ಕ್ವಾಲ್ಕಾಮ್ ತಪ್ಪಿನಿಂದ ನಾವು-ನೀವು ಸೇರಿದಂತೆ ಮೂರು ಬಿಲಿಯನ್ ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ..!

ಕ್ವಾಲ್ಕಾಮ್‌ನ ಚಿಪ್‌ನಲ್ಲಿನ ಭದ್ರತಾ ನ್ಯೂನತೆಗಳು ಶತಕೋಟಿ ಆಂಡ್ರಾಯ್ಡ್ ಬಳಕೆದಾರರನ್ನು ಅಪಾಯಕ್ಕೆ ದೂಡಿದೆ.

ಗೂಗಲ್, ಸ್ಯಾಮ್‌ಸಂಗ್, ಎಲ್‌ಜಿ, ಶಿಯೋಮಿ ಸೇರಿದಂತೆ ಜಾಗತಿಕವಾಗಿ ಶೇ 40 ಕ್ಕಿಂತ ಹೆಚ್ಚು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್ ಚಿಪ್‌ಸೆಟ್‌ಗಳನ್ನು ಬಳಸುತ್ತವೆ. ಚೆಕ್‌ ಪಾಯಿಂಟ್‌ನ ಭದ್ರತಾ ಸಂಶೋಧಕರು ಕ್ವಾಲ್ಕಾಮ್‌ನ ಚಿಪ್‌ನ 400 ಕ್ಕೂ ಹೆಚ್ಚು ದೋಷಗಳನ್ನು ಕಂಡುಹಿಡಿದಿದ್ದಾರೆ.

ಕ್ವಾಲ್ಕಾಮ್ ಚಿಪ್‌ಸೆಟ್‌ ದುರ್ಬಲತೆಗಳು ಜಾಗತಿಕವಾಗಿ ಮೂರು ಬಿಲಿಯನ್ ಹೆಚ್ಚು ಆಂಡ್ರಾಯ್ಡ್ ಬಳಕೆದಾರರನ್ನು ಅಪಾಯಕ್ಕೆ ಸಿಲುಕಿಸಿವೆ ಎಂದು ವರದಿಯಾಗಿದ್ದು, ಕ್ವಾಲ್ಕಾಮ್‌ನ ಡಿಜಿಟಲ್ ಸಿಗ್ನಲ್ ಪ್ರೊಸೆಸರ್ (DPS ) ಚಿಪ್‌ಗಳಲ್ಲಿ ಭದ್ರತಾ ನ್ಯೂನತೆಗಳು ಕಂಡುಬಂದಿವೆ.

ಇದನ್ನು ಓದಿರಿ: ಭಾರತೀಯ ಮನವೊಲಿಕೆ ಮುಂದಾದ ಶಿಯೋಮಿ: ‘ಬ್ಯಾನ್ ಆಪ್‌ಗಳನ್ನು ತಾನು ಬಳಸುವುದಿಲ್ಲ’

ಕ್ವಾಲ್ಕಮ್ ಚಿಪ್‌ನಲ್ಲಿರುವ DPS, ತ್ವರಿತ ಚಾರ್ಜ್, ವಿಡಿಯೋ, HD ಕ್ಯಾಪ್ಚರ್, ಸುಧಾರಿತ AR ಸಾಮರ್ಥ್ಯಗಳು ಮತ್ತು ಆಡಿಯೊ ಸೇರಿದಂತೆ ಸಾಧನದಲ್ಲಿನ ಪ್ರತಿಯೊಂದು ವ್ಯವಸ್ಥೆಯ ಸೇವೆಯನ್ನು ಅತ್ಯುತ್ತಮವಾಗಿಸಲು ಮತ್ತು ಸಕ್ರಿಯಗೊಳಿಸಲು ವಿನ್ಯಾಸಗೊಳಿಸಲಾದ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಹೊಂದಿರುವ  ಒಂದು ವ್ಯವಸ್ಥೆಯಾಗಿದೆ.

DPS ಚಿಪ್ ಅನ್ನು ಪರೀಕ್ಷಿಸಿದ ಚೆಕ್‌ಪಾಯಿಂಟ್ ಸಂಶೋಧಕರು, ಈ ನ್ಯೂನತೆಗಳು ಬಳಕೆದಾರರ ಅನುಮತಿ ಇಲ್ಲದೇ ಯಾವುದೇ ಸ್ಮಾರ್ಟ್‌ಫೋನ್ ಅನ್ನು ಬೇಹುಗಾರಿಕೆ ಸಾಧನವಾಗಿ ಪರಿವರ್ತಿಸಲು ಹ್ಯಾಕರ್‌ಗಳಿಗೆ ಅವಕಾಶ ನೀಡುತ್ತದೆ ಎಂದು ತಿಳಿಸಿದ್ದಾರೆ.

ಹೆಚ್ಚುವರಿಯಾಗಿ, ಫೋಟೋಗಳು, ವೀಡಿಯೊಗಳು, ಕರೆ ರೆಕಾರ್ಡಿಂಗ್, ನೈಜ-ಸಮಯದ ಮೈಕ್ರೊಫೋನ್ ಡೇಟಾ, ಜಿಪಿಎಸ್ ಮತ್ತು ಲೋಕೆಷನ್ ಡೇಟಾ ಸೇರಿದಂತೆ ಬಳಕೆದಾರರ ಎಲ್ಲಾ ಡೇಟಾಗಳಿಗೂ ಹ್ಯಾಕರ್ಸ್ ಪ್ರವೇಶಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಈ ವಿಷಯವನ್ನು ಕ್ವಾಲ್ಕಾಮ್‌ಗೆ ತಿಳಿಸಲಾಗಿದ್ದು, ಕಂಪನಿ ಅದನ್ನು ಒಪ್ಪಿಕೊಂಡಿದೆ ಮತ್ತು ಈ ಕುರಿತು ಹೇಳಿಯೊಂದನ್ನು ನೀಡಿದ್ದು,  “ಚೆಕ್ ಪಾಯಿಂಟ್ ಬಹಿರಂಗಪಡಿಸಿದ ಕ್ವಾಲ್ಕಾಮ್ ಕಂಪ್ಯೂಟ್ DPS ದುರ್ಬಲತೆಗೆ ಸಂಬಂಧಿಸಿದಂತೆ, ನಾವು ಸಮಸ್ಯೆಯನ್ನು ಪರಿಹರಿಸಲು ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ” ಎಂದಿದೆ.

ಪ್ರಸ್ತುತ ದುರ್ಬಲತೆಯನ್ನು ಬೇರೆಯವರು ಬಳಸಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಬಳಕೆದಾರರು ಪ್ಯಾಚ್‌ಗಳು ಲಭ್ಯವಾಗುತ್ತಿದ್ದಂತೆ ತಮ್ಮ ಸಾಧನಗಳನ್ನು ನವೀಕರಿಸಲು ಮತ್ತು ಗೂಗಲ್ ಪ್ಲೇ ಸ್ಟೋರ್‌ನಂತಹ ವಿಶ್ವಾಸಾರ್ಹ ಸ್ಥಳಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಮನವಿ ಮಾಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.