ಮಾರುಕಟ್ಟೆಗೆ ಮತ್ತೊಂದು ಚೀನಿ ಫೋನ್: ಆತ್ಮನಿರ್ಭರತೆಗೆ ಸವಾಲು ಹಾಕುವುದೇ?

ಭಾರತ-ಚೀನಾ ಗುದ್ದಾಟದ ನಡುವೆಯೇ ಚೀನಾ ಮೂಲದ ಸ್ಮಾರ್ಟ್‌ಫೊನ್ ತಯಾರಕ ಶಿಯೋಮಿ ಅಂಗ ಸಂಸ್ಥೆ ಪೊಕೊ, ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಚೀನಾ ವಸ್ತುಗಳನ್ನು ಬಳಸದಿರಲು ಹಲವು ಮಂದಿ ಭಾರತೀಯರು ಪ್ರತಿಜ್ಞೆ ಮಾಡಿರುವ ಸಂದರ್ಭದಲ್ಲಿ ಈ ಫೋನ್ ಹೇಗೆ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕು.

ಪೊಕೊ ಭಾರತೀಯ ಮಾರುಕಟ್ಟೆಗೆ ತನ್ನ ಮೂರನೇ ಸ್ಮಾರ್ಟ್‌ಫೋನ್ ‘ಪೊಕೊ M2 ಪ್ರೋ’ (Poco M2 Pro)‌ ಪರಿಚಯಿಸಿದೆ. ನೂತನ ಫೋನ್ ಮಾರುಕಟ್ಟೆಯಲ್ಲಿ ರೂ.10,000 ರಿಂದ ರೂ.15000ದ ಒಳಗಿನ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ. ಇದರೊಂದಿಗೆ ಮಾತೃ ಕಂಪನಿಯಾದ ಶಿಯೋಮಿ ಈ ಹಿಂದೆ ಬಿಡುಗಡೆ ಮಾಡಿದ್ದ ರೆಡ್‌ಮಿ ನೋಟ್ 9 ಸ್ಮಾರ್ಟ್‌ಫೋನಲ್ಲಿರುವ ಕೆಲವು ವಿಶೇಷಗಳನ್ನು ಪೊಕೊ M2 ಪ್ರೋ ಸ್ಮಾರ್ಟ್‌ಫೋನಿನಲ್ಲಿಯೂ ಕಾಪಿ ಮಾಡಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಪೊಕೊ M2 ಪ್ರೋ ಸ್ಮಾರ್ಟ್‌ಫೋನಿನ ಮೂರು ಮಾಡಲ್‌ಗಳು ಲಾಂಚ್ ಆಗಿದೆ.  

  • ಬೆಸಿಕ್‌ ಮಾಡಲ್ 4GB RAM ಮತ್ತು 64GB ಸ್ಟೋರೆಜ್‌ನೊಂದಿಗೆ ರೂ. 13999ಕ್ಕೆ ದೊರೆಯಲಿದೆ.
  • ಇನ್ನೊಂದು ಮಾಡಲ್ 6GB RAM ಮತ್ತು 64GB ಸ್ಟೋರೆಜ್‌ ಹೊಂದಿದ್ದು, ರೂ.14999ಕ್ಕೆ ಲಭ್ಯವಿದೆ.
  • ಇದಲ್ಲದೇ 6GB RAM ಮತ್ತು 128GB ಸ್ಟೋರೆಜ್‌ ಹೊಂದಿರುವ ಟಾಪ್ ಎಂಡ್ ಮಾಡಲ್ ಅನ್ನು ರೂ. 16999ಕ್ಕೆ ಖರೀದಿಸಬಹುದು.

ಪೊಕೊ M2 ಪ್ರೋ ಸ್ಮಾರ್ಟ್‌ಫೋನ್ ಔಟ್‌ ಆಫ್ ದಿ ಬ್ಲೂ, ಗ್ರೀನ್ ಮತ್ತು ಗೀನೇರ್ ಹಾಗೂ ಟೂ ಶೇಡ್ಸ್‌ ಆಫ್ ಬ್ಲಾಕ್‌ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರಲಿದೆ. ಈ ಡಿವೈಸ್‌ನ ಮೊದಲ ಸೇಲ್ ಜುಲೈ 14 ರಂದು ಮಧ್ಯಾಹ್ನ 12 ಗಂಟೆಗೆ, ಫ್ಲೀಪ್‌ಕಾರ್ಟ್‌ ಮೂಲಕ ಆರಂಭವಾಗಲಿದೆ.

