ಇತಿಹಾಸ ಬದಲಿಸಿದ ಸ್ನಾಪ್‌ಡ್ರಾಗನ್ 865+: 5G ಜೊತೆಗೆ 3GHz ವೇಗವನ್ನು ಕ್ರಾಸ್ ಮಾಡಿದ ಮೊದಲ SoC

ಸ್ಮಾರ್ಟ್‌ಫೋನ್‌ ಪ್ರೋಸೆಸರ್‌ಗಳಲ್ಲಿ ಮೇಲುಗೈ ಸಾಧಿಸಿರುವ ಕ್ವಾಲ್ಕಮ್, ಮಾರುಕಟ್ಟೆಗೆ ಮತ್ತೊಂದು ವೇಗದ ಪ್ರೋಸೆಸರ್ ಅನ್ನು ಪರಿಚಯಿಸಿದೆ. ಸಂಪೂರ್ಣ 5G ಸೇವೆಗೆ ಸಪೋರ್ಟ್‌ ಮಾಡುವ ಹೊಸ ಚಿಪ್‌ಸೆಟ್‌ ಪ್ರೀಮಿಯಮ್‌ ಸ್ಮಾರ್ಟ್‌ಫೋನ್‌ಗಳ ವೇಗ ಮತ್ತು ಕಾರ್ಯಚರಣೆಯನ್ನು ಸುಧಾರಿಸುವಲ್ಲಿ ಸಾಕಷ್ಟು ಸಹಾಯ ಮಾಡಲಿದೆ.  

ಈಗಾಗಲೇ ಮಾರುಕಟ್ಟೆಯಲ್ಲಿ ವೇಗದ ಪ್ರೋಸೆಸರ್ ಎನ್ನುವ ಖ್ಯಾತಿಯನ್ನು ಪಡೆದಿರುವ ಸ್ನಾಪ್‌ಡ್ರಾಗನ್ 865 ಚಿಪ್‌ಸೆಟ್ ಅನ್ನು ಕ್ವಾಲ್ಕಮ್ ಅಪ್‌ಗ್ರೇಡ್ ಮಾಡಿದ್ದು, ಇದಕ್ಕೆ ಹೊಸದಾಗಿ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 865 + ಎಂದು ಹೆಸರಿಟ್ಟಿದೆ. ಪ್ರೀಮಿಯಮ್ ಸೆಗ್ಮೆಂಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಪ್ರೋಸೆಸರ್ ಕಾಣಿಸಿಕೊಳ್ಳಲಿದೆ.

ಹೊಸ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ ಉತ್ತಮ ವೇಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದ್ದು, ಎಲೈಟ್ ಗೇಮಿಂಗ್ ಅನುಭವನ್ನು ನೀಡಲಿದೆ. ನಿಜವಾದ ಜಾಗತಿಕ 5G ಅನುಭವನ್ನು ಇದರಲ್ಲಿ ಪಡೆಯಬಹುದಾಗಿದೆ. ಅಲ್ಲದೇ ಹೆಚ್ಚಿನ ಕಾರ್ಯಕ್ಷಮತೆಯ AI ಬಳಕೆಗೆ ಸಹಾಯವಾಗುವಂತೆ ಡಿಸೈನ್ ಮಾಡಲಾಗಿದೆ.

ಓದಿರಿ: ಮಾರ್ಡನ್‌ ವಿಶ್ಮಿವಾಮಿತ್ರರಿಂದ ಸೃಷ್ಠಿಯಾಗುತ್ತಿದೆ ‘ಟಾವರ್ಸ್’ ಎಂಬ ಮೆಟಾವರ್ಸ್‌ ಮಾಯಾ ಲೋಕ..!!

ಸ್ನಾಪ್‌ಡ್ರಾಗನ್ 865+ಚಿಪ್‌ಸೆಟ್‌ 3GHz ವೇಗದ ಮಿತಿಯನ್ನು ದಾಟಿದ ಮೊದಲ ಪ್ರೋಸೆಸರ್ ಆಗಲಿದೆ. ಇದರಲ್ಲಿ ಬಳಸಲಾದ ಕ್ರಯೋ 585 ಆರ್ಟಿಕಲ್ ARM ನಿಂದಾಗಿ ಪ್ರೋಸೆಸರ್ 3.1GHz ವೇಗದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿದೆ.

ಚಿಪ್‌ಸೆಟ್ ಹಲವಾರು ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು ಇದರಲ್ಲಿ 5G ಸಂಪರ್ಕಕ್ಕಾಗಿ X55 5G ಮೋಡೆಮ್- RF ಸಿಸ್ಟಮ್ ಅಳವಡಿಸಲಾಗಿದೆ. ಕ್ವಾಲ್ಕಾಮ್‌ನ 5 ನೇ ತಲೆಮಾರಿನ ಸುಧಾರಿತ AI ಎಂಜಿನ್ ನೀಡಲಾಗಿದ್ದು, ಇದು ಕ್ಯಾಮೆರಾ, ಆಡಿಯೋ ಮತ್ತು ಗೇಮಿಂಗ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದೆ. ಸ್ನಾಪ್‌ಡ್ರಾಗನ್‌ನ ಎಲೈಟ್ ಗೇಮಿಂಗ್ ಪ್ರೀಮಿಯಂ ವೈಶಿಷ್ಟ್ಯ ದೊಂದಿಗೆ ಅಪ್‌ಡೇಟ್ ಮಾಡಬಹುದಾದ GPU ಡ್ರೈವರ್‌ಗಳು ಮತ್ತು 10-ಬಿಟ್ ಎಚ್‌ಡಿಆರ್ ಜೊತೆಗೆ 144Hz ರಿಫ್ರೆಶ್ ದರದ ಡಿಸ್‌ಪ್ಲೇ ಸಪೋರ್ಟ್ ಮಾಡಲಿದೆ.

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಯಾವುದೇ ಚಿಂತೆ ಮಾಡುವಂತಿಲ್ಲ, ಈ ಚಿಪ್‌ಸೆಟ್ ಸ್ನಾಪ್‌ಡ್ರಾಗನ್ 865 ಗಿಂತಲೂ ಶೇಕಡಾ 10 ರಷ್ಟು ಹೆಚ್ಚು ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ವೇಗದ ಗ್ರಾಫಿಕ್ಸ್ ಸೇವೆಗಾಗಿ ಅಡ್ರಿನೊ 650 GPU ಅನ್ನು ಹೊಂದಿದೆ. ವೇಗದ ವೈಫೈ ಗಾಗಿ ಫಾಸ್ಟ್‌ ಕನೆಕ್ಟ್ 6900 ನೀಡಿದ್ದು, ಇದರಿಂದಾಗಿ 3.6Gbps ವೇಗದಲ್ಲಿ ವೈಫ್ಟ್‌ ಕನೆಕ್ಟ್‌ ಆಗಲಿದೆ.

2020ರ ಮೂರನೇ ತ್ರೈಮಾಸಿಕದಲ್ಲಿ ಈ ಪ್ರೊಸೆಸರ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ಕ್ವಾಲ್ಕಾಮ್ ತಿಳಿಸಿದೆ. ಆಸುಸ್ ROG ಫೋನ್ 3 ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865+ ನೊಂದಿಗೆ ಮಾರುಕಟ್ಟೆಗೆ ಬರುವ ಮೊದಲ ಸ್ಮಾರ್ಟ್‌ಫೋನ್‌ ಆಗಲಿದೆ. ಈ ಫೋನ್ ಜುಲೈ 22 ರಂದು ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.