ನಾರ್ಡ್ ಆವೃತ್ತಿ ಮತ್ತು ಬೆಲೆ:

  • 6 GB RAM + 64 GB ಮೆಮೊರಿ ಮಾದರಿ ರೂ. 24,999ಕ್ಕೆ
  • 8 GB RAM + 128 GB ಮೆಮೊರಿ ಮಾದರಿ ರೂ. 27,999ಕ್ಕೆ
  • 12 GB RAM + 256  GB ಮೆಮೊರಿ ಮಾದರಿ ರೂ. 29,999ಕ್ಕೆ ಮಾರಾಟವಾಗಲಿದೆ.

ಒನ್‌ಪ್ಲಸ್ ನಾರ್ಡ್ ಅಮೆಜಾನ್ ಇಂಡಿಯಾ ಮತ್ತು ಒನ್‌ಪ್ಲಸ್.ಇನ್ ಮೂಲಕ ಆಗಸ್ಟ್ 4 ರಿಂದ ಮಾರಾಟವಾಗಲಿದೆ. 6 GB RAM + 64 GB ಮೆಮೊರಿಯನ್ನು ಹೊಂದಿರುವ ಮಾದರಿ ಆರಂಭದ ಮಾರಾಟದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿದೆ. ಒಂದು ತಿಂಗಳು ಅಥವಾ ಹೆಚ್ಚಿನ ಅವಧಿಗೆ, ನಾರ್ಡ್ ಖರೀದಿದಾರರು 8 GB RAM ಮತ್ತು 12 GB RAM ಮಾದರಿಯನ್ನು ಖರೀದಿಸಬೇಕಾದ ಅಗತ್ಯವಿದೆ.

ಇದನ್ನು ಓದಿ: ಜೊತೆಯಾಗಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ನಿರ್ಮಿಸಲಿವೆ ಜಿಯೋ-ಗೂಗಲ್

ಒನ್‌ಪ್ಲಸ್ ನಾರ್ಡ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 765G SoC ನಲ್ಲಿ ಕಾರ್ಯನಿರ್ವಹಿಸಲಿದೆ. ಬ್ಲೂ ಮಾರ್ಬಲ್ ಮತ್ತು ಗ್ರೇ ಓನಿಕ್ಸ್ ಬಣ್ಣಗಳಲ್ಲಿ ಕಾಣಿಸಿಕೊಳ್ಳುವ ಫೋನ್‌, 90Hz ರಿಫ್ರೆಶ್ ದರವನ್ನು ಹೊಂದಿರುವ 6.44 FHD+ ಲಿಕ್ವಿಡ್ ಅಮೋಲೆಡ್ ಡಿಸ್‌ಪ್ಲೇಯನ್ನು ಒಳಗೊಂಡಿದೆ.

12 GB ವರೆಗಿನ RAM ಮತ್ತು 256 GB ವರೆಗೆ ಸ್ಟೋರೆಜ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ. RAM LPDDR4X ಆಗಿದ್ದರೆ, ಆನ್‌ಬೋರ್ಡ್ ಸಂಗ್ರಹವು UFS 2.1 ಆಗಿದೆ.

ಒನ್‌ಪ್ಲಸ್ ನಾರ್ಡ್ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ಇದೆ, ಇದು 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಶೂಟರ್, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ.

ಮುಂಭಾಗದ ಹೋಲ್-ಪಂಚ್ ವಿನ್ಯಾಸದಲ್ಲಿ ಎರಡು ಸೆಲ್ಫಿ ಕ್ಯಾಮೆರಾಗಳಿವೆ – 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ + 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ.

ಇದಲ್ಲದೆ, ವಾರ್ಪ್ ಚಾರ್ಜ್ 30 T ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುವ 4,115mAh ಬ್ಯಾಟರಿಯು ಈ ಫೋನಿನಲ್ಲಿದೆ, ಇದು ಕೇವಲ 30 ನಿಮಿಷಗಳಲ್ಲಿ ಫೋನ್ ಅನ್ನು 70% ದವರೆಗೆ ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೇ ಫಿಂಗರ್‌ಪ್ರಿಂಟ್ ಸೆನ್ಸಾರ್, 5G ಬೆಂಬಲ ಮತ್ತು NFC ಸಹ ಇದೆ.

ಒನ್‌ಪ್ಲಸ್ ನಾರ್ಡ್ ಆಂಡ್ರಾಯ್ಡ್ 10 ಆಧಾರಿತ ಆಕ್ಸಿಜನ್ OS 10.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಉತ್ತಮ ಮತ್ತು ಸುರಕ್ಷಿತ ಅನುಭವಕ್ಕಾಗಿ ಗೂಗಲ್ ಆಪ್‌ಗಳೊಂದಿಗೆ ದೊರೆಯಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.