PUBG ಬ್ಯಾನ್ ಆದ್ರೆ ಚಿಂತೆ ಬೇಡ: ಇಲ್ಲಿದೆ ಅದೇ ಮಾದರಿಯ ಗೇಮ್‌ಗಳು

PUBG ಮೊಬೈಲ್ ಭಾರತದ ಅತ್ಯಂತ ಜನಪ್ರಿಯ ಗೇಮ್‌ಗಳಲ್ಲಿ ಒಂದಾಗಿದೆ. ಚೀನಾ ಮೂಲದ ಟೆನ್‌ಸೆಂಟ್ ಕಂಪನಿಯ ಮಾಲೀಕತ್ವದ ಈ ಗೇಮ್, ಭಾರತದಲ್ಲಿ ಬ್ಯಾನ್ ಆಗುವ ಸಾಧ್ಯತೆ ಇದೆ. ಇತ್ತೀಚಿನ ವರದಿಗಳ ಪ್ರಕಾರ ಈ ಗೇಮ್ ಸರ್ಕಾರದಿಂದ ಸ್ಕ್ಯಾನರ್ ಅಡಿಯಲ್ಲಿರಬಹುದು ಮತ್ತು ಇದನ್ನು ನಿಷೇಧಿಸಬಹುದೆಂದು ಸುಳಿವು ದೊರೆತಿದೆ.

PUBG Mobile Alternatives You Can Play Right Now

ಇದರಿಂದ ಚಿಂತೆ ಮಾಡುವ ಅಗತ್ಯವಿಲ್ಲ, ನೀವು PUBG ಮೊಬೈಲ್ ಗೇಮ್ ಅಭಿಮಾನಿಯಾಗಿದ್ದರೆ ನಿಮಗೆ ಇದೇ ಮಾದರಿಯ ಹಲವು ಗೇಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳ ಬಗ್ಗೆ ನಿಮಗೆ ಮಾಹಿತಿ ನೀಡುವ ಪ್ರಯತ್ನ ಇದಾಗಿದೆ.

ಕಾಲ್ ಆಫ್ ಡ್ಯೂಟಿ: ಮೊಬೈಲ್ (Call of Duty: Mobile)

ಕಾಲ್ ಆಫ್ ಡ್ಯೂಟಿ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೊಬೈಲ್ ಗೇಮ್ ಅನ್ನು ಪ್ರಾರಂಭಿಸಲಾಯಿತು ಮತ್ತು ಅಂದಿನಿಂದ ಈ ಆಟವು PUBG ಯ ಜನಪ್ರಿಯತೆಗೆ ಸರಿಹೊಂದುವಂತೆ ವೇಗವಾಗಿ ಬೆಳೆದಿದೆ. ಇದು ಬ್ಯಾಟಲ್ ರಾಯಲ್ ಮೋಡ್ ಅನ್ನು ಹೊಂದಿದ್ದು, ವಿಸ್ತಾರವಾದ ನಕ್ಷೆಯನ್ನು ಒಳಗೊಂಡಿದೆ. ಆದರೆ ಇದು PUBG ಮಾದರಿಯಲ್ಲಿ ವಿವಿಧ ನಕ್ಷೆಗಳನ್ನು ಹೊಂದಿಲ್ಲ, ಈ ಆಟವು ಪ್ರತಿ ತಿಂಗಳು ನವೀಕರಿಸಲ್ಪಡುತ್ತದೆ ಮತ್ತು ಹೊಸ ಆಟದ ವಿಧಾನಗಳು ಮತ್ತು ಶಸ್ತ್ರಾಸ್ತ್ರಗಳನ್ನು ನಿರಂತರವಾಗಿ ಸೇರಿಸಲಾಗುತ್ತದೆ.

ಇದು ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಉಚಿತವಾಗಿ ಲಭ್ಯವಿದೆ.

