ಹೊಸ ಬಾಟಲಿಯಲ್ಲಿ ಹಳೆ ಮದ್ಯ: ಭಾರತಕ್ಕೆ ಮರಳಲಿದೆ PUBG Mobile India

ಕಳೆದ ವರ್ಷ ಭಾರತದಲ್ಲಿ ಪಬ್‌ ಜಿ ಸೇರಿದಂತೆ 50ಕ್ಕೂ ಆಪ್‌ಗಳನ್ನು ನಿಷೇಧಿಸಲಾಗಿತ್ತು. ಅತ್ಯಂತ ಜನಪ್ರಿಯವಾದ ಗೇಮ್‌ ಪಬ್‌ಜಿ ಹೊಸ ಅವತಾರದಲ್ಲಿ ಭಾರತಕ್ಕೆ ಮರಳುತ್ತಿದೆ

ಭಾರತದ ಅತ್ಯಂತ ಜನಪ್ರಿಯ ಆನ್‌ಲೈನ್ ಆಟ ಪಬ್‌ಜಿ ಮತ್ತೆ ಮರಳುತ್ತಿದೆ. ಭಾರತ ಸರ್ಕಾರ ಪಬ್‌ಜಿಯನ್ನು ನಿಷೇಧಿಸಿದ ಹಲವು ತಿಂಗಳ ಬಳಿಕ ಈ ಸುದ್ದಿ ಪಬ್‌ಜಿ ಪ್ರಿಯರಿಗೆ ಅತ್ಯಂತ ಸಂತೋಷ ತಂದು ಕೊಟ್ಟಿರುವುದರಲ್ಲಿ ಸಂಶಯವಿಲ್ಲ. ಕಳೆದ ಕೆಲವು ತಿಂಗಳುಗಳ ಹಿಂದೆಯೇ ಮತ್ತೆ ಪಬ್‌ಜಿಯನ್ನು ಲಾಂಚ್ ಮಾಡುವ ಕುರಿತಾಗಿ ಸುಳಿವು ನೀಡಲಾಗಿತ್ತು. ಈಗ ಹೊಸ ಬಾಟಲಿಯಲ್ಲಿ ಹಳೆ ಮದ್ಯ ಎಂಬಂತೆ, ‘Battlegrounds Mobile India’ ಎಂಬ ಹೆಸರಲ್ಲಿ ಭಾರತದಲ್ಲಿ ಲಭ್ಯವಾಗಲಿದೆ.

Gemwire, Krafton ಮತ್ತು PUBG Corp ಅವರ ಹೊಸ ಪೋಸ್ಟರ್ ಈ ಮಾಹಿತಿಯನ್ನು ಬಹಿರಂಗಪಡಿಸಿತ್ತು. ಪಬ್‌ಜಿ ಮೊಬೈಲ್ ಇಂಡಿಯಾ ವೆಬ್‌ಸೈಟ್‌ನ ಸೋರ್ಸ್ ಕೋಡ್‌ಗಳಲ್ಲಿ Gemwire ಈ ಪೋಸ್ಟರ್‌ ಅನ್ನು ಕಂಡುಹಿಡಿದಿತ್ತು. ಈ ಪೋಸ್ಟರ್‌ನಲ್ಲಿ Battlegrounds Mobile India ಹೆಸರಿನೊಂದಿಗೆ ಪಬ್‌ಜಿ ಯ ‘ಮಿರಾಮರ್’ (ಅಥವಾ ಹೊಸ ಕರಾಕಿನ ಮ್ಯಾಪ್) ಮ್ಯಾಪ್ ಚಿತ್ರವಿತ್ತು.

ಈ ಕುರಿತಾಗಿ ಸದ್ಯ ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲ. ಆದರೆ, ಇತ್ತೀಚಿನ ಕೆಲವು ಬೆಳವಣಿಗೆಗಳು ಪಬ್‌ಜಿ ಭಾರತಕ್ಕೆ ಮರಳುವುವ ಕುರಿತು ಆಶಾಭಾವನೆಗಳನ್ನು ಮೂಡಿಸಿವೆ. PUBG India ಸಂಸ್ಥೆಯಲ್ಲಿ ಹೊಸ ಉದ್ಯೋಗಾವಕಾಶಗಳನ್ನು ತೆರೆಯುವ ಕುರಿತು ತನ್ನ LinkedIn ಖಾತೆಯಲ್ಲಿ Krafton ಜಾಹಿರಾತು ಕೂಡಾ ನೀಡಿತ್ತು. ಇನ್ನೊಂದು ಸಂದರ್ಶನದಲ್ಲಿ ಪಬ್‌ಜಿಯ ಹೊಸ ಮಾದರಿಯಾದ PUBG: New State ಅನ್ನು ಲಾಂಚ್ ಮಾಡುವ ಬದಲಿಗೆ PUBG Mobile ಅನ್ನು ಮತ್ತೆ ಲಾಂಚ್ ಮಾಡುವ ಕುರಿತು ಗಮನ ಹರಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿತ್ತು.

ಒಟ್ಟಿನಲ್ಲಿ, ಭಾರತದ ಆನ್‌ಲೈನ್ ಗೇಮಿಂಗ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ಪಬ್‌ಜಿ, ಈಗ ಮತ್ತೆ ಮರಳುತ್ತಿರುವುದಕ್ಕೆ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ‌. ಹೊಸ ಬಾಟಲಿಯಲ್ಲಿ ಮಾರಲಾಗುವ ಹಳೆ ಮದ್ಯದ ಕಿಕ್ಕು ಇನ್ನಷ್ಟು ಹೆಚ್ಚಾಗಿರಲಿದೆ ಎಂಬ ಭಾವನೆ ಪಬ್‌ಜಿ ಪ್ರಿಯರದ್ದು.

ದಕ್ಷಿಣ ಏಷ್ಯಾ ಭಾಗದಲ್ಲಿ ಪಬ್‌ಜಿ ಭಾರಿ ಜನಪ್ರಿಯ ಗೇಮ್‌. ಅದರಲ್ಲೂ, ಭಾರತ ಮತ್ತು ಪಾಕಿಸ್ತಾನದಲ್ಲಿ ಇದು ಜನಪ್ರಿಯತೆಯ ಉತ್ತುಂಗದಲ್ಲಿತ್ತು. ಭಾರತವೊಂದರಲ್ಲಿ ಈ ಗೇಮ್‌ನ ಅಪ್ಲಿಕೇಷನ್‌ ಅನ್ನು 1.75 ಕೋಟಿ ಬಳಸುತ್ತಿದ್ದರು. 2020ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಪಬ್‌ಜಿ ₹9,731 ಲಾಭಗಳಿಸಿದೆ ಎಂದು ಐಎಎನ್‌ಎಸ್‌ ವರದಿ ಮಾಡಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.