20 ನಿಮಿಷದಲ್ಲಿ ಮೊಬೈಲ್ ಫುಲ್ ಚಾರ್ಜ್: ಸಂಚಲನ ಮೂಡಿಸಿದ ವೇಗದ ಚಾರ್ಜರ್…!

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್‌ಗಳು ಜನರ ಅಗತ್ಯತೆಗಳಲ್ಲಿ ಪ್ರಥಮ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಅದನ್ನು ದಿನ ಪೂರ್ತಿ ಬಳಕೆ ಮಾಡಲೇ ಬೇಕಾದ ಅಗತ್ಯತೆಯೂ ಉಂಟು. ಇದರಿಂದಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಂಡಿದೆ. ಅಲ್ಲದೇ ಜೇಬಿನಲ್ಲಿ ಇಟ್ಟುಕೊಳ್ಳುವ ಪವರ್ ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿ ಉತ್ತಮ ವ್ಯವಹಾರವನ್ನು ನಡೆಸುತ್ತಿವೆ. ಇದರೊಂದಿಗೆ ಹೊಸದೊಂದು ವಸ್ತುವು ಅಗತ್ಯವಾಗುತ್ತಿದೆ.

ಅದೇ ವೇಗದ ಚಾರ್ಜರ್- ಫಾಸ್ಟ್‌ ಚಾರ್ಜರ್. ಮೊಬೈಲ್‌ಗಳನ್ನು ವೇಗವಾಗಿ ಚಾರ್ಜ್ ಮಾಡಲು ಮಾರುಕಟ್ಟೆಯಲ್ಲಿ ವೇಗದ ಚಾರ್ಜರ್‌ಗಳು ಕಾಣಿಸಿಕೊಳ್ಳುತ್ತಿದೆ. ಅಲ್ಲದೇ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ಸಹ ಗ್ರಾಹಕರಿಗೆ ಮೊಬೈಲ್‌ನೊಂದಿಗೆ ಫಾಸ್ಟ್‌ ಚಾರ್ಜರ್‌ಗಳನ್ನು ನೀಡುವ ಮೂಲಕ ಆಕರ್ಷಿಸುತ್ತಿವೆ.

ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪನಿಗಳು ಕ್ಷಣ ಮಾತ್ರದಲ್ಲಿ ಮೊಬೈಲ್ ಬ್ಯಾಟರಿಯನ್ನು ಚಾರ್ಜ್ ಮಾಡುವ ಚಾರ್ಜರ್‌ಗಳನ್ನು ಸಂಶೋಧಿಸಿದ್ದು, ಶಿಯೋಮಿ ಮುಂದಿನ ವಾರದಲ್ಲಿ 120W ಸಾಮರ್ಥ್ಯದ ಫಾಸ್ಟ್‌ ಚಾರ್ಜರ್ ಅನ್ನು ತನ್ನ ನೂತನ ಸ್ಮಾರ್ಟ್‌ಫೋನ್‌ನೊಂದಿಗೆ ನೀಡಲಿದೆ. ಇದೇ ಮಾದರಿಯಲ್ಲಿ ಮತ್ತೊಂದು ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಒಪ್ಪೋ 125W  ಸಾಮರ್ಥ್ಯದ ಫಾಸ್ಟ್‌ ಚಾರ್ಜರ್ ತಯಾರಿಸಿದೆ.

ಇದನ್ನು ಓದಿ: ಭಾರತೀಯ ಪ್ರಾದೇಶಿಕ ಭಾಷೆಗಳ ತಾಕತ್ತು ಗೂಗಲ್ ಗೆ ಗೊತ್ತು..! ಆದರೆ ..!?

