ಐಐಎಸ್‌ಸಿ ಓಪನ್‌ ಡೇ | ಫೆ. 29ರಂದು ವಿಜ್ಞಾನ ಸಂಸ್ಥೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ

ದೇಶದ ಪ್ರತಿಷ್ಠಿತ ವಿಜ್ಞಾನ ಸಂಶೋಧನಾ ಸಂಸ್ಥೆ ಭಾರತೀಯ ವಿಜ್ಞಾನ ಸಂಸ್ಥೆ ರಾಷ್ಟ್ರೀಯ ವಿಜ್ಞಾನ ದಿನದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶವನ್ನು ಕಲ್ಪಿಸುತ್ತಿದೆ. ಇದೊಂದು ರೀತಿಯಲ್ಲಿ ವಿಜ್ಞಾನ ಹಬ್ಬವೇ. ತಪ್ಪದೇ ಪಾಲ್ಗೊಳ್ಳಿ

DCIM\100MEDIA\DJI_0010.JPG

ಭಾರತೀಯ ವಿಜ್ಞಾನ ಸಂಸ್ಥೆ, ದೇಶದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದು. ಶ್ರೇಷ್ಠ ವಿಜ್ಞಾನ ಸಂಶೋಧನಾ ಸಂಸ್ಥೆ ಎಂಬ ಹಿರಿಮೆ ಇದಕ್ಕಿದೆ. ರಾಷ್ಟ್ರೀಯ ವಿಜ್ಞಾನ ದಿನದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಸಂಸ್ಥೆ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಫೆ. 29ರಂದು ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತಿದೆ.

ಬೆಳಗ್ಗೆ 9 ರಿಂದ ಸಂಜೆ 5:30ರವರೆಗೆ ಭೇಟಿ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಸಂಸ್ಥೆಯ ಆವರಣದಲ್ಲಿ ಓಡಾಡಲು ಹಾಗೂ ಮಾಹಿತಿಪೂರ್ಣ ಮತ್ತು ಆಕರ್ಷಕ ವಿಜ್ಞಾನ-ತಂತ್ರಜ್ಞಾನ ಚಟುವಟಿಕೆಗಳನ್ನು ನೋಡಲು ಅವಕಾಶವಿರುತ್ತದೆ. ಅಲ್ಲದೆ ಸಂಸ್ಥೆಯ ವಿವಿಧ ವಿಭಾಗಗಳು ಮತ್ತು ಕೇಂದ್ರಗಳಲ್ಲಿ ಜನಪ್ರಿಯ ಉಪನ್ಯಾಸಗಳು, ಪ್ರಾಯೋಗಿಕ ಪ್ರದರ್ಶನಗಳು, ಭಿತ್ತಿಪತ್ರ ಪ್ರದರ್ಶನ, ರಸಪ್ರಶ್ನೆ ಸ್ಪರ್ಧೆ, ವಿವಿಧ ವೈಜ್ಞಾನಿಕ ಸ್ಪರ್ಧೆಗಳು ಮತ್ತು ಪ್ರದರ್ಶನಗಳು ನಡೆಯಲಿವೆ.

ಯುವ ವಿದ್ಯಾರ್ಥಿಗಳ ಆಕರ್ಷಣೆಗಾಗಿ ’ಕಿಡ್ಸ್-ಝೋನ್’ ಮೀಸಲಿದ್ದು, ಇಲ್ಲಿ ವಿಜ್ಞಾನ- ತಂತ್ರಜ್ಞಾನದ ಹಲವಾರು ಪ್ರದರ್ಶನಗಳು ನಡೆಯಲಿವೆ. ಓಪನ್ ಡೇ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ.

ಹೆಚ್ಚಿನ ವಿವರಗಳಿಗೆ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು : ಸಹಾಯವಾಣಿ: 080 22932225 / 22932400 ; ಸಾಮಾನ್ಯ ಸಂಪರ್ಕ: 080 22932770 / 22932228

ಕಳೆದ ವರ್ಷದ ಓಪನ್‌ ಡೇ ಚಿತ್ರಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.