ಮತ್ತೊಂದು ಬಜೆಟ್ ಬೆಲೆಯ ಬೆಸ್ಟ್ ಸ್ಮಾರ್ಟ್‌ಫೋನ್ ಪೊಕೊ M2

ಕರೋನಾ ದಿಂದಾಗಿ ನಡೆದ ವರ್ಚುವಲ್ ಈವೆಂಟ್ ಮೂಲಕ ಪೊಕೊ M2 ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಇದು ಪೊಕೊ M2 ಪ್ರೊ ನ ಟೋನ್-ಡೌನ್ ಆವೃತ್ತಿಯಾಗಿದೆ. ಪೊಕೊ M2 ಆಕ್ಟಾ-ಕೋರ್ ಪ್ರೊಸೆಸರ್, ಕ್ವಾಡ್ ರಿಯರ್ ಕ್ಯಾಮೆರಾಗಳು ಮತ್ತು ದೊಡ್ಡ ಬ್ಯಾಟರಿಯಂತಹ ವಿಶೇಷಣಗಳೊಂದಿಗೆ ಬರುತ್ತದೆ. ಇದನ್ನು ಆವೃತ್ತಿಗಳಲ್ಲಿ ಮತ್ತು ಮೂರು ಬಣ್ಣ ಆಯ್ಕೆಗಳಲ್ಲಿ ದೊರೆಯಲಿದೆ. 

ಪೊಕೊ M2 ಬೆಲೆ, ಲಭ್ಯತೆ: 

  • ಪೊಕೊ M2 6 GB + 64GB ಬೇಸ್ ರೂಪಾಂತರದ ಬೆಲೆ ರೂ. 10,999
  • ಪೊಕೊ M2 6 GB + 128 GB ಟಾಪ್-ಎಂಡ್ ರೂಪಾಂತರದ ಬೆಲೆ ರೂ. 12,499

ಪಿಚ್ ಬ್ಲ್ಯಾಕ್, ಸ್ಲೇಟ್ ಬ್ಲೂ ಮತ್ತು ಬ್ರಿಕ್ ರೆಡ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಬರಲಿದ್ದು, ಇದು ಸೆಪ್ಟೆಂಬರ್ 15, ಮಧ್ಯಾಹ್ನ 12 ಗಂಟೆ (ಮಧ್ಯಾಹ್ನ)ಗೆ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದು.

ಪೊಕೊ M2  ವಿಶೇಷಣಗಳು:

ಡ್ಯುಯಲ್ ಸಿಮ್ (ನ್ಯಾನೊ) ಹಾಕಿಕೊಳ್ಳಬಹುದಾದ ಆಂಡ್ರಾಯ್ಡ್ 10 ಆಧಾರಿತ ಪೊಕೊ M2 ಪೊಕೊ MIUI ನಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು MIUI 12 ಶೀಘ್ರದಲ್ಲೇ ಬರಲಿದೆ. ಇದು 6.53-ಇಂಚಿನ FHD + (1,080×2,340p) ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ನಿಂದ ರಕ್ಷಿಸಲಾಗಿದೆ. ಪೊಕೊ M2 ಅನ್ನು ಮೀಡಿಯಾ ಟೆಕ್ ಹೆಲಿಯೊ G80 SoC ನಡೆಸುತ್ತಿದೆ. ಇದರೊಂದಿಗೆ ಮಾಲಿ G 52 GPU ಮತ್ತು 6 GB LPDDR4x RAM ನೊಂದಿಗೆ ಜೋಡಿಸಲಾಗಿದೆ.

ಪೊಕೊ M2 ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದರಲ್ಲಿ 13 ಮೆಗಾಪಿಕ್ಸೆಲ್ ಪ್ರೈಮರಿ ಶೂಟರ್, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, ಮ್ಯಾಕ್ರೋ ಲೆನ್ಸ್ 5 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಡೀಪ್ ಸೆನ್ಸಾರ್ ಗಳನ್ನು ಕಾಣಬಹುದು. ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. 

ಪೊಕೊ M2 ಮೈಕ್ರೊ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ ಡ್ಯುಯಲ್-ಬ್ಯಾಂಡ್ ವೈ-ಫೈ, ಡ್ಯುಯಲ್ VoLTE ಬೆಂಬಲ, 4G, ಬ್ಲೂಟೂತ್ 5.0, IR ಬ್ಲಾಸ್ಟರ್, GPS, 3.5 mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಇದರೊಂದಿಗೆ 18W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಫೋನ್ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.