ವಾರವೊಂದಲ್ಲಿ ಬಿಡುಗಡೆಯಾಗುತ್ತಿರುವ ನಾಲ್ಕನೇ ಚೀನಾ ಫೋನ್: ಒಪ್ಪೋ A72 5G

ಚೀನಾ ಫೋನ್‌ಗಳು ಮಾರುಕಟ್ಟೆಯಲ್ಲಿ ಎಷ್ಟು ಹಿಡಿತವನ್ನು ಹೊಂದಿದೆ ಎಂದರೆ ಕಳೆದ ಒಂದು ವಾರದಲ್ಲಿ ಸುಮಾರು ನಾಲ್ಕು ಚೀನಾ ಕಂಪನಿಗಳು, ನಾಲ್ಕು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿವೆ ಎಂದರೇ ನೀವು ನಂಬಲೇ ಬೇಕು.

ಮೊದಲಿಗೆ ಒನ್‌ಪ್ಲಸ್ ನಾರ್ಡ್‌ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತು, ಇದಾಗ ಮೇಲೆ ಶಿಯೋಮಿ ರೆಡ್‌ಮಿ ನೋಟ್ 9 ಸ್ಮಾರ್ಟ್‌ಫೋನ್, ಇದರ ಹಿಂದೆ ರಿಯಲ್‌ ಮಿ 6i ಸ್ಮಾರ್ಟ್‌ ಫೋನ್ ಪರಿಚಯ ಮಾಡಿತು. ಇಂದು ಮತ್ತೊಂದು ಚೀನಾ ಸ್ಮಾರ್ಟ್‌ಫೋನ್ ತಯಾರಕ ಒಪ್ಪೋ A72 5G ಎನ್ನುವ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ.

ಹೀಗೆ ವಾರವೊಂದರಲ್ಲಿ ಇಷ್ಟು ಚೀನಾ ಫೋನ್‌ಗಳು ಮಾರುಕಟ್ಟೆಯನ್ನು ಆಕ್ರಮಿಸಿದರೆ ಬೇರೆ ತಯಾರಕರು ತನ್ನ ಸರಕುಗಳನ್ನು ಮಾರುವುದಾದರು ಹೇಗೆ? ಆದರೆ ಸದ್ಯಕ್ಕೆ ಈ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ, ಚೀನಾ ಮಾರುಕಟ್ಟೆಯಲ್ಲಿ ಮಾತ್ರವೇ ಮಾರಾಟವಾಗಲಿದ್ದು, ದಿನ ಕಳೆದಂತೆ ನಮ್ಮ ಮಾರುಕಟ್ಟೆಯಲ್ಲಿಯೂ ಲಭ್ಯವಾಗಲಿದೆ.

ಇದನ್ನು ಓದಿ: ಭಾರತದಲ್ಲಿ ತಯಾರಾದ ಚೀನಾ ಫೋನ್ ‘ರೆಡ್‌ಮಿ ನೋಟ್ 9’: ಕೊಟ್ಟ ಕಾಸಿಗೆ ಲಾಸ್ ಅಂತೂ ಇಲ್ಲ..!

ಸದ್ಯಕ್ಕೆ ಒಪ್ಪೋ  A72 5G ಸ್ಮಾರ್ಟ್‌ಫೋನ್ ಹೇಗಿದೆ ನೋಡುವ. ಒಪ್ಪೋ A72 5G ಸ್ಮಾರ್ಟ್‌ಫೋನ್ ಹೆಸರಿನಲ್ಲಿಯೇ ಇರುವಂತೆ 5G ನೆಟ್‌ವರ್ಕ್‌ ಸಪೋರ್ಟ್ ಮಾಡಲಿದೆ. ಹಿಂಭಾಗದಲ್ಲಿ ಮೂರು ಕ್ಯಾಮೆರಾ ಮತ್ತು ಮುಂಭಾಗದಲ್ಲಿ ಪಿಂಚ್ ಹೋಲ್ ವಿನ್ಯಾಸದಲ್ಲಿ ಸೆಲ್ಪೀ ಕ್ಯಾಮೆರಾವನ್ನು ಹೊಂದಿದೆ.

ಒಪ್ಪೋ A72 5G ಸ್ಮಾರ್ಟ್‌ಫೋನ್ ಬೆಲೆ:

ಮಾರುಕಟ್ಟೆಯಲ್ಲಿ ಒಪ್ಪೋ A72 5G ಒಂದು ಮಾದರಿಯಲ್ಲಿ ಮಾತ್ರವೇ ಮಾರಾಟವಾಗಲಿದ್ದು, 8GB RAM ಮತ್ತು 128GB ಇಂಟರ್ನಲ್‌ ಮೆಮೊರಿ ಹೊಂದಿರುವ ಫೋನ್ ಸರಿ ಸುಮಾರು ರೂ.20200ಕ್ಕೆ ಲಭ್ಯವಾಗಲಿದೆ.

ಒಪ್ಪೋ A72 5G ಸ್ಮಾರ್ಟ್‌ಫೋನ್ ವಿಶೇಷತೆ:

ಒಪ್ಪೊ A72 5G ಕಲರ್ OS 7.2 ನಲ್ಲಿ ಕಾರ್ಯನಿರ್ವಹಿಸಲಿದ್ದು, 6.5-ಇಂಚಿನ FHD+ (1,080×2,400P) ಡಿಸ್ಪ್ಲೇಯನ್ನು ಹೊಂದಿದೆ. ಇದು 5G ಅನ್ನು ಬೆಂಬಲಿಸುವ ಡೈಮೆನ್ಸಿಟಿ 720 SoC ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 8GB RAM ಅನ್ನು ಹೊಂದಿದೆ.

ಒಪ್ಪೊ A72 5G ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 16 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, ಮತ್ತು 2 ಮೆಗಾಪಿಕ್ಸೆಲ್ ಕಪ್ಪು ಮತ್ತು ಬಿಳಿ ಕ್ಯಾಮೆರಾವನ್ನು ನೀಡಲಾಗಿದೆ.  ಫ್ಲ್ಯಾಷ್ ಅನ್ನು ಸಹ ಹೊಂದಿದೆ. ಮುಂಭಾಗದಲ್ಲಿ, ಪಂಚ್‌ ಹೋಲ್ ವಿನ್ಯಾಸದಲ್ಲಿ 16 ಮೆಗಾಪಿಕ್ಸೆಲ್ ಸಂವೇದಕವನ್ನು ಇರಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.