ಇದುವರೆಗೂ ಶಿಯೋಮಿ ಮತ್ತು ಪೊಕೊ ಲಾಂಚ್ ಮಾಡಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಮೊದಲ ಸೇಲ್‌ನಲ್ಲಿ ಕ್ಷಣಾರ್ಧದಲ್ಲಿ ಮಾರಾಟವಾಗುತ್ತಿತ್ತು. ಬದಲಾದ ಪರಿಸ್ಥಿತಿ ಈ ಸ್ಮಾರ್ಟ್‌ ಫೋನಿನ ಮಾರಾಟದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬದನ್ನು ಮೊದಲ ಸೇಲ್ ನಂತರ ತಿಳಿಯಬಹುದಾಗಿದೆ.

ಪೊಕೊ M2 ಪ್ರೋ ವಿಶೇಷತೆ:

ಪೊಕೊ M2 ಪ್ರೋ ಸ್ಮಾರ್ಟ್‌ಫೋನಿನಲ್ಲಿ 60Hz ರಿಫ್ರೇಶ್ ರೈಟ್ ಹೊಂದಿರುವ 6.7 ಇಂಚಿನ LCD ಡಿಸ್‌ಪ್ಲೇ ಅಳವಡಿಸಲಾಗಿದ್ದು, ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 720G ಪ್ರೋಸರ್‌ ನೊಂದಿಗೆ ಆಡ್ರಿನೋ 618 GPU ನೀಡಲಾಗಿದೆ. MIUI 11 ಹೊದಿಕೆಯೊಂದಿಗೆ ಆಂಡ್ರಾಯ್ಡ್  10 ನಲ್ಲಿ ಕಾರ್ಯನಿರ್ವಹಿಸುವ ಈ ಪೋನ್ , ಮುಂಭಾಗದಲ್ಲಿ ಪಿಂಚ್ ಹೋಲ್ ಸೆಟಪ್‌ನ 16 MP ಸೆಲ್ಪೀ ಕ್ಯಾಮೆರಾ, ಸೈಟ್‌ ಮೌಂಟ್ ಫಿಂಗರ್‌ ಪ್ರಿಂಟ್ ಸ್ಕ್ಯಾನರ್ ಮತ್ತು ಡೆಡಿಕೇಟೆಡ್ ಮೈಕ್ರೊ SD ಕಾರ್ಡ್‌ ಸ್ಲಾಟ್ ವಿಶೇಷತೆಗಳನ್ನು ಒಳಗೊಂಡಿದೆ.  

ಇನ್ನೂ ಪೊಕೊ M2 ಪ್ರೋ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾ (ನಾಲ್ಕು ಕ್ಯಾಮೆರಾ) ಗಳ ಸೆಟಪ್ ಇದ್ದು, 48 MP ಪ್ರಾಥಮಿಕ ಕ್ಯಾಮೆರಾದೊಂದಿಗೆ,  8 MP ಅಲ್ಟ್ರಾ ವೈಡ್ ಆಂಗಲ್,  5 MP  ಮೈಕ್ರೋ ಮತ್ತು  2 MP ಡೇಪ್ತ್ ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ.

ಎಲ್ಲದಕ್ಕಿಂತ ಮುಖ್ಯವಾಗಿ ಈ ಸ್ಮಾರ್ಟ್‌ಫೋನ್ ನಲ್ಲಿ 33W ಫಾಸ್ಟ್‌ ಚಾರ್ಜಿಂಗ್ ಸಫೋರ್ಟ್‌ ಮಾಡುವ 5000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಅಲ್ಲದೇ ಫೋನ್ ಸ್ಫಾಷ್ ಪ್ರೂಫ್ ಆಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.