ಕೇವಲ 15 ನಿಮಿಷದಲ್ಲಿ ಫುಲ್ ಬ್ಯಾಟರಿ ಚಾರ್ಜ್ ಮಾಡುವ ಹೊಸ ತಂತ್ರಜ್ಞಾನ!

ಕ್ವಾಲ್ಕಾಮ್ ಇತ್ತೀಚೆಗೆ ಕಂಪನಿಯ ಮುಂದಿನ ಪೀಳಿಗೆಯ ಚಾರ್ಜಿಂಗ್ ಮಾನದಂಡವಾದ ಕ್ವಿಕ್ ಚಾರ್ಜ್ 5 ಅನ್ನು ಘೋಷಿಸಿತು. ಕ್ವಿಕ್ ಚಾರ್ಜ್ 5 ಇತ್ತೀಚೆಗೆ iQOO, ರಿಯಲ್ ಮಿ ಮತ್ತು ಒಪ್ಪೊ ಸೇರಿದಂತೆ ಚೀನೀ ಬ್ರ್ಯಾಂಡ್‌ಗಳು ಪರಿಚಯಿಸಿದ ಸೂಪರ್-ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಗಿಂತಲೂ ಉತ್ತಮವಾದ ಸೇವೆಯನ್ನು ನೀಡುವ ಗುರಿ ಹೊಂದಿದೆ.

ಕ್ವಾಲ್ಕಾಮ್‌ನ ಹೊಸ ಕ್ವಿಕ್ ಚಾರ್ಜ್ 5 ತಂತ್ರಜ್ಞಾನವು ಕೆಲವೇ ನಿಮಿಷಗಳಲ್ಲಿ ಮೊಬೈಲ್‌ಗಳಿಗೆ ಹೆಚ್ಚಿನ ಶಕ್ತಿ ನೀಡುತ್ತದೆ. ಇದು ಹಿಂದಿನ ಕ್ವಿಕ್ ಚಾರ್ಜ್ 4 ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆಪ್‌ಡೇಟ್ ಆಗಿದ್ದು, ಬ್ಯಾಟರಿಯನ್ನು 10 ಡಿಗ್ರಿ ಸೆಲ್ಸಿಯಸ್ ತಂಪಾಗಿಟ್ಟು 100 ವ್ಯಾಟ್‌ಗಳಿಗಿಂತ ಹೆಚ್ಚಿನ ಚಾರ್ಜಿಂಗ್ ವೇಗವನ್ನು ನೀಡುತ್ತದೆ.

ಕ್ವಿಕ್ ಚಾರ್ಜ್ 5 ಮುಂದಿನ ಕೆಲವು ತಿಂಗಳುಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.

ಕ್ವಾಲ್ಕಾಮ್‌ ತನ್ನ ಪರೀಕ್ಷೆಯಲ್ಲಿ, ಹೊಸ ಚಾರ್ಜಿಂಗ್ ವ್ಯವಸ್ಥೆಯೂ ಕೇವಲ ಐದು ನಿಮಿಷಗಳಲ್ಲಿ 4,500 mAh ಸಾಮಾರ್ಥ್ಯದ ಬ್ಯಾಟರಿಯನ್ನು 0 ರಿಂದ 50 ಪ್ರತಿಶತದವರೆಗೆ ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಸುಮಾರು 15 ನಿಮಿಷಗಳಲ್ಲಿ ಪೂರ್ಣ ಪ್ರಮಾಣದ ಬ್ಯಾಟರಿಯನ್ನು ಚಾರ್ಜ್ ಮಾಡುವ ಶಕ್ತಿಯನ್ನು ಈ ಹೊಸ ವ್ಯವಸ್ಥೆ ಹೊಂದಿರಲಿದೆ.

ಕ್ವಿಕ್ ಚಾರ್ಜ್ 5 ಹಿಂದಿನ ಆವೃತ್ತಿಗಿಂತಳು ಶೇ.70 ಪ್ರತಿಶತ ಹೆಚ್ಚು ಪರಿಣಾಮಕಾರಿ ಎಂದು ಕ್ವಾಲ್ಕಾಮ್ ಹೇಳಿಕೊಂಡಿದೆ. ಹೆಚ್ಚುವರಿಯಾಗಿ ಕ್ವಿಕ್ ಚಾರ್ಜ್ 2 ಮತ್ತು ಇತ್ತೀಚಿನ ಕ್ವಿಕ್ ಚಾರ್ಜ್ ಬಳಕೆ ಮಾಡುತ್ತಿರುವ ಸಾಧನಗಳಿಗೆ ಕ್ವಿಕ್ ಚಾರ್ಜ್ 5.0 ಹೊಂದಿಕೆಯಾಗಲಿದೆ ಈ ಹೊಸ ಸೇವೆ.

ಕ್ವಾಲ್ಕಾಮ್‌ನ ಹೊಸ ಚಾರ್ಜಿಂಗ್ ಮಾನದಂಡವನ್ನು ಸ್ನಾಪ್‌ಡ್ರಾಗನ್ 865 ಮತ್ತು ಸ್ನಾಪ್‌ಡ್ರಾಗನ್ 865 ಪ್ಲಸ್ ಬೆಂಬಲಿಸುತ್ತದೆ. ಆದಾಗ್ಯೂ, ಇದರ ಲಾಭವನ್ನು ಪಡೆದುಕೊಳ್ಳುವ ಮೊದಲು OEM ಗಳು ತಮ್ಮ ಹ್ಯಾಂಡ್‌ಸೆಟ್‌ಗಳಲ್ಲಿ ತಂತ್ರಜ್ಞಾನವನ್ನು ಕಾರ್ಯಗತಗೊಳಿಸಬೇಕಾಗುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.