ಇಷ್ಟು ದಿನ ಮಾರುಕಟ್ಟೆಯಲ್ಲಿ ಇದ್ದ ಫಾಸ್ಟ್‌ ಚಾರ್ಜರ್‌ಗಳು ಪೂರ್ತಿ ಬ್ಯಾಟರಿ ಚಾರ್ಜ್ ಮಾಡಲು ಒಂದು ಗಂಟೆಗೂ ಅಧಿಕ ಸಮಯವನ್ನು ತೆಗೆದುಕೊಂಡರೆ, ಈಗ ಮಾರುಕಟ್ಟೆಗೆ ಬರುತ್ತಿರುವ ಫಾಸ್ಟ್‌ ಚಾರ್ಜರ್ ಕೇವಲ 20 ನಿಮಿಷದಲ್ಲಿ ಮೊಬೈಲ್‌ ಅನ್ನು ಪೂರ್ಣ ಚಾರ್ಜರ್ ಮಾಡಲಿದೆ.

ಒಪ್ಪೋ ಲಾಂಚ್ ಮಾಡಲು ಮುಂದಾಗಿರುವ 125W ಸಾಮರ್ಥ್ಯದ ಫಾಸ್ಟ್‌ ಚಾರ್ಜರ್ ಮೊಬೈಲ್‌ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಶುರು ಮಾಡಲಿದೆ ಎನ್ನಲಾಗಿದೆ. ಒಪ್ಪೋ ಈ ಮಾದರಿಯ ಫಾಸ್ಟ್‌ ಚಾರ್ಜರ್ ಸಂಶೋಧಿಸಲು ಸಾಕಷ್ಟು ಹಣ ಮತ್ತು ಸಮಯವನ್ನು ವಿನಿಯೋಗಿಸಿದೆ.

ಸದ್ಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಬಿಡುಗಡೆ ಮಾಡಿರುವ ಡ್ಯಾಷ್ ಚಾರ್ಜರ್ ವೇಗದ ಚಾರ್ಜರ್ ಎನ್ನು ಖ್ಯಾತಿಯನ್ನು ಪಡೆದುಕೊಂಡಿತ್ತು, ಆದರೆ ಈಗ ಒಪ್ಪೋ 125W ಸಾಮರ್ಥ್ಯದ ಚಾರ್ಜರ್ ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಮೊಸ್ಟ್ ಆಡ್ವಾನ್ಸ್ ತಂತ್ರಜ್ಞಾನದಿಂದ ಕೂಡಿದೆ.

ಮೂಲಗಳ ಪ್ರಕಾರ ಒಪ್ಪೋ 125W  ಚಾರ್ಜರ್ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಕೇವಲ  20 ನಿಮಿಷದಲ್ಲಿ ಚಾರ್ಜ್ ಮಾಡಲಿದೆ,  ಅಲ್ಲದೇ ಕೇವಲ 5 ನಿಮಿಷದಲ್ಲಿ ಶೇ.41 ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಈ ಚಾರ್ಜರ್‌ನ ಜೊತೆಯಲ್ಲಿ ನೀಡುವ ಕೇಬಲ್‌ನ ಎರಡು ಬದಿಯಲ್ಲಿ ಯುಎಸ್‌ಬಿ- ಟೈಪ್‌ ಸಿ ಅನ್ನು ಬಳಸಲಾಗಿದ್ದು, ಇದು ವೇಗವಾಗಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವುದಕ್ಕೆ ಸಹಾಯ ಮಾಡಲಿದೆ.  

ಒಪ್ಪೋ  ಡಬಲ್ -6 ಸಿ ಕೋಶಗಳನ್ನು ಈ ಚಾರ್ಜರ್‌ನಲ್ಲಿ ಬಳಕೆ ಮಾಡಿದ್ದು, ಇದರಿಂದ ಚಾರ್ಜರ್ ಹೆಚ್ಚು ದೊಡ್ಡದಾದ ಗಾತ್ರವನ್ನು ಹೊಂದಿರದೆ, ಸಣ್ಣ ಪ್ರಮಾಣದಲ್ಲಿ ಸುಧಾರಿತ ವಿದ್ಯುತ್ ಸಾಂದ್ರತೆಯ ಗುಣಲಕ್ಷಣಗಳಿಂದ ಪ್ರಯೋಜನ ಪಡೆಯುತ್ತದೆ. ಒಪ್ಪೊದ ಹಿಂದಿನ ಯುಎಸ್‌ಬಿ-ಎ ಚಾರ್ಜರ್‌ಗಳಿಗಿಂತ ಇದು ಭಿನ್ನವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.