ಫೋರ್ಟ್‌ನೈಟ್ (Fortnite)

ಫೋರ್ಟ್‌ನೈಟ್ ಬಹುಶಃ PUBG ನಂತರ ಮನಸ್ಸಿಗೆ ಬರುವ ಹೆಸರು. ಈ ಆಟದ ಅದ್ಭುತ ಸಂಗತಿಯೆಂದರೆ ಕ್ರಾಸ್ ಪ್ಲಾಟ್‌ಫಾರ್ಮ್ ಕಾರ್ಯವನ್ನು ಬೆಂಬಲಿಸುತ್ತದೆ. ಆದ್ದರಿಂದ ನೀವು ಪಿಸಿ ಮತ್ತು ಕನ್ಸೋಲ್ ಪ್ಲೇಯರ್‌ಗಳ ವಿರುದ್ಧವು ಮೊಬೈಲ್‌ನಲ್ಲಿ ಆಡಬಹುದು. ಆದರೆ ಇದು PUBGಯಲ್ಲಿ ಸಾಧ್ಯವಿಲ್ಲ. ಅಲ್ಲದೇ ಇದು PUBG ಗಿಂತಲೂ ಉತ್ತಮವಾದ ಆಟವಾಗಿದ್ದು, ಬೇರೆಯೇ ಮಾದರಿಯಲ್ಲಿ ಮಜಾ ನೀಡಲಿದೆ.

ಇದು ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಉಚಿತವಾಗಿ ಲಭ್ಯವಿದೆ.

ಗರೆನಾ ಫ್ರೀ ಫೈರ್ (Garena Free Fire)

ಇದು ಸಹ ಸ್ಮಾರ್ಟ್ಫೋನ್ ಬ್ಯಾಟಲ್ ರಾಯಲ್‌ಗಳಲ್ಲಿ ಒಂದಾಗಿದೆ. 100 ಮಿಲಿಯನ್ ಡೌನ್‌ಲೋಡ್‌ಗಳ ಹೊರತಾಗಿಯೂ, ಈ ಆಟವು ಅಷ್ಟು ಹೆಸರು ಪಡೆದುಕೊಂಡಿಲ್ಲ, ಆದರೆ ನೀವು PUBG ಯಿಂದ ಇದಕ್ಕೆ ಬರುತ್ತಿದ್ದರೆ ನಿಮಗೆ ಹೆಚ್ಚಿನ ಅಂಶಗಳು ಬದಲಾಗಿದೆ ಎಂದು ಅನ್ನಿಸುವುದಿಲ್ಲ. ಇಲ್ಲಿ ಒಂದು ಬ್ಯಾಟಲ್ ರಾಯಲ್  ಅವಧಿಯು 10 ನಿಮಿಷಗಳು ಮತ್ತು 50 ಜನರು ಭಾಗವಹಿಸಬಹುದು.

ಇದು ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಉಚಿತವಾಗಿ ಲಭ್ಯವಿದೆ.

PUBG Mobile Alternatives You Can Play Right Now

ಬ್ಯಾಟಲ್ ಲ್ಯಾಂಡ್ಸ್ ರಾಯಲ್ (Battlelands Royale)

ಬ್ಯಾಟಲ್ ಲ್ಯಾಂಡ್ಸ್ ರಾಯಲ್ ಎಲ್ಲದಕ್ಕಿಂತ ಸ್ವಲ್ಪ ಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಇದರ ರಚನೆಯೂ ಬಹಳ ಅದ್ಬುತವಾಗಿದೆ. ಒಂದು ಪಂದ್ಯದಲ್ಲಿ ಕೇವಲ 32 ಆಟಗಾರರು ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇದು ಸರಳವಾಗಿದ್ದು, ಉತ್ತಮ ಮನರಂಜನೆಯನ್ನು ನೀಡಲಿದೆ.

ಇದು ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಉಚಿತವಾಗಿ ಲಭ್ಯವಿದೆ.

ಬಟರ್ ರಾಯಲ್ (Butter Royale)

ಈ ಆಟವು ಮಕ್ಕಳು ಮತ್ತು ವಯಸ್ಕರಿಗೆ ಸಮಾನವಾಗಿದೆ. ಯಾವುದೇ ರಕ್ತಪಾತವನ್ನು ಹೊಂದಿಲ್ಲ. ಆಟವು ನಂಬಲಾಗದಷ್ಟು ವರ್ಣಮಯವಾಗಿದೆ ಮತ್ತು ಇದನ್ನು ಆಡಲು ನಿಮಗೆ ಆಪಲ್ ಆರ್ಕೇಡ್ ಚಂದಾದಾರಿಕೆ ಅಗತ್ಯವಿರುತ್ತದೆ. ಈ ಆಟವು ಐಒಎಸ್‌ಗೆ ಮಾತ್ರ ಲಭ್ಯವಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.